Home ರಾಜ್ಯಎಲ್ಲರೂ ವಿಜ್ಞಾನವನ್ನು ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕು

ಎಲ್ಲರೂ ವಿಜ್ಞಾನವನ್ನು ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕು

ಕರ್ನಾಟಕ ರಾಜ್ಯ ವೈಜ್ಞಾನಿಕ ವಿಜ್ಞಾನ ಪರಿಷತ್ ವತಿಯಿಂದ ವಿಜ್ಞಾನ ದಿನ

by Editor

ಸೂಲಿಬೆಲೆ; ಆಧುನಿಕ ಜೀವನದಲ್ಲೂ ಕೆಲವು ಭಾಗಗಳಲ್ಲಿ ಇನ್ನು ಮೌಡ್ಯ ಜೀವಂತವಾಗಿದೆ ವಿಜ್ಞಾನ ಮುಂದುವರೆದಿದ್ದು ಎಲ್ಲರೂ ವಿಜ್ಞಾನವನ್ನು ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ವಿಜ್ಞಾನಪರಿಷತ್ ಜಿಲ್ಲಾ ಉಪಾಧ್ಯಕ್ಷ ತರಬಹಳ್ಳಿ ಮಂಜುನಾಥ್ ಹೇಳಿದರು
ಸೂಲಿಬೆಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ವಿಜ್ಞಾನ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟಿçÃಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಜ್ಞಾನ ಎಂಬುದು ಜೀವನದ ಒಂದು ಅವಿಭಾಜ್ಯ ಅಂಗವಾಗಿ ಇಂದು ಸ್ಪರ್ದಾತ್ಮಕ ಜಗತ್ತಿನಲ್ಲಿ ಸಾಗುತ್ತಿದೆ ಇದನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಜ್ಞಾನ ಶಿಕ್ಷಕ ಅಚ್ಚುತ್ ಮಾತನಾಡಿ ವಿಜ್ಞಾನಿ ಸಿ.ವಿ.ರಾಮನ್ ಅವರ ಸ್ಮರಣೆ ಅಂಗವಾಗಿ ರಾಷ್ರೀಯ ವಿಜ್ಞಾನ ಆಚರಣೆ ಮಾಡಲಾಗುತ್ತಿದೆ ೧೯೩೦ ರಲ್ಲಿ ಏಷ್ಯಾದಲ್ಲಿಯೇ ಪ್ರಥಮ ನೋಬಲ್ ಪ್ರಶಸ್ತಿ ಪಡೆದ ವಿಜ್ಞಾನಿಯಾಗಿರುವುದು ಭಾರತೀಯರ ಹೆಮ್ಮೆಯ ವಿಚಾರ ೧೯೮೭ ರಲ್ಲಿ ಪ್ರಥಮ ವಿಜ್ಞಾನ ದಿನಾಚರಣೆ ಪ್ರಥಮ ಆಚರಣೆ ಪ್ರಾರಂಭವಾಯಿತು ವಿಜ್ಞಾನದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಹಾಗೂ ನೈಜ ವಿಜ್ಞಾನದ ಸದುಪಯೋಗವಾಗಬೇಕು ಎಂದರು.
ಪ್ರಾAಶುಪಾಲ ವೆಂಕಟೇಶ್ ಮಾತನಾಡಿ ವಿದ್ಯಾರ್ಥಿಗಳು ವಿಜ್ಞಾನ ವಿಷಯಕ್ಕೆ ಹೆಚ್ಚಿನ ಅವಕಾಶ ನೀಡಬೇಕು ಹಾಗೂ ಉನ್ನತ ವ್ಯಾಸಂಗದಲ್ಲೂ ವಿಜ್ಞಾನದ ವಿಷಯಗಳ ಆಯ್ಕೆಯನ್ನು ಪ್ರೋತ್ಸಾಹಿಸಬೇಕು ದೇಶದ ಅಭಿವೃದ್ದಿ ದೃಷ್ಟಿಯಲ್ಲಿ ವಿಜ್ಞಾನಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದರು.
ಜಿಲ್ಲಾಧ್ಯಕ್ಷ ಎಂ.ಆರ್. ಉಮೇಶ್ ಶಾಲಾ ಮಕ್ಕಳಿಗೆ ಉಚಿತವಾಗಿ ಎಕ್ಸಾಂ ಪ್ಯಾಡ್ ವಿತರಣೆ ಮಾಡಿದರು.
ಸಮಿತಿಯ ಜಿಲ್ಲಾಧ್ಯಕ್ಷ ಎಂ.ಆರ್.ಉಮೇಶ್. ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಹೋಬಳಿ ಅಧ್ಯಕ್ಷ ನಯಾಜ್ ಖಾನ್, ಮಹಿಳಾ ಅಧ್ಯಕ್ಷ ಪದ್ಮಾವತಿ, ಕಸಾಪ ಅಧ್ಯಕ್ಷ ಪ್ರೇಮಕುಮಾರ್, ಮಾನವ ಹಕ್ಕುಗಳ ಅದ್ಯಕ್ಷೆ ರಾಜೇಶ್ವರಿ, ಸೈಯದ್ ಮಹಬೂಬ್, ಜಿಯಾವುಲ್ಲಾ, ಇತರರು ಇದ್ದರು.

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ