ಹೊಸಕೋಟೆ : ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಬಿರಿಯಾನಿ ಹೋಟಲ್ ಗಳು ಬೆಳಗಿನ ಜಾವ ೬ ಗಂಟೆ ಒಳಗೆ ತೆರಿಯಾದೇ, ೬ ಗಂಟೆ ನಂತರವೇ ತೆರೆಯಬೇಕು.ಟೋಲ್ ಬಳಿಯಿರುವ ಅಂಗಡಿಗಳು ಮುಂದೆ ಟ್ರಾಪಿಕ್ ಜಾಮ್ ಆಗುತ್ತಿರುವ ಬಗೆ ದೂರುಗಳಿರುವುದರಿಂದ ರಾತ್ರಿ ೧೧ ಗಂಟೆಗೆ ಮುಚ್ಚಬೇಕು.ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಹೋಟಲ್,ಅಂಗಡಿ ಮಾಲೀಕರು ಪೊಲೀಸರೊಂದಿಗೆ ಸಹಕಾರ ನೀಡಬೇಕು ಎಂದು ಹೊಸಕೋಟೆ ಪೊಲೀಸ್ ಠಾಣೆ ಸಿಪಿಐ ಗೋವಿಂದ್ ಅವರು ತಿಳಿಸಿದ್ದಾರೆ.
ಹೊಸಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಹೋಟಲ್,ಅಂಗಡಿ ಮಾಲೀಕರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು,ಇತ್ತೀಚ್ಚಿಗೆ ಹೊಸಕೋಟೆ ಬಿರಿಯಾನಿ ಸೇವಿಸಲು ಬೆಳಗಿನ ಜಾವ ಬೇರೆ ಬೇರೆ ಭಾಗಗಳಿಂದ ಜನರು ಬರುವುದರಿಂದ ಅಪಘಾತಗಳು,ನಗರದಲ್ಲಿ ಸಂಚಾರ ಸಮಸ್ಯೆಯಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳ ಹಿನ್ನಲೆಯಲ್ಲಿ ಬೆಳಗಿನ ಜಾವ ೬ ಗಂಟೆಯ ನಂತರವೇ ಬಿರಿಯಾನಿ ಹೋಟಲ್ ತೆರೆಯಬೇಕು. ಈ ಸಮಯ ಪಾಲನೆ ಬಗೆ ಸೂಚನೆ ಫಲಕಗಳನ್ನು ಹೋಟಲ್ ಮುಂದೆ ಆಳವಡಿಸಬೇಕು.ಹೋಟಲ್ ಮುಂಭಾಗದಲ್ಲಿ ಪಾರ್ಕಿಂಗ್ ಮಾಡಿಕೊಂಡು ಮದ್ಯಪಾನ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಅದಕ್ಕೆ ಹೋಟಲ್ ಮಾಲೀಕರೆ ಹೊಣೆಯಾಗುತ್ತಾರೆ. ಇಂಥ ಘಟನೆಗಳಿಗೆ ಆಸ್ಪದ ಕೊಡದಂತೆ ಹೋಟಲ್ ಮಾಲೀಕರು ನಿಗಾವಹಿಸಬೇಕು. ಸಂಚಾರಕ್ಕೆ ತೊಂದರೆಯಾಗದ0ತೆ ಸೆಕ್ಯೂರಿಟಿ ವ್ಯವಸ್ಥೆಯನ್ನು ಹೋಟಲ್ ಮಾಲೀಕರೇ ಮಾಡಿಕೊಳ್ಳಬೇಕು.ಕಾನೂನು ಸುವ್ಯವ್ಥೆಗೆ ಧಕ್ಕೆಯಾಗುವಂತೆ ಘಟನೆಗಳು ಕಂಡು ಬಂದರೆ ಪೊಲೀಸ್ ಇಲಾಖೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದೆ ಎಂದರು
ನಿಗಧಿತ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಬಾರದು : ರಾತ್ರಿ ವೇಳೆ ಕೆಲವು ಅಂಗಡಿಗಳ ಮಾಲೀಕರು ಕೆಲವೊಂದು ವಸ್ತುಗಳನ್ನು ನಿಗಧಿತ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡುತ್ತಿರುವ ಬಗೆ ದೂರುಗಳು ಬಂದಿದ್ದು,ಕ್ರಮ ಕೈಗೊಳ್ಳಲಾಗುವುದು.ಟೋಲ್ ಬಳಿ ರಾತ್ರಿ ೧೧ ಗಂಟೆಯವರಿಗೂ ಅಂಗಡಿಗಳು ತೆರೆದಿರುವ ಕಾರಣ ಟ್ರಾಪಿಕ್ ಜಾಮ್ ಆಗಿ ತೊಂದರೆಯಾಗುತ್ತಿರುವ ಬಗೆ ದೂರುಗಳಿದ್ದು, ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ೧೧ ಗಂಟೆಗೆಲ್ಲ ಬಾಗಿಲು ಮುಚ್ಚಬೇಕು ಎಂದು ಸೂಚನೆ ನೀಡಿದರು.

