Home ರಾಜ್ಯಹೊಸಕೋಟೆ ತಾಲೂಕಿನಲ್ಲಿ ಹಿಂದೂ-ಮುಸ್ಲಿ0 ಎಂಬ ಭೇದಭಾವ ಇಲ್ಲ

ಹೊಸಕೋಟೆ ತಾಲೂಕಿನಲ್ಲಿ ಹಿಂದೂ-ಮುಸ್ಲಿ0 ಎಂಬ ಭೇದಭಾವ ಇಲ್ಲ

ಹೊಸಕೋಟೆ ತಾಲೂಕು ಇ-ಮುತ್ಸಂದ್ರದಲ್ಲಿ ಹಮ್ಮಿಕೊಂಡಿದ್ದ ರಮ್ಜಾನ್ ಇಪ್ತಿಯಾರ್ ಕೂಟದಲ್ಲಿ ಶಾಸಕ ಬಚ್ಚೇಗೌಡ ಹೇಳಿಕೆ

by Editor

ಹೊಸಕೋಟೆ : ಹೊಸಕೋಟೆ ತಾಲೂಕಿನಲ್ಲಿ ಯಾವ ಗ್ರಾಮಕ್ಕೆ ಹೋದರೂ ಹಿಂದು ಮುಸ್ಲಿಂರು ಸಹೋದರತ್ವದಿಂದ ಬದುಕುತ್ತಿದ್ದಾರೆ. ಹಿಂದೂಗಳ ಹಬ್ಬಕ್ಕೆ ಮುಸ್ಲಿಂಗಳು, ಮುಸ್ಲಿಂ ಹಬ್ಬಕ್ಕೆ ಹಿಂದೂಗಳು ಸೇರಿ ಆಚರಿಸುವ ಪರಂಪರೆ ಇಲ್ಲಿ ಇದೆ. ನಾವೆಲ್ಲರೂ ಒಂದೇ ತಾಯಿ ಮಕ್ಕಳು ಎಂಬ ಭಾವನೆ ಹೊಂದಿದ್ದೇವೆ ಎಂದು ಶಾಸಕ ಶರತ್ ಬಚ್ಚೇಗೌಡರು ಹೇಳಿದರು
ಹೊಸಕೋಟೆ ತಾಲೂಕು ಇ- ಮುತ್ಸಂದ್ರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡರು, ರಂಜಾನ್ ಹಬ್ಬದ ಮೂಲ ಉದ್ದೇಶ ಆತ್ಮಪರಿಶೀಲನೆ ಮಾಡಿಕೊಳ್ಳುವುದು. ವರ್ಷಪೂರ್ತಿ ನಾವು ಮಾಡಿದ ಪಾಪ-ಪುಣ್ಯಗಳನ್ನು ಮನನ ಮಾಡಿಕೊಂಡು ಒಂದು ತಿಂಗಳು ಉಪವಾಸ ಆಚರಿಸುವ ಮೂಲಕ ಆತ್ಮಶುದ್ಧಿ ಮಾಡಿಕೊಳ್ಳಬೇಕು.ಬೆಳಗ್ಗಿನಿಂದ ರಾತ್ರಿ ತನಕ ಉಪವಾಸವಿದ್ದು , ಅನ್ನದ ಬೆಲೆ ಏನೆಂಬುದು ಅರಿತುಕೊಳ್ಳಬೇಕು. ದಿನಕ್ಕೆ ಐದು ಬಾರಿ ಕಡ್ಡಾಯವಾಗಿ ನಮಾಜ್ ಮಾಡುತ್ತಾ ಪವಿತ್ರ ರಮ್ಜಾನ್ ತಿಂಗಳನ್ನು ಭಕ್ತಿಯಿಂದ ಆಚರಿಸಲಾಗುತ್ತದೆ . ಕುರಾನ್‌ನಲ್ಲಿ ಅತ್ಯುತ್ತಮ ಮನುಷ್ಯ ಯಾರು ಎಂಬ ಪ್ರಶ್ನೆಗೆ ಬೇರೆಯವರಿಗಾಗಿ ಬದುಕುವವನೇ ಅತ್ಯುತ್ತಮ ಮನುಷ್ಯ ಎಂದು ಹೇಳಲಾಗಿದೆ ಎಂದು ಅವರು ರಂಜಾನ್ ಹಬ್ಬದ ಮಹತ್ವವನ್ನು ವಿವರಿಸಿದರು.
ಯುವ ಮುಖಂಡ ಬಿ.ಜಿ ನಾರಾಯಣಗೌಡ ಮಾತನಾಡಿ, ಮುತ್ಸಂದ್ರ ಗ್ರಾಮದಲ್ಲಿ ಹಿಂದು ಮತ್ತು ಮುಸ್ಲಿಂ ಒಂದಾಗಿ ಎಲ್ಲ ಹಬ್ಬ ಹರಿದಿನಗಳಲ್ಲಿ ಭಾಗವಹಿಸಿ ಅನ್ಯೋನ್ಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ.ರ0ಜಾನ್ ಮಾಸದಲ್ಲಿ ಉಪವಾಸ ಇರುವುದು ಅನ್ನದ ಮಹತ್ವ ತಿಳಿಯಲು ದೇವರು ತೋರಿಸಿರುವ ಒಂದು ಮಾರ್ಗವಾಗಿದೆ.ಬೆಂಡಿಗಾನಹಳ್ಳಿ ಕುಟುಂಬ ನಿಮ್ಮೊಂದಿಗೆ ಕಷ್ಟ ಸುಖದಲ್ಲಿ ಭಾಗಿಯಾಗಿರುತ್ತದೆ ಎಂದರು
ಗಿಡ್ಡಪ್ಪನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅಕ್ಬರ್ ಆಲಿಖಾನ್ ಮಾತನಾಡಿದರು.ಇದೇ ಸಂದರ್ಭದಲ್ಲಿ ರಂಜಾನ್ ಅಂಗವಾಗಿ ಉಚಿತ ದವಸ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು.
ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡ,ತಾಪಂ ಮಾಜಿ ಅಧ್ಯಕ್ಷ ಬಿ.ವಿ ರಾಜಶೇಖರ್ ಗೌಡ,ಕಂಬಳೀಪುರ ಗ್ರಾಪಂ ಮಾಜಿ ಅಧ್ಯಕ್ಷ ಆನಂದಪ್ಪ,ಹೊಸಕೋಟೆ ನವಾಜ್,ಯಳಚಹಳ್ಳಿ ನಿಸಾರ್,ಮುತ್ಸಂದ್ರ ಸಂತೋಷ್,ನಗರೇನಹಳ್ಳಿ ನಾಗರಾಜಪ್ಪ,ಯನಗುಂಟೆ ರಮೇಶ್,ತಮ್ಮಾರಸನಹಳ್ಳಿ ಯಾರಬ್,ಹೊಸಕೋಟೆ ಆಮಾನ್,ಉಸ್ಮಾನ್,ಪೀರ್ ಸಾಬ್,ಟೌನ್ ಕೋ ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಮಂಜುನಾಥ್,ಉಪಾಧ್ಯಕ್ಷ ಅಕ್ಬರ್ ಬೈರೀ,ಸೇರಿದಂತೆ ಮುತ್ಸಂದ್ರ ಗ್ರಾಮದ ಮುಸ್ಲಿಂ ಸಮುದಾಯದ ಮುಖಂಡರು,ಅಕ್ಕಪಕ್ಕದ ಗ್ರಾಮದ ಮುಖಂಡರು ಭಾಗವಹಿಸಿದ್ದರು.
ಕೋಟ್
ಮುತ್ಸಂದ್ರದ ಸುತ್ತಮುತ್ತ ವೇರ್ ಹೌಸ್ ಕಾರ್ಖಾನೆಗಳು ಹೆಚ್ಚಾಗಿರುವ ಮುತ್ಸಂದ್ರ ಗ್ರಾಮ ದಿನೇ ದಿನೇ ಎಂಜಿ ರೋಡ್ ಮಾದರಿಯಾಗುತ್ತಿದೆ.ಕೆಲಸಗಳಿಗೆ ಹೊರಗಿನ ರಾಜ್ಯದವರು ಹೆಚ್ಚಾಗಿ ಬಂದು ನೆಲೆಸಿರುವ ಹಿನ್ನಲೆಯಲ್ಲಿ ಮಾದಕ ವಸ್ತುಗಳ ದುಶ್ಚಟಗಳ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಇದಕ್ಕೆ ಕಡಿವಾಣ ಹಾಕಿ ಇಂಥ ದುಶ್ಚಟಗಳಿಂದ ಸ್ಥಳೀಯ ಯುವಕರನ್ನು ರಕ್ಷಿಸಿಕೊಳ್ಳಬೇಕಾದ ಜವಾಬ್ದಾರಿ ಗ್ರಾಮಸ್ಥರ ಮೇಲಿರಬೇಕು- ಶರತ್ ಬಚ್ಚೇಗೌಡ | ಶಾಸಕರು

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ