ಹೊಸಕೋಟೆ : ಶಿಕ್ಷಣ ಬರೀ ಉದ್ಯೋಗ ಸಂಪಾದನೆಗೆಲ್ಲ. ವ್ಯಕ್ತಿಯನ್ನು ಪರಿಪೂರ್ಣವಾಗಿ ರೂಪಿಸಿ ಸಮಾಜಕ್ಕೆ ಸತ್ಪೆçÃರ್ಜೆಯನ್ನಾಗಿ ರೂಪಿಸುವುದಾಗಿದೆ. ಕಾಲೇಜಿನಲ್ಲಿ ಶಿಕ್ಷಣ ಪಡೆಯುವ ಪ್ರತಿಯೊಬ್ಬರು ಸಮಾಜಕ್ಕೆ ಮಾದರಿಯಾಗುವಂತ ವ್ಯಕ್ತಿಗಳಾಗಬೇಕು. ಉತ್ತಮ ಶಿಕ್ಷಣದ ಜತೆಗೆ ಅತ್ಯುತ್ತಮ ವ್ಯಕ್ತಿಗಳನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ- ಎಂದು ಮಹದೇವ ಕಾಲೇಜು ಪ್ರಾಂಶುಪಾಲ ರಾಮಾನಾಥ್ ತಿಳಿಸಿದರು
ಹೊಸಕೋಟೆ ನಗರದ ಮಹದೇವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಫ್ರೆಶೋತ್ಸವ-೨೦೨೬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಹೊಸಕೋಟೆ ಡಿವೈಎಸ್ಪಿ ಮಲ್ಲೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಗುರಿಯನ್ನು ಸಾಧಿಸಲು ಸಾಕಷ್ಟು ಮುಕ್ತ ಅವಕಾಶಗಳಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮೊಬೈಲ್,ಪೇಸ್ ಬುಕ್ ಬಿಟ್ಟು ದಿನಪತ್ರಿಕೆ, ಸಾಧಕರ ಜೀವನಗಾಧೆ ಪುಸ್ತಕ ಓದಿ ಅರಿತುಕೊಂಡರೆ ಸಾಮಾನ್ಯ ಜ್ಞಾನ ವೃದ್ದಿಸಿ ಸಾಧನೆಗೆ ಹೆಚ್ಚು ಪ್ರೋತ್ಸಾಹ ಸಿಗಲಿದೆ. ಸೋಲು ಗೆಲವು ಸಮಾನವಾಗಿ ಸ್ವೀಕರಿಸಿ. ಗುರಿಯಿಟ್ಟುಕೊಂಡು ಓದಿ.ಗೆಲುವು ಸಿಗಲಿಲ್ಲವೆಂದರೇ ನಿರಾಸೆಯಾಗಬೇಡಿ. ಸಮಾಜಕ್ಕೆ ಮಾರಕವಾಗುವಂತ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಡಿ ಎಂದರು

ನಿವೃತ್ತ ಉಪನಿರ್ದೇಶಕ ರಾಮಕೃಷ್ಣ ಅವರು ಮಾತನಾಡಿ, ಜೀವನದಲ್ಲಿ ಸೋಲು,ಗೆಲವು ನಿಮ್ಮ ಕೈಯಲ್ಲಿರುತ್ತದೆ. ಗೆಲುವು ಕಾಣಲು ಸದಾ ಪ್ರಯತ್ನಿಸಿ.ನಕರಾತ್ಮಕ ಚಿಂತನೆ ಬಿಟ್ಟು ಸಕಾರತ್ಮಾಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಿ.ಯಾವುದೇ ಕೆಲಸವಾಗಲಿ,ನಾಳೆ ಎಂಬುದನ್ನು ಬಿಟ್ಟು ಇಂದೇ ಮಾಡಿ.ಸೋಮಾರಿತ ವಿದ್ಯಾರ್ಥಿಗಳ ವಿಕ್‌ನೆಸ್ ಆಗಬಾರದು.ನಿಮ್ಮ ಬಲ,ವಿಕ್ ನೆಸ್ ಅರಿತುಕೊಂಡು ಮುಂದೆಜ್ಜೆಯಿಟ್ಟು ಗೆಲುವು ಸಾಧಿಸಲು ಪ್ರಯತ್ನಿಸಿ ಎಂದರು
ನಿವೃತ್ತ ಪ್ರಾಂಶುಪಾಲ ಚಂದ್ರ ಮರಕಲ ಅವರು ಮಾತನಾಡಿ, ಮಕ್ಕಳು ಏನೇ ತಪ್ಪು ಮಾಡಿದರೂ ಅದು ಹೆತ್ತವರು,ಶಿಕ್ಷಕರ ಮೇಲೆ ಪರಿಣಾಮ ಬೀರುತ್ತೆ. ಶಿಕ್ಷಕರು,ಹೆತ್ತವರು ಹೆಮ್ಮೆ ಪಡುವಂತ ವಿದ್ಯಾರ್ಥಿಗಳಾಗಿ ಎಂದು ಸಲಹೆ ನೀಡಿದರು
ಮಹದೇವ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮಾಂಜಿನಿ,ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು,ಟ್ರಸ್ಟ್ ಸದಸ್ಯರಾದ ಹರೀಶ್,ಮಯೂರ್,ನವನೀಶ್ ರೆಡ್ಡಿ,ಲಿಕಿತ್ ರಾಜ್ ನಂದ,ಟಾಪ್ ಕೋಚ್ ಅಕಾಡಮಿ ಜಗದೀಶ್ ಹಾಗೂ ಅಧ್ಯಾಪಕರು,ವಿದ್ಯಾರ್ಥಿಗಳು ಹಾಜರಿದ್ದರು.


