Home ರಾಜ್ಯಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ

ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ

ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡರಿಂದ ೩೦೦ ಪದವಿ ವಿದ್ಯಾರ್ಥಿಗಳಿಗೆ ೨ ಜತೆ ಉಚಿತವಾಗಿ ಸಮವಸ್ತç ವಿತರಣೆ

by Editor

ಬೆಂಗಳೂರು ಗ್ರಾಮಾಂತರ : ಗ್ರಾಮಾಂತರ ಭಾಗದಲ್ಲಿರುವ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಗುರಿ ಸಾಧನೆಗೆ ಬೆಂಡಿಗಾನಹಳ್ಳಿ ಕುಟುಂಬದ ಪ್ರೋತ್ಸಾಹ, ಸಹಕಾರ ನಿರಂತರವಾಗಿರುತ್ತದೆ. ಇದನ್ನು ವಿದ್ಯಾರ್ಥಿಗಳು ಸದ್ಬಳಿಕೆ ಮಾಡಿಕೊಂಡು ಶೈಕ್ಷಣಿಕ ಕನಸಿನ ಗುರಿ ಸಾಧಿಸಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಪದವಿ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎನ್ ಗೋಪಾಲಗೌಡರು ಹೇಳಿದರು

ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರಕಾರಿ ಪ್ರಥಮ ದರ್ಜೆ ಕಾಲೇಜು ೩೦೦ ವಿದ್ಯಾರ್ಥಿಗಳಿಗೆ ಬುಧವಾರ ಬೆಂಡಿಗಾನಹಳ್ಳಿ ಕುಟುಂಬದ ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡರು ಉಚಿತವಾಗಿ ವಿತರಿಸಿದ ಎರಡು ಜತೆ ಸಮವಸ್ತç ವಿತರಣೆ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪದವಿ ಕಾಲೇಜು ಹಂತದಲ್ಲಿ ಸಮಯ ವ್ಯರ್ಥ ಮಾಡದೆ ಜೀವನ ಗುರಿ ಸಾಧನೆಯತ್ತ ಹೆಚ್ಚು ಗಮನಹರಿಸಬೇಕು.ಈಗ ಕಷ್ಟಪಟ್ಟು ಓದಿ ಉನ್ನತ ಸ್ಥಾನಕ್ಕೆ ಹೋದರೇ ಜೀವನ ಪೂರ್ತಿ ಸಂತೋಷವಾಗಿ ಇರಬಹುದು. ಮನಸನ್ನು ಹತೋಟಿಯಲ್ಲಿಟ್ಟುಕೊಂಡು ಕಲಿಯತ್ತ ತೊಡಗಿಸಿಕೊಳ್ಳಬೇಕು.ಬೆಂಡಿಗಾನಹಳ್ಳಿ ಕುಟುಂಬದವರು ಶಿಕ್ಷಣ,ಆರೋಗ್ಯ,ಸಾಮಾಜಿಕ ಕರ‍್ಯಕ್ರಮಗಳಿಗೆ ಸದಾ ಪ್ರೋತ್ಸಾಹ,ಸಹಕಾರ ನೀಡುತ್ತಿದ್ದು,ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು

ಪ್ರಿನ್ಸಿಪಾಲ್ ಕಲ್ಪನಾ ಅವರು ಮಾತನಾಡಿ, ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡನ್ನು ಭೇಟಿ ಮಾಡಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮವಸ್ತç ನೀಡುವಂತೆ ಮನವಿ ಮಾಡಿದ ತಕ್ಷಣ ಅವರು ಸಮ್ಮತಿ ಸೂಚಿಸಿ ಕಾಲೇಜಿನ ೩೦೦ ವಿದ್ಯಾರ್ಥಿಗಳಿಗೆ ತಲಾ ೨ ಜತೆ ಸಮವಸ್ತçಗಳನ್ನು ನೀಡಿರುವುದು ಅವರ ಸಾಮಾಜಿಕ ಕಳಕಳಗೆ ಹಿಡಿದ ಕನ್ನಡಿಯಾಗಿದೆ. ಇಂಥ ವ್ಯಕ್ತಿಗಳು ಸಮಾಜದಲ್ಲಿ ಸಿಗುವುದು ಅಪರೂಪ. ಧಾನ,ಧರ್ಮ ಮಾಡುವುದರಲ್ಲಿ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದಾರ ಮನಸಿನ ವ್ಯಕ್ತಿಗಳು ಸಮಾಜದಲ್ಲಿ ಇದ್ದಾರೆ ಎನ್ನುವುದಕ್ಕೆ ನಿರ್ಧಶನವಾಗಿದ್ದಾರೆ. ಇವರ ಸೇವೆ ಸ್ಮರಣೀಯವಾಗಿದೆ ಎಂದರು

ಸಮಾರ0ಭದಲ್ಲಿ ರಿಷಿಕುಲ್ ವಿದ್ಯಾಪೀಠ ಸಂಸ್ಥಾಪಕ ದೇವರಾಜ್,ಕಂಬಳೀಪುರ ಗ್ರಾಪಂ ಮಾಜಿ ಅಧ್ಯಕ್ಷ ಆನಂದಪ್ಪ,ಮಾಜಿ ಸದಸ್ಯ ಮುಕ್ತಿಯಾರ್,ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಆನಂದ್,ಜೀಯಾವುಲ್ಲಾ, ಗೋಪಿನಾಥ್, ಹೊಸಕೋಟೆ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸೊಣ್ಣಳೀಪುರ ಶ್ರೀನಿವಾಸ್, ಯುವ ಮುಖಂಡ ಹಸಿಗಾಳ ಜಗದೀಶ್ ಹಾಗೂ ಕಾಲೇಜು ಉಪನ್ಯಾಸಕರು ಹಾಜರಿದ್ದರು

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ