ಸೂಲಿಬೆಲೆ : ಸೂಲಿಬೆಲೆ ಸರ್ವೇ ೧೦ ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಯಲಕ್ಕೆ ಮಂಜೂರಾಗಿರುವ ಜಾಗಕ್ಕೆ ಅಕ್ರಮವಾಗಿ ಗ್ರಾಪಂವತಿಯಿ0ದ ನಿವೇಶನ ಇ-ಸ್ವತ್ತು ದಾಖಲೆ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸರಕಾರಿ ಜಾಗಗಳನ್ನು ಲೂಟಿ ಮಾಡಲು ಸ್ಥಳೀಯ ಅಧಿಕಾರಿಗಳ ಜತೆಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಶಾಮೀಲಾದ್ರಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಹೊಸಕೋಟೆ ತಾಲೂಕು ಸೂಲಿಬೆಲೆ ಸರ್ವೇ ೧೦ ರಲ್ಲಿ ೧ ಎಕರೆ ಜಾಗವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಮಂಜೂರಾಗಿದ್ದು, ೨೦೨೩ ಡಿಸೆಂಬರ್ ೬ ರಂದು ಈ ಜಮೀನು ಸರ್ವೇ ಮಾಡಿ ಹದ್ದುಬಸ್ತು ಮಾಡಿದ್ದರು. ೨೦೨೪ ಮಾರ್ಚಿ ತಿಂಗಳಲ್ಲಿ ಅಂದಿನ ಪ್ರಭಾರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಿದ್ದೇಶ್ ಈ ಜಮೀನಿಗೆ ತಂತಿ ಬೇಲಿಯ ಕಾಂಪೌAಡ್ ಹಾಕಿಸಿದ್ದರು. ಅವರು ತಮ್ಮ ಇಲಾಖೆಗೆ ಮಂಜೂರಾಗಿರುವ ೧ ಎಕರೆ ಪೂರ್ತಿ ಜಮೀನಿಗೆ ತಂತಿಬೇಲಿ ಹಾಕಿಸದೆ ಪಶ್ಚಿಮಕ್ಕೆ ೭೪.೭೫ * ೨೨ ಚದರ ಅಡಿಗಳಷ್ಟು ಖಾಲಿ ಬಿಟ್ಟು ಕಾಂಪೌ0ಡ್ ಹಾಕಿಸಿದ್ದರು. ಖಾಲಿ ಬಿಟ್ಟ ಜಾಗಕ್ಕೆ ನಿವೇಶನ ಅಂತ ಅರ್ಜಿ ಸಲ್ಲಿಸಿದ ಭೂಗಳ್ಳರಿಗೆ ಗ್ರಾಪಂ ಅಧಿಕಾರಿಗಳು ಇ-ಸ್ವತ್ತು ಮಾಡಿಕೊಟ್ಟಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಾಮೀಲಾದ್ರಾ?
ಸರಕಾರ ಮಂಜೂರು ಮಾಡಿರುವ ೧ ಎಕರೆ ಜಾಗಕ್ಕೆ ಪ್ರಭಾರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಾಂಪೌ0ಡ್ ಹಾಕಿಸದೆ ಜಾಗ ಬಿಟ್ಟಿದ್ಯಾಕೆ? ಜಾಗ ಬಿಡಿ ಎಂದು ಸ್ಥಳೀಯ ಗ್ರಾಪಂ ಚುನಾಯಿತ ಪ್ರತಿನಿಧಿಗಳು ಅವರ ಮೇಲೆ ಒತ್ತಡ ಹಾಕಿದ್ರಾ? ಅಕ್ರಮವಾಗಿ ಹಾಸ್ಟಲ್ ಜಾಗದಲ್ಲಿ ನಿವೇಶನ ಮಂಜೂರು ಮಾಡಿಸಿಕೊಳ್ಳಲು ಮುಂದಾದ ವ್ಯಕ್ತಿಗಳ ಜತೆಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಾಮೀಲಾದ್ರಾ? ಎಂಬ ಪ್ರಶ್ನೆಗಳನ್ನು ಎತ್ತಿರುವ ಗ್ರಾಮಸ್ಥರು ತನಿಖೆಗೆ ಒತ್ತಾಯಿಸಿದ್ದಾರೆ.
೨೦ಕ್ಕೂ ಹೆಚ್ಚು ಇ-ಸ್ವತ್ತು?
ಮೆಟ್ರಿಕ್ ನಂತರ ಬಾಲಕಿಯರ ಜಮೀನು ಸೇರಿದಂತೆ ಅದರ ಹಾಜು ಬಾಜು ಖಾಲಿಯಿರುವ ಸರಕಾರಿ ಗೋಮಾಳ ಜಮೀನಿಗೆ ಸ್ಥಳೀಯ ಗ್ರಾಪಂನಲ್ಲಿ ಸುಮಾರು ೨೦ಕ್ಕೂ ಹೆಚ್ಚು ನಿವೇಶನಗಳಿಗೆ ಅಕ್ರಮವಾಗಿ ಇ-ಸ್ವತ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಬಗೆದಷ್ಟು ಅಕ್ರಮ ಇ-ಸ್ವತ್ತು ಪ್ರಕರಣಗಳು ಹೊರಗೆ ಬರುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮತ್ತೊಮ್ಮೆ ಹದ್ದುಬಸ್ತು ಮಾಡಲು ಅರ್ಜಿ
ಹಾಸ್ಟಲ್ ಜಾಗದ ಪ್ರಕರಣ ಹೊರಗೆ ಬರುತ್ತಿದ್ದಂತೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿನೋಧ ತಹಸೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿ ಹಾಸ್ಟಲ್ ಜಾಗ ಮತ್ತೊಮ್ಮೆ ಸರ್ವೆ ಮಾಡಿ ಹದ್ದುಬಸ್ತು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ನಮ್ಮಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.

