
ರಾಜ್ಯ ರಾಜಕೀಯದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಗುರುತಿಸಿಕೊಂಡು ಹಂತ ಹಂತವಾಗಿ ರಾಜಕೀಯದಲ್ಲಿ ಬೆಳೆದ ಬಸವಂತಪ್ಪ ಅವರಿಗೆ ಸಚಿವ ಸ್ಥಾನ ದೊರೆತಿರುವುದು ಅವರ ರಾಜಕೀಯ ಜೀವನದ ಮಹತ್ವದ ಘಟ್ಟವಾಗಿದೆ.ಸರಕಾರ ಸಚಿವ ಸ್ಥಾನ ನೀಡುವ ಮೂಲಕ ಮಾದರ ಸಮುದಾಯಕ್ಕೆ ಶಕ್ತಿ ತುಂಬಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಚ್.ಎಂ ಸುಬ್ಬರಾಜು ಹೇಳಿದರು
ಸಚಿವ ಬಸವಂತಪ್ಪ ಅವರನ್ನು ಸನ್ಮಾನಿಸಿರುವ ಬಗೆ ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಾದರ ಸಮುದಾಯದಲ್ಲಿ ತಳ ಮಟ್ಟದಿಂದಲೂ ಬೆಳೆದು ಬಂದ ಬಸವಂತಪ್ಪ ಅವರ ಜನನಾಯಕರರಾಗಿದ್ದಾರೆ.ಸರಳ ವ್ಯಕ್ತಿತ್ವ ಜನಪರ ಕರ‍್ಯವೈಖರಿ ಮೆಚ್ಚಿಗೆಗೆ ಪಾತ್ರವಾಗಿದೆ.ಮಾದರ (ಮಾದಿಗ) ಸಮುದಾಯದಲ್ಲಿ ಅವರ ಹಿರಿತನ,ಕರ‍್ಯ ವೈಖರಿಯನ್ನು ನೋಡಿ ಅವರಿಗೆ ಸಚಿವ ಸ್ಥಾನ ನೀಡಿರುವುದು ಹೆಮ್ಮೆಯ ವಿಷಯವಾಗಿದೆ.ಮಾದರ ಸಮುದಾಯಕ್ಕೆ ಸರಕಾರ ನೀಡಿರುವ ದೊಡ್ಡ ಕೊಡುಗೆಯಾಗಿದೆ ಎಂದರು
ಹೊಸಕೋಟೆ ತಾಲೂಕು ಅಧ್ಯಕ್ಷ ಗುಟ್ಟಹಳ್ಳಿ ನಾಗರಾಜ್ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಮಾದರ ಸಮುದಾಯವನ್ನು ಗುರ್ತಿಸಿ ಪ್ರೋತ್ಸಾಹಿಸುತ್ತಿರುವುದು ಸಮುದಾಯ ಪರವಾಗಿ ಸರಕಾರವಿದೆ ಎಂಬುದನ್ನು ತೋರಿಸುತ್ತಿದೆ. ಉತ್ತಮ ಆಡಳಿತ ಮೂಲಕ ರಾಜ್ಯಕ್ಕೆ ಬಸವಂತಪ್ಪ ಉತ್ತಮ ಹೆಸರು ತರಲಿ ಎಂದರು
ಈ ಸಂದರ್ಭದಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ವಿಜಯಕುಮಾರ್,ಹರೀಶ್ ಚಕ್ರವರ್ತಿ ಸೇರಿದಂತೆ ಹೊಸಕೋಟೆ ತಾಲೂಕು ಮಾದರ ಮಹಾಸಭಾ ಪದಾಧಿಕಾರಿಗಳು ಹಾಜರಿದ್ದರು

