Home ಜಿಲ್ಲೆಭಾನುವಾರವೂ ಬ್ಯಾಂಕ್ ಸೇವೆ ಲಭ್ಯ

ಭಾನುವಾರವೂ ಬ್ಯಾಂಕ್ ಸೇವೆ ಲಭ್ಯ

ಸೆ.೨೮ರಿಂದ ೩೦ರವರೆಗೆ ಬ್ಯಾಂಕ್ ನೌಕರರ ಮುಷ್ಕರ

by Editor

ಬೆಂಗಳೂರು ಗ್ರಾಮಾಂತರ : ಬ್ಯಾಂಕ್ ನೌಕರರ ಒಕ್ಕೂಟವು ಸೆ.೨೮ರಿಂದ ೩೦ರವರೆಗೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬರುವ ಭಾನುವಾರ ಸೆಪ್ಟೆಂಬರ್ ೨೭ ರಂದು ಬ್ಯಾಂಕ್‌ಗಳು ಎಂದಿನ0ತೆ ಕಾರ್ಯನಿರ್ವಹಿಸಲಿವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಮಂಜುನಾಥ್ ಆರ್ ಅವರು ತಿಳಿಸಿದ್ದಾರೆ.

ಮುಷ್ಕರದ ಅವಧಿಯಲ್ಲಿ ಸಾರ್ವಜನಿಕರ ಬ್ಯಾಂಕಿ0ಗ್ ವ್ಯವಹಾರಗಳಿಗೆ ಯಾವುದೇ ರೀತಿಯ ಅಡಚಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಭಾನುವಾರ ಬ್ಯಾಂಕ್ ಶಾಖೆಗಳು ಹಾಗೂ ಎಟಿಎಂಗಳು ಎಂದಿನ0ತೆ ಕಾರ್ಯ ನಿರ್ವಹಿಸಲಿವೆ.

ಜೊತೆಗೆ ಮುಷ್ಕರದ ದಿನಗಳಲ್ಲಿಯೂ (ಸೆ.೨೮ ರಿಂದ ೩೦) ಎಟಿಎಂಗಳು, ಗ್ರಾಹಕ ಸೇವಾ ಕೇಂದ್ರಗಳು, ಡಿಜಿಟಲ್ ಬ್ಯಾಂಕಿ0ಗ್, ಇಂಟರ್ನೆಟ್ ಬ್ಯಾಂಕಿ0ಗ್ ಹಾಗೂ ಮೊಬೈಲ್ ಬ್ಯಾಂಕಿ0ಗ್ ಸೇವೆಗಳು ಎಂದಿನAತೆ ಲಭ್ಯವಿರಲಿವೆ ಎಂದು ತಿಳಿಸಿದ್ದಾರೆ.

Spread the love

You may also like

Leave a Comment

➤ ಆಧಿಶಕ್ತಿ ಸಂಸ್ಥಾನ ಮಠಕ್ಕೆ ೧೦ ಎಕರೆ ಜಮೀನು ಮಂಜೂರು ಮಾಡಲು ಸಿಎಂಗೆ ಮನವಿ   ➤ ಭಾನುವಾರವೂ ಬ್ಯಾಂಕ್ ಸೇವೆ ಲಭ್ಯ   ➤ ಕನಿಷ್ಟ ವೇತನ ಜಾರಿಗೊಳಿಸಲು ಸರಕಾರದ ಮೇಲೆ ಒತ್ತಡ ತನ್ನಿ   ➤ ೨೦೨೮ ರ ವೇಳೆಗೆ ಭಾರತವನ್ನು ನಶಾ ಮುಕ್ತ ದೇಶ ಮಾಡುವ ಗುರಿ   ➤ ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಸ್ಥಳಗಳಿಗೆ ಸಿಇಒ ದಿಢೀರ್ ಭೇಟಿ