ಹೊಸಕೋಟೆ : ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಇರುವ ಆರೋಗ್ಯ ಸೇವೆಗಳನ್ನು ಉಚಿತವಾಗಿ ಬಡ ಮಧ್ಯಮ ವರ್ಗದವರಿಗೆ ಒದಗಿಸುವ ಗುರಿಯನ್ನು ಇಟ್ಟುಕೊಂಡು ರೋಟರಿ ಅವಿರತ ಶ್ರಮಿಸುತ್ತಿದೆ ಎಂದು ರೋಟರಿ ಕೋಲಾರ ವಲಯ ಮೇಲ್ವಿಚಾರಕ ಡಿ.ಎಸ್ ರಾಜ್‌ಕುಮಾರ್ ತಿಳಿಸಿದರು.
ನಗರದ ಜಿಕೆಬಿಎಂಎಸ್ ಶಾಲೆಯ ಆವರಣದಲ್ಲಿ ಬೆಂಗಳೂರು ಗ್ಯಾಸ್ಟ್ರೊ ಸೆಂಟರ್ ಆಸ್ಪತ್ರೆಗಳು, ರೋಟರಿ ಕಬ್ಬನ್ ಪಾರ್ಕ್ ಮತ್ತು ಸೆಂಟ್ರಲ್ ಹೊಸಕೋಟೆ ರೋಟರಿ ಇವರ ಸಹಯೋಗದಲ್ಲಿ ನಡೆದ ಉಚಿತ ಗ್ಯಾಸ್ಟಿçಕ್ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಆರೋಗ್ಯ ಸೇವೆ ಎನ್ನುವುದು ವ್ಯಾಪಾರೀಕರಣ ಆಗಿರುವ ನಡುವೆ ಹಲವಾರು ರೋಗಗಳಿಗೆ ಬಡವರು ಚಿಕಿತ್ಸೆ ಪಡೆದುಕೊಳ್ಳಲು ಸಾವಿರಾರು ರೂಗಳ ಹಣವನ್ನು ಖರ್ಚು ಮಾಡಬೇಕಿದೆ. ಇದರ ನಡುವೆ ರೋಟರಿ ಮಾಡುವ ಹಲವಾರು ಸೇವಾ ಕಾರ್ಯಗಳ ಪೈಕಿ ಉಚಿತ ಆರೋಗ್ಯ ಸೇವೆ ಒದಗಿಸುವುದು ಒಂದಾಗಿದೆ. ಇದರಡಿಯಲ್ಲಿ ಕಳೆದ ಭಾರಿ ಮೂರ್ಚೆ ರೋಗದ ಶಿಬಿರ ಆಯೋಜನೆ ಮಾಡಲಾಗಿ ಉತ್ತಮ ಸ್ಪಂದನೆ ದೊರೆತು, ಈಗ ಗ್ಯಾಸ್ಟಿçಕ್ ಸಮಸ್ಯೆಗೆ ಪರಿಹಾರ ಕೊಡಲು ಉಚಿತ ಶಿಬಿರ ಮಾಡಿ ೨೫೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸಿ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂದರು.
ಹಿರಿಯ ಗ್ಯಾಸ್ಟ್ರೊ ಎಂಟರಲಾಜಿಸ್ಟ್ ಡಾ.ಯೋಗಾನಂದರೆಡ್ಡಿ ಮಾತನಾಡಿ, ರಾಜ್ಯದಲ್ಲೇ ಮೊದಲ ಮತ್ತು ದೇಶದಲ್ಲೇ ೩ನೇ ದೊಡ್ಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಾದರಿ ಯ ಗ್ಯಾಸ್ಟ್ರೊ ಎಂಟರಾಲಾಜಿ ಅನ್ ವಿಲ್ಸ್ ವಾಹನದಲ್ಲಿ ಎಂಡೋಸ್ಕೋಪಿ, ಜಠರ, ಕರಳು ಪರೀಕ್ಷೆ ಎಪಟೈಟಿಸಿ ಬಿ ಮತ್ತು ಸಿ ವೈರಸ್, ಲಿವರ್ ಸ್ಕಾನ್, ಪೌಷ್ಟಿಕಾಂಶ ತಪಾಸಣೆಯನ್ನು ಉಚಿತವಾಗಿ ಮಾಡಲಾಗಿದೆ. ಅಲ್ಸರ್, ಪ್ಯಾಟಿಲಿವರ್, ಕ್ಯಾನ್ಸರ್ ಮೊದಲಾದ ಕಾಯಿಲೆಗಳಿದ್ದ ಸಂದರ್ಭದಲ್ಲೂ ಗ್ಯಾಸ್ಟಿಕ್ ಇರುತ್ತೆ ಎಂಬುದು ಜನರಿಗೆ ಗೊತ್ತಾಗುತ್ತಿಲ್ಲ. ಇದರಿಂದ ಎಷ್ಟೋ ಬಾರಿ ಆರಂಭಿಕ ಹಂತದಲ್ಲೇ ಚಿಕಿತ್ಸೆ ಮೂಲಕ ಗುಣಪಡಿಸಬಹುದಾಗಿದೆ. ಈ ರೀತಿಯ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ಮತ್ತಷ್ಟು ಆಯೋಜನೆ ಮಾಡಲಾಗುವುದು ಎಂದರು.
ಹೊಸಕೋಟೆ ರೋಟರಿ ಅಧ್ಯಕ್ಷ ಸುಬ್ರಮಣಿ, ಕಾರ್ಯದರ್ಶಿ ಬಚ್ಚಣ್ಣ, ರೋಟರಿ ಕಬ್ಬನ್ ಪಾರ್ಕ್ ಅಧ್ಯಕ್ಷ ರಾಯ್, ವೈದ್ಯಾಧಿಕಾರಿಗಳಾದ ಶೈಲಜಾರೆಡ್ಡಿ, ಡಾ.ಶ್ಯಾಮಲಾ, ಡಾ.ವಿದ್ಯಾರಾಣಿ, ಡಾ.ಉಮಾವೆಂಕಟೇಶ್, ಡಾ.ವರದರಾಜು, ಡಾ.ಹರೀಶ್, ಡಾ.ಚಿನ್ಮಯ್ ಸೇರಿದಂತೆ ರೋಟರಿ ಪದಾಧಿಕಾರಿಗಳು ಹಾಜರಿದ್ದರು.

