Home ಅಪರಾಧಹಿರಿಯ ನಾಗರೀಕರಿಗೆ ಆಸರೆಯಾಗಿ ನಿಂತ ಪೊಲೀಸರು

ಹಿರಿಯ ನಾಗರೀಕರಿಗೆ ಆಸರೆಯಾಗಿ ನಿಂತ ಪೊಲೀಸರು

ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಸರೆ

by Editor

ಸೂಲಿಬೆಲೆ : ಪೊಲೀಸ್ ಇಲಾಖೆಯ ಮಹತ್ವಕಾಂಕ್ಷೆ ಯೋಜನೆಯಾಗಿರುವ ಹಿರಿಯ ನಾಗರೀಕರಿಗೆ ದೈರ್ಯ ತುಂಬಿ ಜತೆಯಲ್ಲಿ ನಾವಿದ್ದೇವೆ ಎಂಬು ಪೊಲೀಸ್ ಇಲಾಖೆಯ ಮಹತ್ವ ಕಾಂಕ್ಷೆ ಯೋಜನೆಯಾಗಿರುವ ಆಸರೆ ಕರ‍್ಯಕ್ರಮವನ್ನು ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಾರಿ ಮಾಡಲಾಗಿದೆ ಎಂದು ಸಿಪಿಐ ರವಿಕುಮಾರ್ ತಿಳಿಸಿದ್ದಾರೆ.
ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿನ ಒಂಟಿ ಹಿರಿಯ ನಾಗರೀಕರ ಮನೆಗಳಿಗೆ ಭೇಟಿ ನೀಡಿ ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ನಂತರ ಮಾತನಾಡಿದ ಅವರು, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿರಿಯ ನಾಗರೀಕರು ಒಂಟಿಯಾಗಿ ಅಥವಾ ಗಂಡ ಹೆಂಡತಿ ಮಾತ್ರ ವಾಸವಿದ್ದು ಅವರ ಮನದಲ್ಲಿ ಮೂಡುವ ಅಭದ್ರತೆ, ಅಸುರಕ್ಷತೆ ಹೋಗಲಾಡಿಸಿ ವಿಶ್ವಾಸ ತುಂಬುವುದು ಆಸರೆ ಕರ‍್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಆಸರೆ ಎಂಬ ಸಮುದಾಯ ಪೊಲೀಸ್ ಪರಿಕಲ್ಪನೆಯಲ್ಲಿ ಸುರಕ್ಷೆ, ಭದ್ರತೆ, ಯೋಗಕ್ಷೆಮ, ವಿಶ್ವಾಸ ನೀಡುವಂತಹ ಹಾಗೂ ಅವರು ಒಂಟಿಯಲ್ಲ ಅವರೊಂದಿಗೆ ಪೊಲೀಸ್ ಇಲಾಖೆ ಹಾಗೂ ಸರಕಾರ ಅವರ ಜತೆಯಿದೆ ಎಂಬ ಬಲವಾದ ನಂಬಿಕೆ ಮತ್ತು ವಿಶ್ವಾಸ ಮೂಡಿಸುವುದಾಗಿದೆ. ಠಾಣಾ ವ್ಯಾಪ್ತಿಯಲ್ಲಿನ ಪ್ರತಿ ಬೀಟ್‌ಗೆ ಪೊಲೀಸರನ್ನು ನೇಮಕ ಮಾಡಲಾಗಿದೆ. ಪ್ರತಿ ಬೀಟ್‌ನಲ್ಲಿ ಒಂಟಿಯಾಗಿ ವಾಸಿಸುವ ಹಿರಿಯ ನಾಗರೀಕರ ಮಾಹಿತಿಯನ್ನು ಪಡೆಯಲಾಗುತ್ತಿದೆ. ಇದರ ಜತೆ ಬೆಳಗಿನ ಸಮಯದಲ್ಲಿ ಹಿರಿಯ ನಾಗರೀಕರನ್ನು ಖುದ್ದು ಪೊಲೀಸರೇ ಬೇಟಿ ಮಾಡಿ ಅವರಲ್ಲಿನ ಸಮಸ್ಯೆಗಳು, ತೊಂದರೆಗಳು ಹಾಗೂ ಸುತ್ತ ಮುತ್ತಲ ವಾತಾವರಣ, ಅವರ ಭದ್ರತೆ ಬಗ್ಗೆ ಇತರೆ ಮಾಹಿತಿಗಳನ್ನು ಕೂಲಂಕುಷವಾಗಿ ಪಡೆಯಲಾಗುತ್ತದೆ. ಅವರ ಮನೆ ಸುತ್ತಮುತ್ತ ನಿಗಾ ವಹಿಸುವುದು, ವಾರಕೊಮ್ಮೆ ಅವರನ್ನು ಬೆಳಗಿನ ಸಂದರ್ಭದಲ್ಲಿ ಬೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿ ಆರೋಗ್ಯ ವ್ಯತ್ಯಯವಿದ್ದಲ್ಲಿ ಅಂಬ್ಯುಲೆನ್ಸ್ ಒದಗಿಸುವುದರ ಮೂಲಕ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಬAಧಪಟ್ಟ ಬೀಟ್ ಪೊಲೀಸರ ದೂರವಾಣಿ ಸಂಖ್ಯೆಯನ್ನು ಅವರಿಗೆ ನೀಡಿದ್ದು, ಅವಶ್ಯಕತೆ ಇದ್ದಾಗ ಕರೆ ಮಾಡಲು ತಿಳಿಸಲಾಗಿದೆ. ಆಸರೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗಿದೆ ಎಂದು ತಿಳಿಸಿದರು.

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ