Home ರಾಜ್ಯಏ.೩ಕ್ಕೆ ಹೊಸಕೋಟೆ ತಾಲೂಕು ಕುರುಬರ ಸಂಘದ ಚುನಾವಣೆ

ಏ.೩ಕ್ಕೆ ಹೊಸಕೋಟೆ ತಾಲೂಕು ಕುರುಬರ ಸಂಘದ ಚುನಾವಣೆ

ಮಾರ್ಚಿ ೨೭ ರಿಂದ ಚುನಾವಣೆ ನಾಮಪತ್ರ ಸಲ್ಲಿಕೆ

by Editor

ಹೊಸಕೋಟೆ: ಐದು ವರ್ಷಗಳಿಗೊಮ್ಮೆ ನಡೆಯುವ ತಾಲೂಕು ಕುರುಬರ ಸಂಘದ ಚುನಾವಣೆ ಏಪ್ರಿಲ್ ೩ಕ್ಕೆ ನಿಗಧಿಪಡಿಸಲಾಗಿದ್ದು, ಸಂಘದ ೧೩೦೦ ಸದಸ್ಯರೂ ಚುನಾವಣೆ ಪ್ರಕ್ರಿಯೆಯಲ್ಲಿ ಬಾಗವಹಿಸಿ ಆಡಳಿತ ಮಂಡಳಿಯ ನಿರ್ದೇಶಕರನ್ನು ಆಯ್ಕೆ ಮಾಡಬೇಕು ಎಂದು ಕುರುಬರ ಸಂಘದ ಅಧ್ಯಕ್ಷ ರಾಮಾಂಜಿನಿ ತಿಳಿಸಿದರು.

ನಗರದ ಕನಕ ಭವನ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆವರು, ಸಂಘದ ಹಾಗೂ ಸಮುದಾಯದ ಅಭಿವೃದ್ದಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸಿಕೊಂಡು ಬಂದಿದ್ದು, ಸಂಘದಲ್ಲಿ ೧೩೨೬ ಸದಸ್ಯರಿದ್ದಾರೆ. ನೂತನವಾಗಿ ೭೫೦ ಸದಸ್ಯರಿದ್ದು, ಕೇವಲ ಹಳೆಯ ಸದಸ್ಯರಿಗೆ ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹಕ್ಕು ಇರುತ್ತದೆ. ನೂತನವಾಗಿ ಸಂಘದ ಸದಸ್ಯರಾಗಿರುವವರಿಗೆ ಈ ಬಾರಿ ಚುನಾವಣೆಯಲ್ಲಿ ಮತದಾನದ ಹಕ್ಕು ಇರುವುದಿಲ್ಲ. ಇದು ಸಂಘದ ಬೈಲಾ ಪ್ರಕಾರ ಇದ್ದು ಮುಂದಿನ ಬಾರಿ ಚುನಾವಣೆಯಲ್ಲಿ ಭಾಗವಹಿಸಬಹುದಾಗಿದೆ ಎಂದರು.

ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನ್ನಸಂದ್ರ ನಾಗರಾಜ್ ಮಾತನಾಡಿ, ಇದೇ ಮಾರ್ಚ್ ೨೬ ಮತ್ತು ೨೭ ರಂದು ಚುನಾವಣೆಗೆ ನಾಮಪತ್ರ ಸಲ್ಲಿಸಲು ಬೆಳಗ್ಗೆ ೧೧ ರಿಂದ ಮದ್ಯಾಹ್ನ ೩ ಗಂಟೆಯವರೆಗೆ ಅವಕಾಶವಿದೆ.ಮಾ. ೨೮ ರಂದು ನಾಮ ಪತ್ರಪರಿಶೀಲನೆ, ಮಾ.೨೯ ರಂದು ನಾಮಪತ್ರ ವಾಪಸ್ ಪಡೆಯಲು ಅವಕಾಶ, ಮಾ.೩೧ ರಂದು ಚುನಾವಣೆಯಲ್ಲಿ ಸ್ಪರ್ದಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಏಪ್ರಿಲ್ ೩ ರಂದು ಮುಂಜಾನೆ ೯ ಗಂಟೆಯಿ0ದ ೩ ಗಂಟೆಯವರೆಗೆ ನಗರದ ಕನಕ ಭವನದಲ್ಲಿ ಚುನಾವಣೆ ನೆಡೆಯಲಿದ್ದು, ೩ ಗಂಟೆಯ ನಂತರ ಮರ ಏಣಿಕೆ ಹಾಗೂ ಫಲಿತಾಂಶ ಪ್ರಕಟಿಸಲಾಗುವುದು ಎಂದರು.

ಈ ಸುದ್ದಿಗೋಷ್ಠಿಯಲ್ಲಿ ಕುರುಬರ ಸಂಘದ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ರಾಜಣ್ಣ, ಸಹ ಕಾರ್ಯದರ್ಶಿ ಕೆಂಪಣ್ಣ, ನಿರ್ದೇಶಕರುಗಳಾದ ಸಿ.ನಾಗರಾಜ್, ಮುನಿರಾಜ್, ನಾರಾಯಣಸ್ವಾಮಿ, ರಾಜೇಂದ್ರ, ದಶರಥ್, ಎಸ್.ಪಿ ರಾಮು, ಟಿ.ನಾಗರಾಜ್ ಸೇರಿ ಹಲವರು ಹಾಜರಿದ್ದರು.

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ