Home ರಾಜ್ಯಬಿ.ವಿ ಸತೀಶ್‌ಗೌಡರಿಂದ ಫುಡ್ ಕಿಟ್ ವಿತರಣೆ

ಬಿ.ವಿ ಸತೀಶ್‌ಗೌಡರಿಂದ ಫುಡ್ ಕಿಟ್ ವಿತರಣೆ

ರಂಜಾನ್ ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೊಡುಗೆ

by Editor

ಸೂಲಿಬೆಲೆ : ರಂಜಾನ್ ಹಬ್ಬದ ಅಂಗವಾಗಿ ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡರು ಅಲ್ಪಸಂಖ್ಯಾತ ಸಮುದಾಯವರಿಗೆ ಫುಡ್ ಕಿಟ್‌ಗಳನ್ನು ವಿತರಣೆ ಮಾಡಿದರು
ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಫುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಂಜಾನ್ ಹಬ್ಬದ ಮೂಲ ಉದ್ದೇಶ ಆತ್ಮಪರಿಶೀಲನೆ ಮಾಡಿಕೊಳ್ಳುವುದು. ವರ್ಷಪೂರ್ತಿ ನಾವು ಮಾಡಿದ ಪಾಪ-ಪುಣ್ಯಗಳನ್ನು ಮನನ ಮಾಡಿಕೊಂಡು ಒಂದು ತಿಂಗಳು ಉಪವಾಸ ಆಚರಿಸುವ ಮೂಲಕ ಆತ್ಮಶುದ್ಧಿ ಮಾಡಿಕೊಳ್ಳಬೇಕು. ಬೆಳಗ್ಗಿನಿಂದ ರಾತ್ರಿ ತನಕ ಉಪವಾಸವಿದ್ದು , ಅನ್ನದ ಬೆಲೆ ಏನೆಂಬುದು ಅರಿತುಕೊಳ್ಳಬೇಕು.  ದಿನಕ್ಕೆ ಐದು ಬಾರಿ ಕಡ್ಡಾಯವಾಗಿ ನಮಾಜ್ ಮಾಡುತ್ತಾ ಪವಿತ್ರ ರಮ್ಜಾನ್ ತಿಂಗಳನ್ನು ಭಕ್ತಿಯಿಂದ ಆಚರಿಸಲಾಗುತ್ತದೆ.ಹೊಸಕೋಟೆ ತಾಲೂಕಿನ ಎಲ್ಲ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಹಬ್ಬ ಒಳಿತನ್ನುಂಟು ಮಾಡಲಿ ಎಂದರು.ಇದೇ ಸಂದರ್ಭದಲ್ಲಿ ದೊಡ್ಡ ಅರಳಿಗೆರೆ ಗ್ರಾಪಂ ವ್ಯಾಪ್ತಿಯ ತಮ್ಮರಸನಹಳ್ಳಿ ಗ್ರಾಮದ ೨೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಪುಡ್ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ತಮ್ಮರಸನಹಳ್ಳಿ ಗ್ರಾಪಂ ಸದಸ್ಯ ಯಾರಬ್ ಹಾಗೂ ಮುಖಂಡರು ಹಾಜರಿದ್ದರು

Spread the love

You may also like

Leave a Comment

ಜಿಲ್ಲೆಯಲ್ಲಿ ಪ್ರತ್ಯೇಕ ಅಪಘಾತ,ನಾಲ್ವರು ಸಾವು   ಕೃಷಿ ಹೊಂಡದಲ್ಲಿ ಮುಳಗಿ ಇಬ್ಬರು ಮಕ್ಕಳು ಸಾವು   ೩೦ ಜನರಿಗೆ ಉಚಿತ ಕನ್ನಡಕಗಳ ವಿತರಣೆ   ಗುಣಾತ್ಮಕ ಶಿಕ್ಷಣಕ್ಕೆ ಮೊದಲ ಆಯ್ಕೆ ಸರಕಾರಿ ಶಾಲೆಯಾಗಿರಲಿ   ಬೆಂಗಳೂರು ಗ್ರಾಮಾಂತರ ಜಿಪಂನಲ್ಲಿ ಪ್ರಗತಿ ಪರಿಶೀಲನೆ ಸಭೆ