Home Uncategorizedಪೋಷಕರ ಸಾಧನೆಯನ್ನು ಮಕ್ಕಳು ಮೀರಿಸಬೇಕು : ಶರತ್ ಬಚ್ಚೇಗೌಡ

ಪೋಷಕರ ಸಾಧನೆಯನ್ನು ಮಕ್ಕಳು ಮೀರಿಸಬೇಕು : ಶರತ್ ಬಚ್ಚೇಗೌಡ

ಬಮೂಲ್ ಶಿಬಿರ ಕಚೇರಿಯಲ್ಲಿ 290 ಪ್ರತಿಭಾವಂತರಿಗೆ ಪುರಸ್ಕಾರ ಕಾರ್ಯಕ್ರಮ

by Editor

ಹೊಸಕೋಟೆ : (april-23)

ಪೋಷಕರು ಮಾಡಿರುವ ಸಾಧನೆಗಿಂತ ಹೆಚ್ಚಿನ ಸಾಧನೆಯನ್ನು ಮಕ್ಕಳು ಸಾಧಿಸಿದಾಗ ಪೋಷಕರು ಹೆಚ್ಚು ಹೆಮ್ಮೆ ಪಡುತ್ತಾರೆ.ಇಂಥ ಸಾಧನೆಯ ಗುರಿಯತ್ತ ನಾವೆಲ್ಲ ಮುನ್ನುಗಬೇಕು ಎಂದು ಶಾಸಕ ಶರತ್ ಬಚ್ಚೇಗೌಡರು ಹೇಳಿದರು

ತಾಲೂಕಿನ ಕಸಬಾ ಹೋಬಳಿಯ ಚಿಕ್ಕ ಹುಲ್ಲೂರು ಬಳಿ ಇರುವ ಬಮುಲ್ ಹೊಸಕೋಟೆ ಶಿಬಿರ ಕಚೇರಿಯಲ್ಲಿ ಹಾಲು ಉತ್ಪಾದಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿ ಮಾತನಾಡಿದರು.

ರಾಜ್ಯ ರಾಜಕಾರಣದಲ್ಲಿ ಬಿ.ಎನ್ ಬಚ್ಚೇಗೌಡರು ಮಾಡಿರುವ ಸಾಧನೆಯನ್ನು ಮೀರಿ ನಾನು ಸಾಧನೆ ಮಾಡಬೇಕು ಎಂಬ ಕನಸಿದೆ.ಆ ಸಾಧನೆಯನ್ನು ದಾಟಿದಾಗ ಪ್ರತಿಯೊಬ್ಬ ಪೋಷಕರು ನಾನು ಮಾಡಿದ ಸಾಧನೆಗಿಂತ ನನ್ನ ಮಕ್ಕಳು ಹೆಚ್ಚಿನ ಸಾಧನೆಯನ್ನು ಸಮಾಜಕ್ಕೆ ಮಾಡಿದ್ದಾರೆ ಎಂದು ಖುಷಿ ಪಡುತ್ತಾರೆ. ಈ ರೀತಿಯ ಗುರಿ ಸಾಧಿಸಿ ಪೋಷಕರ ಹೆಮ್ಮೆಗೆ ಕಾರಣರಾಗಬೇಕು. ಹೊಸಕೋಟೆ ತಾಲೂಕಿನಲ್ಲಿ ಈ ಭಾರಿ ೩೦೦ ಮಕ್ಕಳಿಗೆ ೧೦.೫ಲಕ್ಷ ರೂಗಳಷ್ಟು ಪ್ರತಿಭಾ ಪುರಸ್ಕಾರವನ್ನು ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ನೀಡಲಾಗುತ್ತಿದೆ. ಬಮುಲ್ ೬೦ ಕೋಟಿಯಷ್ಟು ಲಾಭ ಗಳಿಸುವ ಮೂಲಕ ಈ ಭಾರಿ ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡಿದ್ದು, ಹೊಸಕೋಟೆ ಕ್ಷೇತ್ರದಿಂದ ಬಿ.ವಿ ಸತೀಶ್‌ಗೌಡರು ಬಮುಲ್ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಹೈನೋಧ್ಯಮಕ್ಕೆ ಮತ್ತಷ್ಟು ಚೈತನ್ಯ ತುಂಬಿದ್ದಾರೆ.  ಬಮೂಲ್ ತನ್ನ ಲಾಭಾಂಶವನ್ನು ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಉತ್ಪಾದಕರನ್ನು ಸಹ ಪ್ರೋತ್ಸಾಹಿಸಿ ಹೈನುಗಾರಿಕೆಗೆ ಉತ್ತೇಜನ ನೀಡುತ್ತಿದ್ದು, ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವಲ್ಲಿ ಹೊಸಕೋಟೆ ತಾಲೂಕು ಮುಂಚೂಣಿಯಲ್ಲಿರುವುದು ನಮ್ಮ ತಾಲೂಕಿಗೆ ಸಂದ ಗೌರವವಾಗಿದೆ. ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ನಿಷ್ಠೆ, ಪ್ರಾಮಾಣಿಕತೆ ನೈತಿಕತೆ ಹಾಗೂ ಶ್ರದ್ಧೆ ಭಕ್ತಿಯನ್ನ ಬೆಳೆಸಿಕೊಳ್ಳಬೇಕು. ಕೌಶಲ್ಯ ಆಧಾರಿತ ಶಿಕ್ಷಣವನ್ನು ಪಡೆಯುವ ಮೂಲಕ ನಮ್ಮ ತಾಲೂಕಿನ ಮಕ್ಕಳು ವಿಶ್ವಕ್ಕೆ ದೊಡ್ಡ ಸಾಧಕರಾಗಬೇಕು ಎಂದರು.

ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡ ಮಾತನಾಡಿ,  ಹೈನುಸಾಕಾಣಿಕೆದಾರರ ಅಭಿವೃದ್ಫಿಗೆ ಬದ್ದವಾಗಿ ಬಮುಲ್ ಕೆಲಸ ಮಾಡುತ್ತಿದ್ದು. ಡಿಕೆ ಸುರೇಶ್ ಅವರ ನೇತೃತ್ವದಲ್ಲಿ ಬಮೂಲ್ ತನ್ನ ಕಾರ್ಯಕ್ಷೇತ್ರವನ್ನು ಎಲ್ಲಾ ರೀತಿಯಲ್ಲೂ ವಿಸ್ತಾರ ಮಾಡುತ್ತಿದೆ. ಇದರ ಪರಿಣಾಮವಾಗಿ ವಹಿವಾಟನ್ನು ಕೇವಲ ೯ ತಿಂಗಳಿನಲ್ಲಿ  ೨೯೦೬ ಕೋಟಿಯಿಂದ  ೩೪೦೦  ಕೋಟಿಗೆ ಹೆಚ್ಚಳ ಮಾಡಿಕೊಂಡು  ೬೦ ಕೋಟಿ ರೂಗಳ ಪ್ರೋತ್ಸಾಹ ಧನವನ್ನು ಉತ್ಪಾದಕರಿಗೆ ನೀಡುತಿದ್ದೇವೆ ಎಂದರು.

ರಾಜ್ಯ ಒಕ್ಕಲಿಗರ ಸಂಘ ಮಾಜಿ ನಿರ್ದೇಶಕ ಬಿ.ಎನ್ ಗೋಪಾಲಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣಮೂರ್ತಿ,ಬಮೂಲ್ ನಿರ್ದೇಶಕ ಕೆಎಂಎ0  ಮಂಜುನಾಥ್,ಜಿಪ0 ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ,ಟಿಎಪಿಎಂಎಸ್ ಅಧ್ಯಕ್ಷ ಕೋಡಿಹಳ್ಳಿ ಸುರೇಶ್ ಮಾತನಾಡಿದರು.

ಬಮೂಲ್ ನಾಮಿನಿ ನಿರ್ದೇಶಕ ಎಲ್‌ಎನ್‌ಟಿ ಮಂಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಬಿ ವೆಂಕಟೇಶಪ್ಪ,ಜಿಪ0 ಮಾಜಿ ನಿರ್ದೇಶಕ ವೈಎಸ್‌ಎಂ ಮಂಜು, ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಂಜುನಾಥ್, ಶಿಬಿರದ ಉಪ ವ್ಯವಸ್ಥಾಪಕ ಶ್ರೀರಾಮ್,ಮುತ್ಸಂದ್ರ ಆನಂದಪ್ಪ,ಗ್ಯಾರ0ಟಿ ಯೋಜನೆ ತಾಲೂಕು ಅಧ್ಯಕ್ಷ ಬಚ್ಚೇಗೌಡ,ಟಿಎಪಿಎಂಎಸ್ ನಿರ್ದೇಶಕ ನಗರೇನಹಳ್ಳಿ ನಾಗರಾಜಪ್ಪ, ತಾಪಂ ನಿವೃತ್ತ ಇಒ ನಾರಾಯಣಸ್ವಾಮಿ, ಶಿವಾಜಿ ನಾಯಕ್,ಡಾ.ಮಂಜುನಾಥ್,ವಿಜಯಕುಮಾರ್ ಹಾಜರಿದ್ದರು.

Spread the love

You may also like

Leave a Comment

ಸರಕಾರಿ ಉರ್ದು ಪ್ರೌಢಶಾಲೆಗೆ ಶೇ.೧೦೦ ರಷ್ಟು ಫಲಿತಾಂಶ   ಸ್ಥಳೀಯ ಜನರ ಧ್ವನಿಯಾಗಲು ಪಂಚಾಯತ್ ರಾಜ್ ಇಲಾಖೆ ಸಹಕಾರಿ   ಭಾರತ್ ಐಕಾನಿಕ್ ಅವಾರ್ಡ್ಗೆ ಪತ್ರಕರ್ತ ಸೂಲಿಬೆಲೆ ಮಂಜುನಾಥ್ ಆಯ್ಕೆ   ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ   ಯಶಸ್ ಗೌಡಗೆ 611 ಅಂಕ