Home ರಾಜ್ಯವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ವಿಜ್ಞಾನ ಪರಿಷತ್ ವತಿಯಿಂದ ವಿಜ್ಞಾನ ದಿನಾಚರಣೆ

by Editor

ಸೂಲಿಬೆಲೆ : ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆಯ ಮನೋಭಾವ ಬೆಳೆಸಿಕೊಳ್ಳಬೇಕು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ಎಂ.ಆರ್ ಉಮೇಶ್ ಹೇಳಿದರು
ಸೂಲಿಬೆಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟಿç0ಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷ ತರಬಹಳ್ಳಿ ಮಂಜುನಾಥ್ ಮಾತನಾಡಿ,ವಿಜ್ಞಾನ ಬೆಳೆಯುತ್ತಿದ್ದಂತೆ ನಮ್ಮ ಯೋಚನೆಗಳು ಬದಲಾವಣೆಯಾಗಬೇಕು.ಮೌಡ್ಯವನ್ನು ನಂಬುವ0ತ ಕಾಲದಲ್ಲಿ ನಾವಿಲ್ಲ.ಎಲ್ಲವೂ ಪ್ರಶ್ನಾರ್ಥಕವಾಗಿ ಚಿಂತಿಸಬೇಕು.ಮೌಡ್ಯ ಬಿಟ್ಟು ವಿಜ್ಞಾನವನ್ನು ನಂಬಬೇಕು. ವಿಜ್ಞಾನವನ್ನು ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕು.ಚಿಂತನೆಗಳು ಬದಲಾವಣೆಯಾದಾಗ ನಮ್ಮ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದರು
ವಿಜ್ಞಾನ ಶಿಕ್ಷಕ ಅಚ್ಚುತ್ ಮಾತನಾಡಿ, ವಿಜ್ಞಾನಿ ಸಿ.ವಿ.ರಾಮನ್ ಅವರ ಸ್ಮರಣೆ ಅಂಗವಾಗಿ ರಾಷ್ರೀಯ ವಿಜ್ಞಾನ ಆಚರಣೆ ಮಾಡಲಾಗುತ್ತಿದೆ ೧೯೩೦ ರಲ್ಲಿ ಏಷ್ಯಾದಲ್ಲಿಯೇ ಪ್ರಥಮ ನೋಬಲ್ ಪ್ರಶಸ್ತಿ ಪಡೆದ ವಿಜ್ಞಾನಿಯಾಗಿರುವುದು ಭಾರತೀಯರ ಹೆಮ್ಮೆಯ ವಿಚಾರ. ೧೯೮೭ ರಲ್ಲಿ ಪ್ರಥಮ ವಿಜ್ಞಾನ ದಿನಾಚರಣೆ ಪ್ರಥಮ ಆಚರಣೆ ಪ್ರಾರಂಭವಾಯಿತು. ವಿಜ್ಞಾನದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಹಾಗೂ ನೈಜ ವಿಜ್ಞಾನದ ಸದುಪಯೋಗವಾಗಬೇಕು ಎಂದರು.
ಪ್ರಾ0ಶುಪಾಲ ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ವಿಷಯಕ್ಕೆ ಹೆಚ್ಚಿನ ಅವಕಾಶ ನೀಡಬೇಕು ಹಾಗೂ ಉನ್ನತ ವ್ಯಾಸಂಗದಲ್ಲೂ ವಿಜ್ಞಾನದ ವಿಷಯಗಳ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ದೇಶದ ಅಭಿವೃದ್ದಿ ದೃಷ್ಟಿಯಲ್ಲಿ ವಿಜ್ಞಾನಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದರು.
ಜಿಲ್ಲಾಧ್ಯಕ್ಷ ಎಂ.ಆರ್. ಉಮೇಶ್ ಶಾಲಾ ಮಕ್ಕಳಿಗೆ ಉಚಿತವಾಗಿ ಎಕ್ಸಾಂ ಪ್ಯಾಡ್ ವಿತರಣೆ ಮಾಡಿದರು.
ತಾಲೂಕು ಅಧ್ಯಕ್ಷ ರವಿಕುಮಾರ್, ಹೋಬಳಿ ಅಧ್ಯಕ್ಷ ನಯಾಜ್ ಖಾನ್, ಮಹಿಳಾ ಅಧ್ಯಕ್ಷ ಪದ್ಮಾವತಿ, ಕಸಾಪ ಅಧ್ಯಕ್ಷ ಪ್ರೇಮಕುಮಾರ್, ಮಾನವ ಹಕ್ಕುಗಳ ಅದ್ಯಕ್ಷೆ ರಾಜೇಶ್ವರಿ,ಸೈಯಾದ್ ಮಹಬೂಬ್,ಜೀಯವುಲ್ಲಾ ಹಾಜರಿದ್ದರು

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ