ಸೂಲಿಬೆಲೆ : ಮುಂದಿನ ದಿನಗಳಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.೧೦೦ ರಷ್ಟು ಫಲಿತಾಂಶದ ಗುರಿಯನ್ನು ಪ್ರತಿಯೊಂದು ಶಾಲೆ ಹೊಂದಿರಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು
೨ ಕೋಟಿ ವೆಚ್ಚದಲ್ಲಿ ನವೀಕರಣಗೊಂಡ ಸೂಲಿಬೆಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ವೀಕ್ಷಣೆ ಮತ್ತು ಉದ್ಘಾಟನೆ ಕಾರ್ಯ ನಡೆಸಿ ಅವರು ಮಾತನಾಡಿದರು
ಸರಕಾರ ಜನರ ತೆರಿಗೆ ಹಣದಿಂದಲೇ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದು,ಶಾಲಾ,ಕಾಲೇಜುಗಳ ಕಟ್ಟಡ ಮತ್ತು ಅಲ್ಲಿರುವ ವಸ್ತುಗಳನ್ನು ಅಷ್ಟೇ ಜೋಪಾನವಾಗಿ ವಿದ್ಯಾರ್ಥಿಗಳು ನೋಡಿಕೊಳ್ಳಬೇಕು. ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ೨೫ ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದು, ಇದನ್ನು ಸುಮಾರು ೨ ಕೋಟಿ ವೆಚ್ಚದಲ್ಲಿ ಪೂರ್ಣ ಪ್ರಮಾಣದಲ್ಲಿ ನವೀಕರಣ ಮಾಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.ಕಳೆದ ಸಾರಿ ಈ ಶಾಲೆಯ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೨೩ ಅಂಕಪಡೆದುಕೊAಡಿದ್ದು, ಈ ಬಾರಿ ೬೨೫ಕ್ಕೆ ೬೨೫ ಅಂಕ ಪಡೆದು ಶಾಲೆಗೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಶಾಲೆಗೆ ಅಗತ್ಯವಾಗಿರುವ ಕಂಪ್ಯೂಟರ್ ಗಳು ಬೇಡಿಕೆಯನ್ನು ಪ್ರಾಂಶುಪಾಲರು ಸಲ್ಲಿಸುತ್ತಿದ್ದಂತೆ ೧೦ ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡುವುದಾಗಿ ಶಾಸಕರು ತಿಳಿಸಿದರು
ಪ್ರಾಂಶುಪಾಲ ವೆಂಕಟೇಶ್ ಮಾತನಾಡಿ,ಶಾಲೆಯಲ್ಲಿರುವ ಮಕ್ಕಳ ಕಲಿಕೆಗೆ ಅಗತ್ಯವಾಗಿರುವ ಎಲ್ಲ ಸೌಲಭ್ಯಗಳನ್ನು ಶಾಸಕರು,ಬೆಂಡಿಗಾನಹಳ್ಳಿ ಕುಟುಂಬದವರು ಕಲ್ಪಿಸಿಕೊಟ್ಟಿದ್ದು,ಅವರ ನಿರೀಕ್ಷೆಗೆ ತಕ್ಕಂತೆ ಉತ್ತಮ ಫಲಿತಾಂಶ ನೀಡಲು ಶ್ರಮಿಸುತ್ತೇವೆ. ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡರು ವೈಯಕ್ತಿಕವಾಗಿ ಸುಮಾರು ೨೦ ಲಕ್ಷ ಅಧಿಕ ವೆಚ್ಚದಲ್ಲಿ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡರ ಹೆಸರಿನಲ್ಲಿ ರಂಗಮAದಿರ ನಿರ್ಮಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದರು
ಸೂಲಿಬೆಲೆ ಸರಕಾರಿ ಪಿಯು ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎನ್ ಗೋಪಾಲಗೌಡ ಮಾತನಾಡಿ,ಹೊಸಕೋಟೆ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರ ಶಾಸಕರು ಹೆಚ್ಚು ಒತ್ತು ನೀಡಿ ಮಕ್ಕಳ ಕಲಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.ಅಕ್ಷರ ಕಲಿಕೆಯಿಂದ ಮಾತ್ರ ಮನುಷ್ಯನ ಜೀವನ ಮತ್ತು ಸಮಾಜ ಬದಲಾವಣೆ ಹೊಂದಲು ಸಾಧ್ಯ ಎಂದರು.
ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಬಿ.ವೆAಕಟೇಶಪ್ಪ, ಯುವ ಮುಖಂಡ ನಾರಾಯಣಗೌಡ, ಗ್ರಾಪಂ ಅಢಳಿತಾಧಿಕಾರಿ ಸುಬ್ರಮಣಿ, ಪಿಡಿಓ ವಿಜಯಕುಮಾರಿ, ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ, ಸಿರ‍್ಪಿ ಮಂಜುನಾಥ್, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸಪ್ಪ, ಗ್ಯಾರಂಟಿ ಯೋಜನೆ ಜಿಲ್ಲಾ ನಿರ್ದೇಶಕ ಸೈಯದ್ ಮಹಬೂಬ್, ಹಿಂದುಳಿದ ವರ್ಗಗಳ ಇಲಾಖೆ ತಾಲ್ಲೂಕು ಅಧಿಕಾರಿ ವಿನೋದ ಸೇರಿದಂತೆ ಗ್ರಾಪಂ ಮಾಜಿ ಅಧ್ಯಕ್ಷರು,ಸದಸ್ಯರು,ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕರು ಹಾಜರಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.೧೦೦ ರಷ್ಟು ಫಲಿತಾಂಶ ಗುರಿ ಸಾಧಿಸಿ
ಸೂಲಿಬೆಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ೧೦ ಕಂಪ್ಯೂಟರ್ ಕೊಡುಗೆ ಕೊಟ್ಟ ಶಾಸಕ ಶರತ್ ಬಚ್ಚೇಗೌಡ
15

