
ಸೂಲಿಬೆಲೆ; ಸಮಾಜಿಕ ಕಾಳಜಿ ಮತ್ತು ಸೇವಾ ಮನೊಭಾವದಿಂದ ಸಮಾಜದ ಬದಲಾವಣೆ ಸಾಧ್ಯ ಇಂತಹ ಕಾರ್ಯಕ್ಕೆ ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ್ ಸಾಕ್ಷಿಯಾಗಿದೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಹೇಳಿದರು
ಸೂಲಿಬೆಲೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಜೇನುಗೂಡು ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಕನ್ನಡಕಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೇನುಗೂಡು ಟ್ರಸ್ಟ್ ಉಚಿತ ನೇತ್ರ ತಪಾಸಣೆ, ಆರೋಗ್ಯ ತಪಾಸಣೆ ಹಾಗೂ ಸರ್ಕಾರಿ ಶಾಲೆ ಕಾಲೇಜುಗಳ ಬಲವರ್ದನೆಗೆ ಶ್ರಮಿಸುತ್ತಿದೆ ಎಂದು ಸಂಸ್ಥೆಗಳ ಸೇವೆ ಇನ್ನು ಹೆಚ್ಚಾಗಿ ಬೇಕಾಗಿದೆ ಎಂದರು
ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಂಜುನಾಥ್ ಮಾತನಾಡಿ ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಅಭಿವೃದ್ದಿಗಾಗಿ ನಾವು ಸದಾ ಸಹಕಾರ ನೀಡುತ್ತೇವೆ ಕುಡಿಯುವ ನೀರಿನ ಪೂರೈಕೆ ಹಾಗೂ ಸ್ವಚ್ಚತೆ ಹೆಚ್ಚಿನ ಅದ್ಯತೆ ನೀಡಿದ್ದೇವೆ ಎಂದರು.
ಪ್ರಾAಶುಪಾಲರಾದ ಮಂಜುನಾಥ್ ಮಾತನಾಡಿ ಕಾಲೇಜಿನಲ್ಲಿ ಶೇ ೯೭ ರಷ್ಟು ಫಲಿತಾಂಶ ಬಂದಿದ್ದು ಸೂಲಿಬೆಲೆ ಸುತ್ತಮುತ್ತಲಿನ ಗ್ರಾಮಸ್ಥರು ಕಾಲೇಜಿಗೆ ಬೇಟಿ ಮಕ್ಕಳ ದಾಖಲಾತಿ ಮಾಡಲು ಕೋರಿದರು.
ಗ್ರಾಮಪಂಚಾಯತ್ ಅಭಿವೃದ್ದಿ ಅಧಿಕಾರಿ ಮಂಜುನಾಥ್,ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ವೆಂಕಟೇಶ್, ವಲಯ ಅರಣ್ಯಾಧಿಕಾರಿ ಪುಷ್ಪಾ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಪ್ರಶಾಂತ್, ಟ್ರಸ್ಟಿನ ಉಪಾಧ್ಯಕ್ಷ ಚೌಡೇಗೌಡ, ನಿರ್ದೇಶಕರಾದ ಸೈಯದ್ ಮಹಬೂಬ್, ಜಿಯಾವುಲ್ಲಾ, ನಯಾಜ್ ಖಾನ್, ಅತ್ತಿಬೆಲೆ ಮಂಜುನಾಥ್, ಬೆಟ್ಟಹಳ್ಳಿ ಗೋಪಿನಾಥ್, ಕಾಲೇಜಿನ ಉಪನ್ಯಾಸಕರಾದ ಸುಬ್ರಮಣಿ,ಕುಮಾರ್, ಇತರರು ಇದ್ದರು.


