ಹೊಸಕೋಟೆ : ತಾಲೂಕಿನ ನಂದಗುಡಿ ಹೋಬಳಿ ಶಿವನಾಪುರದಲ್ಲಿರುವ ಶ್ರೀ ಆಧಿ ಶಕ್ತಿ ಸಂಸ್ಥಾನದ ಮಠಕ್ಕೆ ಹತ್ತು ಎಕರೆ ಜಮೀನು ಮಂಜೂರು ಮಾಡಲು ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವನ್ನಿಕುಲ ನಿಯೋಗ ಮನವಿ ಮಾಡಿದೆ.
ಹೊಸಕೋಟೆ ವನ್ನಿಕುಲ ನಿಯೋಗ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡರೊಂದಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಧಾರ್ಮಿಕ ಕರ‍್ಯಗಳಿಗೆ ಅನುಕೂಲವಾಗುವಂತೆ ಸಂಸ್ಥಾನಕ್ಕೆ ಹತ್ತು ಎಕೆರೆ ಜಮೀನು ಮಂಜೂರು ಮಾಡಬೇಕು.ಪ್ರತಿ ವರ್ಷ ನಡೆಯುವ ಧ್ರೌಪತಿ ಜಯಂತಿಯನ್ನು ಸರಕಾರದಿಂದ ಆಚರಣೆ ಮಾಡಬೇಕು.
ವಸತಿ ಶಾಲೆ ನಿರ್ಮಾಣಕ್ಕೆ ಅಗತ್ಯ ಅನುಧಾನವನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸಮುದಾಯದ ಮುಖಂಡ ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ಶಾಸಕ ಶರತ್ ಬಚ್ಚೇಗೌಡರೊಂದಿಗೆ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಮೂರು ಬೇಡಿಕೆಗಳನ್ನಿಟ್ಟು ಮನವಿ ಸಲ್ಲಿಸಲಾಯಿತು. ಮುಖ್ಯಮಂತ್ರಿಗಳು ಈ ಮೂರು ಬೇಡಿಕೆಗಳನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.ಸಮಾಜದ ಎಲ್ಲ ಕುಲಬಾಂದವರು ಮುಖ್ಯಮಂತ್ರಿಗಳಿಗೆ ಅಭಾರಿಯಾಗಿದ್ದೇವೆ ಎಂದರು.
ಆಧಿ ಶಕ್ತಿ ಸಂಸ್ಥಾನ ಮಠದ ಪ್ರಣವಾನಂದ ಸ್ವಾಮೀಜಿ, ಆದಿಶಕ್ತಿ ಮಠದ ಟ್ರಸ್ಟಿ ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಿ.ಮುನಿಯಪ್ಪ, ರಾಜ್ಯ ವನ್ನಿಕುಲ ಕ್ಷತ್ರೀಯ ತಿಗಳ ಸಂಘದ ಮಾಜಿ ರಾಜ್ಯಾಧ್ಯಕ್ಷ ಸಿ.ಜಯರಾಜ್,ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಜಿಕುಮಾರ್, ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಭೇಟಿಯ ತಂಡದಲ್ಲಿದ್ದರು.
ಆಧಿಶಕ್ತಿ ಸಂಸ್ಥಾನ ಮಠಕ್ಕೆ ೧೦ ಎಕರೆ ಜಮೀನು ಮಂಜೂರು ಮಾಡಲು ಸಿಎಂಗೆ ಮನವಿ
ಹೊಸಕೋಟೆ ವನ್ನಿಕುಲ ನಿಯೋಗದಿಂದ ಮುಖ್ಯಮಂತ್ರಿಗಳಿಗೆ ಮನವಿ
75
previous post

