Home ರಾಜ್ಯಅಲೆದಾಟ ತಪ್ಪಿಸಿ,ಮನೆ ಬಾಗಿಲಿಗೆ ಸೌಲಭ್ಯ ಕೊಟ್ಟ ಸರಕಾರ

ಅಲೆದಾಟ ತಪ್ಪಿಸಿ,ಮನೆ ಬಾಗಿಲಿಗೆ ಸೌಲಭ್ಯ ಕೊಟ್ಟ ಸರಕಾರ

ದೊಡ್ಡಅರಳಿಗೆರೆ ಗ್ರಾಪಂ ಕಚೇರಿಯಲ್ಲಿ ಪೋಡಿ,ಪೌತಿ ದಾಖಲೆ ವಿತರಿಸಿದ ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡ

by Editor

ಸೂಲಿಬೆಲೆ : ಹಲವಾರು ವರ್ಷಗಳಿಂದ ರೈತರು ತಮ್ಮ ಜಮೀನುಗಳ ಪೋಡಿಗಾಗಿ ಅಲೆಯುತ್ತಿದ್ದರು,ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ್ಮೇಲೆ ಈ ಅಲೆದಾಟ ತಪ್ಪಿಸಿ ಮನೆ ಬಾಗಿಲಿಗೆ ಪೋಡಿ ದಾಖಲೆಗಳನ್ನು ತಲುಪಿಸುತ್ತಿರುವುದು ಸರಕಾರದ ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ ಎಂದು ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡರು ಹೇಳಿದರು.

ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿ ದೊಡ್ಡ ಅರಳಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ರೈತರಿಗೆ ಪೋಡಿ ದಾಖಲೆಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೊಸಕೋಟೆ ತಾಲೂಕಿನಲ್ಲಿ ಸಾಕಷ್ಟು ಮಂದಿ ರೈತರು ಪೂರ್ವಜರ ಕಾಲದಿಂದಲೂ ಜಮೀನುಗಳಿದ್ದರೂ ಅದಕ್ಕೆ ಅಗತ್ಯವಾಗಿರುವ ಸರಕಾರಿ ಪೋಡಿ ದಾಖಲೆಗಳು ಇರಲಿಲ್ಲ. ಪೋಡಿಗಾಗಿ ಕಚೇರಿಗಳತ್ತ ಅಲೆಯುತ್ತಿದ್ದರೂ ಸಕಾಲಕ್ಕೆ ಪೋಡಿ ಕರ‍್ಯವಾಗದೆ ವರ್ಷನುಗಟ್ಟಲೇ ಅಲೆಯಬೇಕಿತ್ತು. ಕಂದಾಯ ಸಚಿವ ಕೃಷ್ಣ ಬೈರೇಗೌಡರು ಪೌತಿ ಖಾತೆ ಆಂದೋಲನ, ಪೋಡಿ ಮುಕ್ತ ಗ್ರಾಮದಂತೆ ಯೋಜನೆಗಳನ್ನು ಜಾರಿ ರೈತರ ಮನೆಗೆ ಬಾಗಿಲಿಗೆ ಸೌಲಭ್ಯ ತಲುಪಿಸುತ್ತಿದ್ದಾರೆ. ಹೊಸಕೋಟೆ ತಾಲೂಕಿನ ಶಾಸಕ ಶರತ್ ಬಚ್ಚೇಗೌಡರು ಅಧಿಕಾರಿಗಳ ಮೂಲಕ ಹೆಚ್ಚಿನ ಗುರಿಯನ್ನು ಸಾಧಿಸಿ ಜನರಿಗೆ ಸೌಲಭ್ಯ ತಲುಪಿಸಿದೆ. ಜನರಿಗೆ ಒಳಿತು ಮಾಡುವ ಸರಕಾರವನ್ನು ನಾವೆಲ್ಲ ಬೆಂಬಲಿಸಬೇಕು.
ದೊಡ್ಡ ಅರಳಿಗೆರೆ ಗ್ರಾಪಂ ವ್ಯಾಪ್ತಿಯಲ್ಲೂ ಸಾಕಷ್ಟು ರೈತರು ಈ ಯೋಜನೆಗಳ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದರು.

ತಹಸೀಲ್ದಾರ್ ಕೆ.ಎಸ್ ಸೋಮಶೇಖರ್ ಮಾತನಾಡಿ,ಕಂದಾಯ ಇಲಾಖೆ ಅಧಿಕಾರಿಗಳ ರೈತರ ಮನೆಗೆ ಬಾಗಿಲಿಗೆ ತೆರೆಳಿ ಅಗತ್ಯ ದಾಖಲೆಗಳನ್ನು ಪಡೆದು ತಮ್ಮ ಜಮೀನುಗಳಿಗೆ ಪೋಡಿ ಮಾಡಿಕೊಟ್ಟಿದ್ದಾರೆ. ಜನರು ಕಚೇರಿಗೆ ಅಲೆಯುವುದನ್ನು ತಪ್ಪಿಸಿ ಮನೆ ಬಾಗಿಲಿಗೆ ಸೌಲಭ್ಯ ನೀಡುವುದು ಕಂದಾಯ ಇಲಾಖೆ ಗುರಿಯಾಗಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಅಪೋಡಿ ಮತ್ತು ಪೌತಿ ಖಾತೆ ಮಾಡಿ ನೀಡುವಲ್ಲಿ ಹೆಚ್ಚು ಗುರಿಯನ್ನು ಹೊಸಕೋಟೆ ತಾಲೂಕು ಸಾಧಿಸಿದೆ ಎಂದರು.
ಪೋಡಿ ಹಾಗೂ ಪೌತಿ ಖಾತೆ ದಾಖಲೆ,ಸಾಮಾಜಿಕ ಭದ್ರತಾ ಯೋಜನೆ ಆದೇಶ ಪ್ರತಿಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಆದೇಶ ಪತ್ರಿಗಳನ್ನು ವಿತರಿಸಲಾಯಿತು. ದೊಡ್ಡ ಅರಳಿಗೆರೆ ಗ್ರಾಪಂ ವ್ಯಾಪ್ತಿಯ ದ್ಯಾವಸಂದ್ರ, ತಿಮ್ಮಪ್ಪನಹಳ್ಳಿ, ಬೆಂಡಿಗಾನಹಳ್ಳಿ, ತೆನೆಯೂರು ಗ್ರಾಮದ ರೈತ ಫಲಾನುಭವಿಗಳು ಕರ‍್ಯಕ್ರಮದಲ್ಲಿ ಭಾಗವಹಿಸಿದ್ದರು.
ಕರ‍್ಯಕ್ರಮದಲ್ಲಿ ಸೂಲಿಬೆಲೆ ನಾಡ ಕಚೇರಿಯ ರಾಜಸ್ವ ನಿರೀಕ್ಷಕ ಜ್ಞಾನಮೂರ್ತಿ, ಗ್ರಾಮಾಡಳಿತಾಧಿಕಾರಿ ಲಕ್ಷö್ಮಣ್, ಚಕ್ರವರ್ತಿ ಹಾಗೂ ಗ್ರಾಪಂ ಅಧಿಕಾರಿಗಳು ಹಾಜರಿದ್ದರು.

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ