
ಹೊಸಕೋಟೆ : ನಗರದ ಕಮ್ಮವಾರಿ ನಗರದಲ್ಲಿದ್ದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವನ್ನು ಕಮ್ಮವಾರಿ ನಗರದ ಟಿಎಪಿಎಂಎಸ್ ಬಳಿಯಿರುವ ಹೊಸ ಬಾಡಿಗೆ ಕಟ್ಟಡಕ್ಕೆ ವರಮಹಾಲಕ್ಷಿö್ಮ ಹಬ್ಬದಂದು ಸ್ಥಳಾಂತರ ಮಾಡಲಾಗಿದೆ.
ಗುರುವಾರ ರಾತ್ರಿ ಹೊಸಕೋಟೆ ತಹಸೀಲ್ದಾರ್ ಶೀತಲ್ ಅವರು ದಿಡೀರ್ ಭೇಟಿ ನೀಡಿ ನಿಲಯದಲ್ಲಿನ ಅವ್ಯವಸ್ಥೆ ಕಂಡು ಹೊಸ ಕಟ್ಟಡಕ್ಕೆ ಒಂದು ವಾರದೊಳಗೆ ಶಿಪ್ಟ್ ಮಾಡುವಂತೆ ಸೂಚನೆ ನೀಡಿದ್ದರು.ಎಚ್ಚೆತ್ತುಕೊಂಡು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶುಕ್ರವಾರ ಹೊಸ ಬಾಡಿಗೆ ಕಟ್ಟಡಕ್ಕೆ ನಿಲಯದ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿದ್ದಾರೆ.
ಕಮ್ಮವಾರಿ ನಗರದಲ್ಲಿನ ಹಳೇ ಕಟ್ಟಡದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಣೆ ಮಾಡುತ್ತಿತ್ತು.ಅತ್ಯಂತ್ಯ ಹಳೇ ಕಟ್ಟಡವಾಗಿದ್ದ ಕಾರಣ ಮೂಲ ಸೌರ‍್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಗುರುವಾರ ರಾತ್ರಿ ತಹಸೀಲ್ದಾರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ವಿರುದ್ದ ಗರಂ ಆಗುತ್ತಿದ್ದಂತೆ ಅಧಿಕಾರಿಗಳು ಒಂದೇ ದಿನಕ್ಕೆ ನಿಲಯವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಿದ್ದಾರೆ.ತಹಸೀಲ್ದಾರ್ ಅವರು ಈ ಕರ‍್ಯಕ್ಕೆ ಜನರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಮೂರು ತಿಂಗಳ ಹಿಂದೆಯೇ ಹೊಸಕಟ್ಟಡ ಬಾಡಿಗೆಗೆ ಗುರ್ತಿಸಿದ್ದು ಮನೆ ಮಾಲೀಕರು ವಿದೇಶದಲ್ಲಿದ್ದ ಕಾರಣ ಅಗ್ರಿಮೆಂಟ್ ವಿಚಾರದಲ್ಲಿ ತಡವಾಗಿತ್ತು. ತಹಸೀಲ್ದಾರ್ ಭೇಟಿ ನಂತರ ಮನೆ ಮಾಲೀಕರ ಮಗನೊಂದಿಗೆ ಚರ್ಚಿಸಿ ತುರ್ತು ಇರುವ ಕಾರಣ ನಿಲಯವನ್ನು ಸ್ಥಳಾಂತರಿಸಲು ಅನುಕೂಲ ಮಾಡುವಂತೆ ಮನವಿ ಮಾಡಿ ಶುಕ್ರವಾರ ಸ್ಥಳಾಂತರ ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿನೋದ ತಿಳಿಸಿದ್ದಾರೆ.


