ಒತ್ತುವರಿ ತೆರವಿಗೆ ಆದೇಶವಿದ್ದರೂ ಕ್ರಮವಿಲ್ಲ,ಆರೋಪ
ದೇವಿಶಟ್ಟೆಹಳ್ಳಿ ಕೆರೆ ಒತ್ತುವರಿ ತೆರೆವು ಮಾಡಲು ತಹಶೀಲ್ದಾರ್‌ಗೆ ಮನವಿ
ಹೊಸಕೋಟೆ: ನ್ಯಾಯಾಲಯ ಹಾಗೂ ತಹಶೀಲ್ದಾರ್ ನ್ಯಾಯಾಲಯದಿಂದ ಒತ್ತುವರಿ ತೆರವಿಗೆ ಸಂಬ0ಧಿಸಿದ0ತೆ ಆದೇಶಗಳಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ದೇವಶೆಟ್ಟಿಹಳ್ಳಿ ಗ್ರಾಮದ ಯುವ ಮುಖಂಡ ಸಂತೋಷ್‌ಕುಮಾರ್,ಈ ಕೂಡಲೇ ಒತ್ತುವರಿ ತೆರೆವಿಗೆ ಕ್ರಮ ಕೈಗೊಳ್ಳಬೇಕು ಎಂದು ಹೊಸಕೋಟೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಹೊಸಕೋಟೆಯಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ದೇವಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂ.೯೨ರಲ್ಲಿ ೨೯.೩೮ ಗುಂಟೆ ಜಮೀನಿದ್ದು, ಎಂ.ಕೃಷ್ಣಪ್ಪ
ಎಂಬುವರು ಸುಮಾರು ೪ ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಸಂಬ0ಧ ಈ ಹಿಂದಿನ ತಹಶೀಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ೨೦೨೨ರ ಜುಲೈ ೨೬ರಂದು ಆಗಿನ ತಹಸೀಲ್ದಾರ್ ಮಹೇಶ್ ಅವರು ಒತ್ತುವರಿ ತೆರವಿಗೆ ಆದೇಶ ನೀಡಿದ್ದರು. ಈ ಬಗ್ಗೆ ಒತ್ತುವರಿದಾರರು ಹೈ ಕೋರ್ಟ್ ಮೇಟ್ಟಲೇರಿದ್ದು,ನ್ಯಾಯಾಲಯ ಸಹ ಒತ್ತುವರಿ ತೆರೆವು ಮಾಡಲು ಈ ಹಿಂದಿನ ತಹಸೀಲ್ದಾರ್ ನೀಡಿದ್ದ ಆದೇಶವನ್ನು ೨೦೨೬ ಜುಲೈ ತಿಂಗಳಲ್ಲಿ ಎತ್ತಿ ಹಿಡಿದಿದೆ. ನ್ಯಾಯಾಲಯದ ಆದೇಶದಂತೆ ಒತ್ತುವರಿತೆರವುಗೊಳಿಸಬೇಕು. ಆದರೇ, ಕಂದಾಯ ಇಲಾಖೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಒತ್ತುವರಿ ತೆರೆವು ಮಾಡಿ ಎಂದು ಹಲವು ದಿನಗಳಿಂದ ಕಚೇರಿಗಳಿಗೆ ಅಲೆದಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಸಂತೋಷ್ ಕುಮಾರ್ ಆರೋಪಿಸಿದ್ದು, ತಹಶೀಲ್ದಾರ್ ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸಿ ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಒತ್ತುವರಿ ತೆರೆವು ಸಂಬ0ಧ ಜಿಲ್ಲಾಧಿಕಾರಿಗಳು,ಉಪ ವಿಭಾಗಾಧಿಕಾರಿಗಳು ಸಹ ಮನವಿ ಸಲ್ಲಿಸಿದ್ದು ಯಾವುದೇ ಪ್ರಯೋಜನೆವಾಗಿಲ್ಲ.ಒತ್ತುವರಿಯಾಗಿರುವ ಕೆರೆಯ ಜಾಗವನ್ನು ಈ ಕೂಡಲೇ ಒತ್ತುವರಿ ತೆರವು ಮಾಡಿ ಸರಕಾರದ ವಶಕ್ಕೆ ಪಡೆದುಕೊಳ್ಳಬೇಕು.ಅಧಿಕಾರಿಗಳು ವಿಳಂಬ,ನಿರ್ಲಕ್ಷö್ಯತನ ತೋರಿದ್ದಲ್ಲಿ ಅದಿಕಾರಿಗಳ ವಿರುದ್ದ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ವೇಳೆ ಗ್ರಾಮಸ್ಥರು ಹಾಜರಿದ್ದರು

