Home ರಾಜ್ಯಹೊಸಕೋಟೆ ಯೋಜನಾ ಪ್ರಾಧಿಕಾರ ಸದಸ್ಯ ಡಾ.ಹೆಚ್.ಎಂ ಸುಬ್ಬರಾಜ್ ಜನ್ಮ ದಿನಾಚರಣೆ

ಹೊಸಕೋಟೆ ಯೋಜನಾ ಪ್ರಾಧಿಕಾರ ಸದಸ್ಯ ಡಾ.ಹೆಚ್.ಎಂ ಸುಬ್ಬರಾಜ್ ಜನ್ಮ ದಿನಾಚರಣೆ

ಅಭಿಮಾನಿಗಳು,ಹಿತೈಷಿಗಳಿಂದ ನಾನಾ ಕಡೆ ಸಮಾಜ ಮುಖಿ ಕಾರ್ಯಕ್ರಮಗಳು

by Editor

ಹೊಸಕೋಟೆ : ಜನ್ಮ ದಿನದ ನೆಪದಲ್ಲಿ ದುಂದು ವೆಚ್ಚ ಮಾಡುವುದಕ್ಕಿಂತ ಜನ ಸಾಮಾನ್ಯರಿಗೆ ಕೈಲಾದ ಸಹಾಯ ಮಾಡುವ ಮೂಲಕ ಆಚರಣೆಗಳು ಸಮಾಜ ಮುಖಿಯಾಗಿರಬೇಕು ಎಂದು ಹೊಸಕೋಟೆ ಯೋಜನಾ ಪ್ರಾಧಿಕಾರ ಸದಸ್ಯ ಡಾ.ಹೆಚ್.ಎಂ ಸುಬ್ಬರಾಜ್ ಹೇಳಿದರು

ಹೊಸಕೋಟೆ ಸರಕಾರಿ ಆಸ್ಪತ್ರೆ ಸೇರಿದಂತೆ ವಿವಿಧಡೆ ತಮ್ಮ ಜನ್ಮ ದಿನದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ,ಬಡವರಿಗೆ ವಸ್ತçದಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿ ವರ್ಷ ಬಡವರಿಗೆ ಸಹಾಯ ಮಾಡುವ ಮೂಲಕ ಜನ್ಮ ದಿನ ಆಚರಿಸಿಕೊಳ್ಳಲಾಗುತ್ತಿದೆ. ನನ್ನ ಅಭಿಮಾನಿಗಳು, ಹಿತೃರ್ಷಿಗಳು, ಸ್ನೇಹಿತರು ಸಮಾಜ ಮುಖಿ ಕರ‍್ಯಗಳಿಗೆ ನನ್ನೊಂದಿಗೆ ಕೈ ಜೋಡಿಸಿ ಸಹಾಯ ಮಾಡುತ್ತಿದ್ದಾರೆ. ಕರುನಾಡ ಪ್ರಜಾ ಸೇವಾ ಟ್ರಸ್ಟ್ವತಿಯಿಂದ ಜನ್ಮ ದಿನದ ಅಂಗವಾಗಿ ಸರಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಸೀರೆ ವಿತರಣೆ, ಗೌತಮ್ ಕಾಲೊನಿಯಲ್ಲಿ ಸಂಕಲ್ಪ ಯುವಕರ ಬಳಗದವರು ಮಾರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ ಇಡೀ ಕಾಲೊನಿಗೆ ದವಸ ದಾನ್ಯಗಳನ್ನು ವಿತರಿಸಿದ್ದಾರೆ. ಪಾರ್ವತಿಪುರದ ಆಶ್ವಥ್ ಕಟ್ಟೆ ಬಳಿ ಕಿರಣ್ ತಂಡದವರು, ಓಂಶಕ್ತಿ ಬಳಗದವರು ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ನಡೆಸಲಾಯಿತು. ತಾಲೂಕು ಕಚೇರಿ ಬಳಿ ವಿವಿಧ ಕೆಲಸ ಕರ‍್ಯಗಳಿಗೆ ಆಗಮಿಸಿದ್ದ ನೂರಾರು ರೈತರು ಸಾರ್ವಜನಿಕರಿಗೆ ಅನ್ನ ಸಂರ್ತಪಣೆ ನಡೆಸಲಾಯಿತು. ಸಾವಿತ್ರಿಬಾಯಿಪುಲೆ ಸಂಘಟನೆಯವರು ಪೌರ ಕಾರ್ಮಿಕರಿಗೆ ಸೀರೆಗಳ ವಿತರಣೆ, ಅರುಣ್ ಮತ್ತು ತಂಡದವರು ಮಿಷನ್ ಆಸ್ಪತ್ರೆಯಲ್ಲಿ ಕಂಬಳಿ ವಿತರಣೆ, ಅಭಯ ಆಶ್ರಮಕ್ಕೆ ಬೇಕಾಗಿರುವ ದವಸ ದಾನ್ಯಗಳ ವಿತರಣೆ ಮಾಡಲಾಯಿತು ಎಂದರು

ಯುವಕರಿಗೆ ಕರೆ : ಯುವಕರು ಜನ್ಮ ದಿನ ಆಚರಣೆಗಳ ನೆಪದಲ್ಲಿ ದುಂದು ವೆಚ್ಚ ಮಾಡದೆ ಇನ್ನೋಬ್ಬರಿಗೆ ಆದರ್ಶವಾಗುವಂತ ರೀತಿಯಲ್ಲಿ ಆಚರಣೆಗಳನ್ನು ಮಾಡಿಕೊಳ್ಳುವುದರಿಂದ ಸಮಾಜಕ್ಕೆ ಮಾದರಿಯಾಗುತ್ತೆ.ಮಾನವ ಜನ್ಮದಲ್ಲಿ ಹುಟ್ಟಿದ ನಾವು ಹತ್ತು ಜನಕ್ಕೆ ಒಳ್ಳೆಯದಾಗುವಂತೆ ನಡೆದುಕೊಳ್ಳಬೇಕು. ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಜನ್ಮದಿನದಂದು ಇಂಥ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಎಲ್ಲ ಹಿತೈರ್ಷಿಗಳಿಗೂ ಅಭಾರಿಯಾಗಿದ್ದೇನೆ ಎಂದರು.ಇದೇ ಸಂದರ್ಭದಲ್ಲಿ ಹಲವಾರು ಮುಖಂಡರು ಸುಬ್ಬರಾಜ್ ಅವರನ್ನು ಸನ್ಮಾನಿಸಿ ಗೌರವಿಸಿದರು.

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ