129

ಸೂಲಿಬೆಲೆ : ಇಲ್ಲಿನ ಸರಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಬಾರಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. ೧೦೦ ರಷ್ಟು ಫಲಿತಾಂಶವನ್ನು ಸಾಧಿಸಿದ್ದಾರೆ.
೨೫ ಬಾಲಕಿಯರು, ೮ ಬಾಲಕರು ಸೇರಿ ಒಟ್ಟು ೩೩ ಮಂದಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಇವರಲ್ಲಿ ಸಮೀರ ಭಾನು ೫೬೬ ಅಂಕ,ಉಮ್ಮಾಕುಲ್ಸುಮ್ ೫೪೯ ಅಂಕ, ಡೇನಿಯಾ ಗೌಹರ್ ೫೪೪ ಅಂಕ,ಜೋಯಾ ಖಾನಮ್ ೫೪೩ ಅಂಕ,ತಮ್ಮನಾ ಸಿ ೫೪೪ ಅಂಕ ಪಡೆದು ಅತ್ಯುತ್ತಮ ಶ್ರೇಣೆಯಲ್ಲಿ ಉತ್ತೀರ್ಣರಾಗಿದ್ದಾರೆ.ಎಲ್ಲ ವಿದ್ಯಾರ್ಥಿಗಳನ್ನು ಶಾಲಾಭಿವೃದ್ದಿ ಅಧ್ಯಕ್ಷರಾದ ಇನಾಯಿತ್ ಪಾಷ,ಇಮ್ರಾನ್ ಪಾಷ,ಖಾಜಾ,ಜೀಯಾವುಲ್ಲಾ ಖಾನ್,ಸೈಯಾದ್ ಮಹಬೂಬ್ ಹಾಗೂ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಅಭಿನಂದಿಸಿದ್ದಾರೆ.

