40
ಹೊಸಕೋಟೆ : ಐತಿಹಾಸಿಕ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ ಪೂಜಾ ಕಾರ್ಯಕ್ರಮಗಳ ಸೋಮವಾರದಿಂದ ಪ್ರಾರಂಭಗೊAಡಿದ್ದು, ಮೇ ೧೦ ರವರಿಗೆ ಒಟ್ಟು ೧೪ ದಿನಗಳ ಕಾಲ ವಿವಿಧ ಕರ‍್ಯಕ್ರಮಗಳು ನಡೆಯಲಿವೆ.
ಏ.೨೭ ರಂದು ಸೋಮವಾರ ಅಂಕುರಾರ್ಪಣೆ ಕರ‍್ಯಕ್ರಮ ನಡೆಯಿತು. ಏ.೨೮ ರಂದು ನಂದಿ ವಾಹನೋತ್ಸವ,ಏ.೨೯ ರಂದು ಶೇಷ ವಾಹನೋತ್ಸವ,ಏ.೩೦ಕ್ಕೆ ಕಾಶೀಯಾತ್ರೆ ಗಿರಿಜಾ ಕಲ್ಯಾಣ,ಮೇ. ೧ ರಂದು ಮಡಿ ಉತ್ಸವ ಹಾಗೂ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ, ಅದೇ ದಿನ ರಾತ್ರಿ ೧೨ ಗಂಟೆಗೆ ಧರ್ಮರಾಯಸ್ವಾಮಿ ಶ್ರೀ ಧ್ರೌಪದಮ್ಮ ಹೂವಿನ ಕರಗ ಮಹೋತ್ಸವ, ಮೇ.೨ ರಂದು ಪಾರ್ವತೋತ್ಸವ, ಮೇ ೩ ರಂದು ವಸಂತೋತ್ಸವ, ಮೇ,೪ ರಂದು ಹಂಸವಾಹನೋತ್ಸವ, ಮೇ.೫ ಶಯನೋತ್ಸವ, ಮೇ,೬ ರಂದು ಡೋಲೋತ್ಸವ, ಮೇ.೭ ರಂದು ಸಿಂಹವಾಹನೋತ್ಸವ, ಮೇ ೮ ರಂದು ತೆಪ್ಪೋತ್ಸವ, ಮೇ ೯ ರಂದು ಚಿತ್ರಗೋಪುರೋತ್ಸವ, ಮೇ. ೧೦ ರಂದು ಪಲ್ಲಕ್ಕಿ ಉತ್ಸವ ಕರ‍್ಯಕ್ರಮ ನಡೆಯಲಿದೆ.

