
ಹೊಸಕೋಟೆ : ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮ ಸಾಧನೆ ಮಾಡುತ್ತಿವೆ. ಹೊಸಕೋಟೆ ಕ್ಷೇತ್ರದಿಂದ ಬಿ.ವಿ ಸತೀಶ್ ಗೌಡರು ನಿರ್ದೇಶಕರಾಗಿ ಆಯ್ಕೆಯಾದ ನಂತರ ಹಾಲು ಸಂಗ್ರಹಣೆ ಹಾಗೂ ರೈತರಿಗೆ ಸೇವೆ ಒದಗಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿರುವ ಸತೀಶ್ ಗೌಡರ ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡರು ಹೇಳಿದರು
ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿ ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಹೊಸಕೋಟೆ ಕ್ಷೇತ್ರದ ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡರ ಕೋಟಾದಡಿಯಲ್ಲಿ ಹಾಲು ಉತ್ಪಾದಕರಿಗೆ ವಿವಿಧ ಸವಲತ್ತು ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದು ಸಂತೋಷ ಅಥವಾ ಸಂಭ್ರಮದಿ0ದ ನಡೆಸುವ ಕಾರ್ಯಕ್ರಮವಲ್ಲ. ಮರಣ ಹೊಂದಿದ ಸದಸ್ಯರ ಕುಟುಂಬಗಳಿಗೆ ವಿಮಾ ಪರಿಹಾರ ನೀಡುವುದು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೆರವಾಗುವುದು ಹಾಗೂ ೭೦ ವರ್ಷ ದಾಟಿದ ಹಿರಿಯ ಸದಸ್ಯರಿಗೆ ಗೌರವಧನ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಆರು ತಿಂಗಳ ಹಿಂದೆ ತಾಲೂಕಿನಲ್ಲಿ ಪ್ರತಿದಿನ ಸುಮಾರು ೧ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಪ್ರಸ್ತುತ ತಾಲೂಕಿನ ಸುಮಾರು ೧೭೦ ಡೈರಿ ಸಹಕಾರ ಸಂಘಗಳಿ0ದ ಪ್ರತಿದಿನ ೧.೫ ಲಕ್ಷ ಲೀಟರ್‌ಗೂ ಅಧಿಕ ಹಾಲು ಸಂಗ್ರಹವಾಗುತ್ತಿದೆ. ಇಂದಿನ ಅಂಕಿಅ0ಶದ0ತೆ ೧,೫೨,೦೮೧ ಲೀಟರ್ ಹಾಲು ಸಂಗ್ರಹವಾಗಿದೆ. ಇದು ಹೈನುಗಾರರ ಪರಿಶ್ರಮ ಹಾಗೂ ಸಹಕಾರ ಸಂಘಗಳ ಸಮರ್ಪಿತ ಸೇವೆಗೆ ಸಾಕ್ಷಿಯಾಗಿದೆ ಎಂದರು.
ಆರೋಗ್ಯ ತಪಾಸಣೆ ಹಾಗೂ ವಿವಿಧ ಚಿಕಿತ್ಸೆಗಳಿಗೆ ಒಳಗಾದ ಸದಸ್ಯರಿಗೆ ಸುಮಾರು ೨.೫ ಲಕ್ಷ ಸಹಾಯಧನ ನೀಡಿದೆ. ೭೦ ವರ್ಷ ಮೇಲ್ಪಟ್ಟ ಹಿರಿಯ ಸದಸ್ಯರಿಗೆ ತಲಾ ಸುಮಾರು ೩೦ ಸಾವಿರದಂತೆ ಗೌರವಧನ ನೀಡಲಾಗುತ್ತಿದೆ.ಒಟ್ಟು ೧೧ಲಕ್ಷದಷ್ಟು ಸವಲತ್ತು ವಿತರಿಸಲಾಗಿದೆ. ಕಷ್ಟ ಸುಖದಲ್ಲಿ ಕುಟುಂಬಕ್ಕೆ ಹೈನುಗಾರಿಕೆ ಆಧಾರವಾಗಿದೆ ಎಂದು ಶಾಸಕರು ತಿಳಿಸಿದರು
ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡರು ಮಾತನಾಡಿ, ಬಮೂಲ್ ಕಲ್ಯಾಣ ಟ್ರಸ್ಟ್ವತಿಯಿಂದ ಹೊಸಕೋಟೆ ತಾಲೂಕಿನ ಹೈನುಗಾರರಿಗೆ ಬಮುಲ್ ವಿಮೆ ಸಕ್ರಿಯ ಸದಸ್ಯರ ಮರಣ ಪರಿಹಾರ ನಾಲ್ಕು ಲಕ್ಷ, ೭೦ ವರ್ಷ ಮೇಲ್ಪಟ್ಟ ಸಕ್ರಿಯ ಸದಸ್ಯರ ಮರಣ ಪರಿಹಾರ ೯೦ ಸಾವಿರ, ಒಳರೋಗಿ ವೈದ್ಯಕೀಯ ವೆಚ್ಚ ೨,೧೩ ಲಕ್ಷ, ತಾಲೂಕು ವ್ಯಾಪ್ತಿಯ ಅತ್ಯುತ್ತಮ ಸಂಘ, ಅತ್ಯುತ್ತಮ ಮುಖ್ಯಕಾರ್ಯನಿರ್ವಾಹಕ, ಅತ್ಯುತ್ತಮ ಹಾಲು ಪರೀಕ್ಷಕ, ಅತ್ಯುತ್ತಮ ಶುಚಿಗಾರ, ಅತಿ ಹೆಚ್ಚು ಹಾಲು ಪೂರೈಸಿದವರ ಪ್ರಶಸ್ತಿಯ ಮೊತ್ತ ೭೭೫೦೦ ಹಾಗೂ ತಾಲೂಕಿನ ಕೊರಟಿ ಸಂಘದಲ್ಲಿ ಸಿಇಒ ಅಗಿ ಕರ‍್ಯನಿರ್ವಹಿಸುತ್ತಿದ್ದ ಮೃತ ಶಶಿಕುಮಾರ್ ಕುಟುಂಬದವರಿಗೆ ಶಾಸಕರು ವೈಯಕ್ತಿಕವಾಗಿ ಒಂದು ಲಕ್ಷ ರೂಗಳನ್ನು ಪರಿಹಾರವಾಗಿ ನೀಡಿದ್ದಾರೆ.ಹೈನುಗಾರರ ಹಿತ ರಕ್ಷಣೆ ನನ್ನ ಕರ್ತವ್ಯವಾಗಿದೆ ಎಂದರು
ಡೈರಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಸತೀಶ್‌ಗೌಡರು ವೈಯಕ್ತಿಕ ನೆರವಿನಿಂದ ಸುಮಾರು ೮೦ ಸಾವಿರ ಮೌಲ್ಯದ ಕಿಟ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬಿಎಂಎರ‍್ಡಿ ಸದಸ್ಯ ಡಾ.ಹೆಚ್.ಎಂ ಸುಬ್ಬರಾಜ್, ಹೊಸಕೋಟೆ ಡೈರಿ ವ್ಯವಸ್ಥಾಪಕ ಮಧುಸೂದನ್, ಶಿಬಿರ ಕಚೇರಿಯ ಮುಖ್ಯಸ್ಥ ವಿನಯ್ ಕುಮಾರ್.ಜಿ,
ಪಶು ವೈದ್ಯಕೀಯ ಮುಖ್ಯಸ್ಥ ಡಾ. ಸಂತೋಷ್, ಕೃಷಿ ಅಧಿಕಾರಿ ಸೌಮ್ಯ, ವಿಸ್ತರಣಾಧಿಕಾರಿ ರಮೇಶ್, ರಘುನಾಥ್ , ಆನಂದ್, ಪವಿತ್ರ , ವಿದ್ಯಾಶ್ರೀ, ತಾಲೂಕು ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ವಿಜಯ್ ಕುಮಾರ್, ಚೋಳಪ್ಪನಹಳ್ಳಿ ರಾಜಣ್ಣ ಹಾಜರಿದ್ದರು.



