Home ರಾಜ್ಯಪೊಲೀಸ್ ದೌರ್ಜನ್ಯ ಖಂಡಿಸಿ ಹೊಸಕೋಟೆಯಲ್ಲಿ ಬೃಹತ್ ಪ್ರತಿಭಟನೆ ರ‍್ಯಾಲಿ

ಪೊಲೀಸ್ ದೌರ್ಜನ್ಯ ಖಂಡಿಸಿ ಹೊಸಕೋಟೆಯಲ್ಲಿ ಬೃಹತ್ ಪ್ರತಿಭಟನೆ ರ‍್ಯಾಲಿ

ವಿವಿಧ ಸಂಘಟನೆಗಳಿ0ದ ಪ್ರತಿಭಟನೆ

by Editor

ಹೊಸಕೋಟೆ : ನಗರದಲ್ಲಿ ವಿದ್ಯಾರ್ಥಿ ಹಾಗೂ ಪ್ರಜಾಪ್ರಭುತ್ವ ರಕ್ಷಣಾ ಒಕ್ಕೂಟ ಮತ್ತು ಸಿಜೆಪಿ, ಡಿವೈಎಫ್‌ಐ , ಸಿಐಟಿಯು, ಎಸ್‌ಎಫ್‌ಐ, ತಾಲೂಕು ವಕೀಲರ ಸಂಘ, ಅಖಿಲ ಭಾರತ ವಕೀಲರ ಸಂಘ, ದಲಿತಪರ ಸಂಘಟನೆ, ರೈತಪರ ಸಂಘಟೆನೆ, ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡಿಸಿ ಹಾಗೂ ಕೇಂದ್ರ ಮಂತ್ರಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಕೆಇಬಿ ಸರ್ಕಲ್, ಹೂಮಂಡಿ ಸರ್ಕಲ್, ಬಸವೇಶ್ವರ ಸರ್ಕಲ್, ಮಸೀದಿ ಮೂಲಕ ತಾಲೂಕು ಕಚೇರಿ ಅವರಣದವೆರೆಗೆ ಕೇಂದ್ರ ಸರಕಾರದ ಪೊಲೀಸ್ ಗಿರಿ ಮೂಲಕ ಅಮಾಯಕ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ವಿರುದ್ದ ಕೇಂದ್ರ ಸರ್ಕಾರದ ನಡೆಗೆ ದಿಕ್ಕಾರ ಕೂಗುತ್ತ ಮೆರವಣಿಗೆ ನಡೆಸಲಾಯಿತು.

ಅಖಿಲ ಭಾರತ ವಕೀಲರ ಸಂಘದ ಒಕ್ಕೂಟದ ರಾಜ್ಯಾಧ್ಯಕ್ಷರಾದ ಹರಿಂದ್ರ ಮಾತನಾಡಿ, ಯಾವುದೇ ರಾಜಕೀಯ ಪ್ರೇರಣೆ ಇಲ್ಲದೆ ದೆಹಲಿಯ ಜಂತರ್ ಮಂತರ್ ನಲ್ಲಿ ೨೩ ದಿನಗಳ ಕಾಲ ಸೋನಮ್ ವಾಂಗ್ಚುಕ್ ಆದರೆ ಅವರನ್ನು ಮಾತನಾಡಿಸಲು ಯಾರು ಬಂದಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಇಷ್ಟು ವರ್ಷಗಳಲ್ಲಿ ೧೨ ಬಾರಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಮುನ್ನೆಲೆಗೆ ಬಂದಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ಕಿಂಗ್ ಪಿನ್‌ಗಳ ಕ್ರಮ ಕೈಗೊಳ್ಳುವುದಿರಲಿ ಆದರ ಜಾಲವನ್ನು ಪತ್ತೆ ಹಚ್ಚುವ ಗೊಜ್ಜಿಗೂ ಹೋಗಿಲ್ಲ ಎಂದರೆ ಮೋದಿಗೆ ಈ ದೇಶದ ಯುವ ಪೀಳಿಗೆಯ ಮೇಲೆ ಎಷ್ಟೊಂದು ಕಾಳಜಿ ಇದೆಯೆಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು

೨.೫ ಲಕ್ಷ ವಿದ್ಯಾರ್ಥಿಗಳು ನಿಟ್ ಗಾಗಿ ಪೂರ್ವ ತಯಾರಿ ನಡೆಸಿಕೊಂಡಿದ್ದರು. ಆದರೆ ಕೇಂದ್ರ ಸರಕಾರ ಪ್ರಶ್ನೆಪತ್ರಿಕೆಗಳನ್ನೇ ಸೋರಿಕೆ ಮಾಡಿ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಕುಗ್ಗುವಂತೆ ಮಾಡಿದೆ. ಇದರಿಂದ ಮನನೊಂದ ೨೧ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದು ನಿಜವಾಗಿ ಆತ್ಮಹತ್ಯೆಯಲ್ಲ ಕೇಂದ್ರ ಸರಕಾರ ಮಾಡಿದ ಸಂಚಿನ ಹತ್ಯೆಯಾಗಿದೆ. ಇದೆಲ್ಲದರ ವಿರುದ್ದ ವಿದ್ಯಾರ್ಥಿ ಸಮುದಾಯ ಧ್ವನಿ ಎತ್ತಿದರೆ ಕೇಂದ್ರ ಸರಕಾರ ಪೊಲೀಸ್ ಶಕ್ತಿ ಬಳಿಸಿ ಗೂಂಡಾಗಿರಿ ಮಾಡಲು ಮುಂದಾಗುತ್ತಿದೆ. ವಿದ್ಯಾರ್ಥಿಗಳು ಅಂದರೆ ನಿಮಗೆ ಅಷ್ಟು ಕೇವಲವಾ ? ಶೀಘ್ರವೇ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡಿಲ್ಲ ನೇಪಾಳದಲ್ಲಿ ಆದ ದುಸ್ಥಿತಿ ನಿಮಗೂ ಆಗುತ್ತೆ ಎಂಬುದನ್ನು ಮರೆಯಬೇಡಿ ಎಂದು ಕೇಂದ್ರದ ನಡೆಯನ್ನು ಕಟುವಾಗಿ ಟೀಕಿಸಿದರು.

ಅಂಬೇಡ್ಕರ್ ವಾದ ಸಂಘಟನೆಯ ತಾಲೂಕು ಅಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, ೨೧ ವಿದ್ಯಾರ್ಥಿಗಳ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ದೇಶದಿಂದ ಗಡಿಪಾರು ಮಾಡುವ ಕೆಲಸ ಆಗಬೇಕಿದೆ. ವಿದ್ಯಾರ್ಥಿಗಳ ಶಾಂತಿಯುತ ಹೋರಾಟ ನಡೆಸುತ್ತಿದ್ದರೆ ಲಾಠಿ ಪ್ರಹಾರ ನಡೆಸಿದ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಬೇಕು. ಇಷ್ಟೆಲ್ಲಾ ಅನಾಹುತ ಸಂಭವಿಸುತ್ತಿದ್ದರೂ ಎಲ್ಲಿಯೂ ಪ್ರತಿಕ್ರಯಿಸದ ಮೋದಿಯವರು ದೇಶದ ಜನತೆಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ನಿಟ್ ಪರೀಕ್ಷೆ ರದ್ದು ಪಡಿಸಿ ಸಿಇಟಿಯನ್ನು ಜಾರಿಗೊಳಿಸಬೇಕು.ಮೃತ ವಿದ್ಯಾರ್ಥಿಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು

ಈ ಸಂದರ್ಭದಲ್ಲಿ ಸಿಐಟಿಯುನ ತಾಲ್ಲೂಕು ಕಾರ್ಯದರ್ಶಿ, ಖಜಾಂಚಿ ಮೋಹನ್ ಬಾಬು, ದಲಿತಹಕ್ಕುಗಳಸಮಿತಿ ಕಾರ್ಯದರ್ಶಿ ಮುನಿರಾಜು ಎಂ., ವಕೀಲರಾದ ರವಿಂದ್ರ, ಗಣೇಶ್ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಿದ್ದರು

 

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ