Home ರಾಜ್ಯಅತ್ಯುತ್ತಮ ಸಹಕಾರ ಸಂಘಕ್ಕೆ ಕೆಟ್ಟ ಹೆಸರು ಪ್ರಯತ್ನ ಸರಿಯಲ್ಲ

ಅತ್ಯುತ್ತಮ ಸಹಕಾರ ಸಂಘಕ್ಕೆ ಕೆಟ್ಟ ಹೆಸರು ಪ್ರಯತ್ನ ಸರಿಯಲ್ಲ

ಒಂದೇ ಸರ್ವೇನಂಬರ್ ನಲ್ಲಿ ಮೂರು ಜನ ಒಂದೇ ಹೆಸರಿನವರು ಇರುವ ಕಾರಣ ಕಂದಾಯ ಇಲಾಖೆಯಿಂದಾಗಿರುವ ವ್ಯತ್ಯಾಸ ವಿನಃ ನಮ್ಮಿಂದಾಗಿರುವ ವ್ಯತ್ಯಾಸವಲ್ಲ

by Editor

ಸೂಲಿಬೆಲೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯುತ್ತಮ ಸಹಕಾರ ಸಂಘ ಎಂಬ ಕೀರ್ತಿಗೆ ಪಾತ್ರರಾಗಿರುವ ಸೂಲಿಬೆಲೆ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ರೈತರ ಕಲ್ಯಾಣ ಕರ‍್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತಿದೆ.ಯಾರದ್ದೋ ಸಾಲವನ್ನು ಇನ್ಯಾರಿದ್ದೋ ಹೆಸರಿನಲ್ಲಿ ಹಾಕಿಲ್ಲ.ಕಂದಾಯ ಇಲಾಖೆಯಲ್ಲಿ ಆಗಿರುವ ತಪ್ಪಿಗೆ ಸಹಕಾರ ಸಂಘವನ್ನು ದೂಷಿಸುವುದು ಸರಿಯಲ್ಲ ಎಂದು ಸಹಕಾರ ಸಂಘದ ಸಿಇಒ ಎಸ್.ಕೆ ವಸಂತ್ ಕುಮಾರ್ ಹೇಳಿದ್ದಾರೆ.

ಸೂಲಿಬೆಲೆ ಸಹಕಾರ ಸಂಘದಲ್ಲಿ ನಡೆಸ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಸೂಲಿಬೆಲೆ ಹೋಬಳಿ ಬೇಗೂರು ಗ್ರಾಮದ ವೆಂಕಟಮ್ಮ ಕೋ.ಮುನಿಯಪ್ಪ ಅವರು ಸಹಕಾರ ಸಂಘದಲ್ಲಿ ಸಾಲ ಪಡೆದಿದ್ದಾರೆ.ಇದೇ ಸರ್ವೇ ನಂಬರ್‌ನಲ್ಲಿ ಒಂದೇ ಹೆಸರಿನ ವೆಂಕಟಮ್ಮ ಕೋ ಲೇಟ್ ಮುನಿವೆಂಕಟಪ್ಪ,ವೆ0ಕಟಮ್ಮ ಕೋ ಚೌಡಪ್ಪ ಅವರಿಗೂ ಸಹ ೧ ಎಕರೆ ೨೦ ಗುಂಟೆ ಜಮೀನಿದ್ದು,ಪಹಣಿಯಲ್ಲಿ ಸಾಲ ಪಡೆದಿರುವ ಋಣಗಳ ಕಲಂನಲ್ಲಿ ವೆಂಕಟಮ್ಮ ಕೋಂ ಮುನಿಯಪ್ಪ ಬದಲಿಗೆ ವೆಂಕಟಮ್ಮ ಕೋಂ ಲೇಟ್ ಮುನಿಯಪ್ಪ ಹೆಸರಿನಲ್ಲಿ ಸಾಲ ಎಂದು ತೋರಿಸಲಾಗಿದೆ.ಈ ಎಡವಟ್ಟು ಪಹಣಿಯಲ್ಲಿ ನಮೋದಿಸುವಾಗ ಕಂದಾಯ ಇಲಾಖೆಯಿಂದಾಗಿದ್ದು, ಸಹಕಾರ ಸಂಘದಿ0ದ ಅಲ್ಲ.ಒಂದೇ ಹೆಸರಿನ ೩ ಜನ ತಲಾ ೧.೨೦ ಎಕರೆ ಜಮೀನು ಹೊಂದಿದ್ದು, ತಾಂತ್ರಿಕ ಕಣ್ತಪ್ಪಿನಿಂದಾಗಿರುವ ಎಡವಟ್ಟು. ಇದಕ್ಕೆ ಸಹಕಾರ ಸಂಘ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟು ಹೆಸರು ತರುವ ರೀತಿಯಲ್ಲಿ ಬಿಂಬಿಸುತ್ತಿರುವುದು ಸರಿಯಲ್ಲ. ಅಧ್ಯಕ್ಷ ಬಿ.ವಿ ಸತೀಶ್ ಗೌಡರ ಅಧ್ಯಕ್ಷತೆಯಲ್ಲಿ ಸಹಕಾರ ಸಂಘ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು,ಸಿಬ್ಬಂದಿಗಳು ಮೈಯಲ್ಲ ಕಣ್ಣಾಗಿ ಕೆಲಸ ಮಾಡುತ್ತಾರೆ.ಕಂಧಾಯ ಇಲಾಖೆಯವರು ಮಾಡಿರುವ ತಪ್ಪಿಗೆ ಸಹಕಾರ ಸಂಘವನ್ನು ದೂಷಿಸುವುದು ಸರಿಯಲ್ಲ.ಇದನ್ನು ಸರಿಪಡಿಸುವ ದಿಕ್ಕಿನಲ್ಲಿ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದರು

ವ್ಯವಸ್ಥಾಪಕ ನಾಗೇಶ್ ಮಾತನಾಡಿ, ಶ್ರೀಕಾಂತ್ ರಾವಣ್ ಎನ್ನುವರು ಸಂಸ್ಥೆಯ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದು ದುರುದ್ದೇಶವಾಗಿರುತ್ತದೆ. ಸಂಸ್ಥೆಯಿ0ದ ಯಾವುದೇ ರೈತರಿಗೆ ಅನ್ಯಾಯವಾಗಿರುವುದಿಲ್ಲ. ಒಂದೇ ಸರ್ವೇನಂಬರ್ ನಲ್ಲಿ ಮೂರು ಜನ ಒಂದೇ ಹೆಸರಿನವರು ಇರುವ ಕಾರಣ ಕಂದಾಯ ಇಲಾಖೆಯಿಂದಾಗಿರುವ ವ್ಯತ್ಯಾಸ ವಿನಃ ನಮ್ಮಿಂದಾಗಿರುವ ವ್ಯತ್ಯಾಸವಲ್ಲ ಎಂದರು

ಬೇಗೂರು ಮಂಜುನಾಥ್ ಮಾತನಾಡಿ,ನಮ್ಮ ತಾಯಿ ವೆಂಕಟಮ್ಮ ಹೆಸರಿನಲ್ಲಿ ಸಾಲ ಪಡೆದಿದ್ದು,ಒಂದೇ ಸರ್ವೇ ನಂಬರ್ ನಲ್ಲಿ ಮೂರು ಜನ ಒಂದೇ ಹೆಸರಿನವರು ಇರುವ ಕಾರಣ ನಮ್ಮ ತಾಯಿ ಹೆಸರಿನ ಜಾಗದಲ್ಲಿ ಸಾಲ ಇದೆ ಅಂತ ಪಹಣಿಯಲ್ಲಿ ತೋರಿಸುವ ಬದಲು ವೆಂಕಟಮ್ಮ ಕೋಂ ಲೇಟ್ ಮುನಿವೆಂಕಟಪ್ಪ ಹೆಸರಿನಲ್ಲಿ ಸಾಲ ಇದೆ ಅಂತ ಪಹಣಿಯಲ್ಲಿ ತೋರಿಸಲಾಗಿದೆ.ಇದು ಕಂದಾಯ ಇಲಾಖೆಯಲ್ಲಿ ನಮೋದಿಸುವಾಗ ಆಗಿರುವ ತಪ್ಪು.ಇದಕ್ಕೂ ಸಹಕಾರ ಸಂಘಕ್ಕೂ ಯಾವುದೇ ಸಂಬ0ಧವಿಲ್ಲ.ಇದನ್ನು ತಿದ್ದುಪಡಿ ಮಾಡಲು ತಹಸೀಲ್ದಾರ್ ಗೆ ಅರ್ಜಿ ಸಲ್ಲಿಸಲಾಗಿದೆ. ವಿನಕಾರಣ ಕೆಲವರು ಸಹಕಾರ ಸಂಘಕ್ಕೆ ಕೆಟ್ಟು ಹೆಸರು ತರಲು ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸಿದ್ದಾರೆ ಎಂದರು
ಬ್ಯಾ0ಕ್ ಸಿಬ್ಬಂದಿ ಬಾಗ್ಯಲಕ್ಷಿö್ಮ ಹಾಜರಿದ್ದರು

Spread the love

You may also like

Leave a Comment

ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ   ಬಮೂಲ್ ಕಾರ್ಮಿಕರ ಶ್ರಮದಿಂದಲೇ ಒಕ್ಕೂಟದ ಅಭಿವೃದ್ಧಿ : ಬಿ.ವಿ ಸತೀಶ್‌ಗೌಡ