Home ರಾಜ್ಯವ್ಯಾಪಾರ ವಹಿವಾಟು ಹೆಚ್ಚಿಕೊಂಡ ಬಮೂಲ್ ಉತ್ತಮ ಸಾಧನೆ

ವ್ಯಾಪಾರ ವಹಿವಾಟು ಹೆಚ್ಚಿಕೊಂಡ ಬಮೂಲ್ ಉತ್ತಮ ಸಾಧನೆ

ಬೆಂಡಿಗಾನಹಳ್ಳಿಯಲ್ಲಿ ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡ ಹೇಳಿಕೆ

by Editor

ಸೂಲಿಬೆಲೆ : ಬಮೂಲ್ ನಲ್ಲಿ ಡಿ.ಕೆ ಸುರೇಶ್ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ನೂತನ ಆಡಳಿತ ಸೋರಿಕೆಯನ್ನು ತಡೆದು ಸಂಸ್ಥೆ ಲಾಭಾಂಶದತ್ತ ಮುನ್ನುಗಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ವ್ಯಾಪಾರ ಮತ್ತು ವಹಿವಾಟಿನಲ್ಲಿ ಬಮೂಲ್ ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ ಸಾಧನೆಯನ್ನು ತೋರಿದೆ.ಈ ವರ್ಷ ೩೪೦೦ ಕೋಟಿ ವಹಿವಾಟು ಮಾಡಿರುವ ಬಮೂಲ್,ಕಳೆದ ವರ್ಷಕ್ಕಿಂದ ೫೦೦ ಕೋಟಿ ವಹಿವಾಟು ಹೆಚ್ಚಿಸಿಕೊಂಡಿದೆ.ಇದು ಬಮೂಲ್ ಉತ್ತಮ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡರು ಹೇಳಿದರು

ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಡಿ.ಕೆ ಸುರೇಶ್ ಬಮೂಲ್ ಅಧ್ಯಕ್ಷರಾದ ನಂತರ ಅವರ ದೂರದೃಷ್ಟಿ ನೇತೃತ್ವ ಹಾಗೂ ಸಮರ್ಥ ಆಡಳಿತ ಪರಿಣಾಮವಾಗಿ ಬಮೂಲ್ ಕೇವಲ ೮ ತಿಂಗಳ ಆಡಳಿತ ಅವಧಿಯಲ್ಲಿ ಆನೇಕ ಮಹತ್ವದ ಬದಲಾವಣೆಗಳನ್ನು ಬಮೂಲ್‌ನಲ್ಲಿ ತಂದಿದ್ದು,ಬಮೂಲ್ ಆಡಳಿತ ಇತಿಹಾಸದಲ್ಲಿ ಹೊಸ ಮೈಲುಗಲ್ಲಾಗಿದೆ.ಹೈನುಗಾರಿಕೆಯತ್ತ ರೈತರನ್ನು ಆಕರ್ಷಿಸುವುದು,ಉತ್ತಮ ಲಾಭ ಪಡೆಯುವಂತೆ ಅವರಿಗೆ ಪ್ರೋತ್ಸಾಹ ನೀಡುವುದು ಬಮೂಲ್ ಮುಖ್ಯ ಗುರಿಯಾಗಿದೆ ಎಂದರು

ಕಳೆದ ವರ್ಷ ೧೪.೫೦ ಕೋಟಿ ನಷ್ಟದಲ್ಲಿದ್ದ ಬಮೂಲ್ ಸಂಸ್ಥೆ ಡಿ.ಕೆ ಸುರೇಶ್ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಆಡಳಿತದಲ್ಲಿ ಸುಧಾರಣೆಗಳನ್ನು ತಂದು ಸೋರಿಕೆಯನ್ನು ತಡೆದ ಪರಿಣಾಮ ನಷ್ಟದಲ್ಲಿದ್ದ ಸಂಸ್ಥೆ ಇಂದು ಲಾಭಾಂಶದತ್ತ ಮುನ್ನುಗುತ್ತಿದೆ.ಈವರ್ಷ ೬೦ ಕೋಟಿ ಲಾಭಗಳಿಸಿದೆ. ಹೈನುಗಾರರು ಸಾಕಷ್ಟು ಕಷ್ಟ ಪಟ್ಟು ಹೈನುಗಾರಿಕೆಯನ್ನು ಮಾಡುತ್ತಿದ್ದು,ಅವರ ಹಿತವನ್ನು ಗಮನದಲ್ಲಿಟ್ಟುಕೊಂಡು ೨೦೨೫-೨೬ನೇ ಸಾಲಿನಲ್ಲಿ ಸಹಕಾರ ಸಂಘಗಳ ಮೂಲಕ ರೈತರು ಪೂರೈಯಿಸಿರುವ ಪ್ರತಿ ಲೀಟರ್ ಹಾಲಿಗೆ ೧ ರೂ.ಬೋನಸ್ ನೀಡಲಾಗುತ್ತಿದೆ,ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಬಮೂಲ್ ಸಂಸ್ಥೆಯು ಲಾಭವನ್ನು ಹಾಲು ಉತ್ಪಾದಿಸುವ ರೈತರು,ಸಿಬ್ಬಂದಿಗಳು,ಕಾರ್ಮಿಕರು ಹಾಗೂ ಸಂಘಗಳಿಗೆ ಹಂಚುವ ಮೂಲಕ ಆರ್ಥಿಕ ಶಕ್ತಿಯನ್ನು ತುಂಬಲು ಬಮೂಲ್ ಮುಂದಾಗಿದೆ ಎಂದರು

ಬಮೂಲ್ ಸಂಸ್ಥೆಯಲ್ಲಿ ದುಡಿಯುತ್ತಿರುವ ೧೮೦೦ ಗುತ್ತಿಗೆ ಕಾರ್ಮಿಕರಿಗೆ ತಲಾ ೫ ಸಾವಿರದಂತೆ ಉಡುಗೊರೆ ನೀಡಲಾಗುವುದು.೯೦ ಲಕ್ಷ ವೆಚ್ಚದಲ್ಲಿ ಯುಗಾದಿ ಹಬ್ಬಕ್ಕೆ ಉಡುಗೊರೆ ರೂಪದಲ್ಲಿ ವಿತರಣೆ ಮಾಡಲಾಗುವುದು.೨೩೦೦ ಪ್ರಾಥಮಿಕ ಹಾಲು ಉತ್ಪಾದಕ ಸಂಘಗಳಿಗೆ ೧೫ ಸಾವಿರದಂತೆ ಒಟ್ಟು ೩.೪೫ ಕೋಟಿ ವಿತರಣೆ ಮಾಡಿದೆ.ಈ ಮೂಲಕ ಸದಸ್ಯ ಸಂಘಗಳ ಬಲವರ್ಧನೆಗೆ ಅನುಧಾನ,ಸಂಘಗಳ ಕರ‍್ಯಕ್ಷಮತೆ ಹೆಚ್ಚಿಸಿ ಉತ್ತಮ ಸೌಲಭ್ಯ ಒದಗಿಸಲು ಕ್ರಮಕೈಗೊಂಢಿದ್ದು,ಸದಸ್ಯ ಸಂಘಗಳ ಸಮೃದ್ದಿಯೇ ಬಮೂಲ್ ಶಕ್ತಿ ಯಾಗಿದೆ ಎಂದು ಬಿ.ವಿ ಸತೀಶ್‌ಗೌಡ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಹೊಸಹಳ್ಳಿ ಜಯರಾಮಣ್ಣ,ದೊಡ್ಡನಲ್ಲಾಳ ಗ್ರಾಪಂ ಮಾಜಿ ಅಧ್ಯಕ್ಷ ಸಂಜೀವೇಗೌಡ.ಯುವ ಮುಖಂಡ ಹಸಿಗಾಳ ಜಗದೀಶ್ ಹಾಜರಿದ್ದರು.

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ