ಹೊಸಕೋಟೆ : ರಾಜ್ಯ ರಾಜಕಾರಣದಲ್ಲಿ ತನ್ನಾದೆಯಾದ ಛಾಪು ಮೂಡಿಸಿರುವ ರಾಜ್ಯ ಆಹಾರ ಮತ್ತು ನಾಗರೀಕ ಸರಭರಾಜು ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ ಜನಪರ ಕಾಳಜಿವುಳ್ಳ ನಾಯಕ.ಇವರ ಸೇವೆ ರಾಜ್ಯಕ್ಕೆ ಅತ್ಯುತ್ತಮವಾಗಿದೆ ಎಂದು ಹೊಸಕೋಟೆ ಯೋಜನಾ ಪ್ರಾಧಿಕಾರ ನಿರ್ದೇಶಕ ಡಾ.ಹೆಚ್.ಎಂ ಸುಬ್ಬರಾಜ್ ಹೇಳಿದ್ದಾರೆ.
ಸಚಿವ ಕೆ.ಹೆಚ್ ಮುನಿಯಪ್ಪ ಅವರ ಜನ್ಮ ದಿನಕ್ಕೆ ಶುಭ ಕೋರಿ ಮಾತನಾಡಿದ ಅವರು,ಸುಧಿರ್ಘ ಅವಧಿಗೆ ಲೋಕಸಭಾ ಸದಸ್ಯರಾಗಿ,ನಂತರ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಿ ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಪಡೆದು ಸಚಿವರಾಗಿರುವ ಕೆ.ಹೆಚ್ ಮುನಿಯಪ್ಪ ಅವರ ಅನುಭವಿ ರಾಜಕಾರಣ ರಾಜ್ಯದ ಜನತೆಗೆ ಅಗತ್ಯವಾಗಿದೆ.ರಾಜ್ಯದಲ್ಲಿ ಮಾಧಾರ ಮಹಾಸಭಾ ಕಟ್ಟುವಲ್ಲಿ,ಒಳ ಮೀಸಲಾತಿ ಜಾರಿ ಮಾಡಿಸುವಲ್ಲಿ ಅವರ ಹೋರಾಟ,ಶ್ರಮ ಸ್ಮರಣೀಯವಾಗಿದೆ.ಮಾದಾರ ಸಮುದಾಯ ಪರವಾಗಿ ರಾಜ್ಯದಲ್ಲಿ ಧ್ವನಿ ಎತ್ತುವ ನಾಯಕರಲ್ಲಿ ಮಂಚೂಣಿಯಲ್ಲಿರುವ ಇವರು ಹಾಗೂ ಸಮುದಾಯದ ಆನೇಕ ರಾಜಕಾರಣಿಗಳು, ಮುಖಂಡರ ಹೋರಾಟದ ಫಲವಾಗಿ ಒಳ ಮೀಸಲಾತಿ ಜಾರಿಯಾಗಲು ಕಾರಣವಾಯಿತು.ರಾಜ್ಯದಲ್ಲಿ ಮಾದಾರ ಸಮುದಾಯದ ನಾಯಕನಾಗಿ ಹೊರ ಹೊಮ್ಮಿರುವ ಕೆ.ಹೆಚ್ ಮುನಿಯಪ್ಪ ಅವರ ಜನಪರ ಸೇವೆ ನಮ್ಮಂಥ ಆನೇಕ ಮುಖಂಡರಿಗೆ ದಾರಿ ದೀಪವಾಗಿದೆ.ಸಮುದಾಯದ ಯುವ ಮುಖಂಡರನ್ನು ಅವರು ಪ್ರೋತ್ಸಾಹಿಸಿ ಬೆಳೆಸುತ್ತಿದ್ದು, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಮಾದಾರ ಮಹಾಸಭಾ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವಲ್ಲಿ ಸಚಿವರು ಮಾರ್ಗದರ್ಶಕರಾಗಿದ್ದಾರೆ.ಅವರಿಗೆ ದೇವರು ಮತ್ತಷ್ಟು ಆರೋಗ್ಯ ಶಕ್ತಿಯನ್ನು ನೀಡಲಿ ಎಂದರು
ಇದೇ ಸಂದರ್ಭದಲ್ಲಿ ಹೊಸಕೋಟೆ,ದೇವನಹಳ್ಳಿ ಭಾಗದ ಮಾದಾರ ಮಹಾಸಭಾ ಸಮುದಾಯದ ಮುಖಂಡರು ಹಾಜರಿದ್ದರು
ಕೆಹೆಚ್‌ಎಂ ಜನಪರ ಕಾಳಜಿ ನಾಯಕ
ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪಗೆ ಶುಭಕೋರಿದ ಬಿಎಂರ‍್ಡಿ ನಿರ್ದೇಶಕ ಡಾ.ಹೆಚ್.ಎಂ ಸುಬ್ಬರಾಜ್
13
previous post

