
ಸೂಲಿಬೆಲೆ : ಕೃಷಿ ಚಟುವಟಿಕೆಗಳಲ್ಲಿ ರೈತರು ಆಧುನಿಕ ತಂತ್ರಜ್ಞಾನದ ಪದ್ದತಿಗಳನ್ನು ಅನುಸರಿಸುವುದರಿಂದ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯವಾಗಲಿದೆ.ಮಣ್ಣಿನ ಆರೋಗ್ಯ,ರಸಗೊಬ್ಬರ ಬಳಕೆ,ಬೀಜೋಪಚಾರದತ್ತ ರೈತರು ಹೆಚ್ಚು ಗಮನಹರಿಸಬೇಕು ಎಂದು ಹೊಸಕೋಟೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇಣುಕಾ ಪ್ರಸನ್ನ ಹೇಳಿದರು
ಸೂಲಿಬೆಲೆ ರೈತ ಸಂಪರ್ಕ ಕೇಂದ್ರ ಆವರಣದಲ್ಲಿ ಹಮ್ಮಿಕೊಂಡಿದ್ದ ೨೦೨೬-೨೭ನೇ ಸಾಲಿನ ಕೇಂದ್ರ ಪುರಸ್ಕೃತ ಖೇತ್ ಬಚಾವೋ ಅಭಿಯಾನ,ಸುರಕ್ಷಿತ ಕೀಟನಾಟಕಗಳ ಬಳಕೆ ಮತ್ತು ಬೀಜೋಪಚಾರ ಆಂದೋಲನ ಕಾರ್ಯಕ್ರಮದಲ್ಲಿ ಅವರು ರೈತರನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿ ಚಟುವಟಿಕೆಗಳಲ್ಲಿ ರೈತರ ಪ್ರಗತಿಗೆ ಅನುಕೂಲವಾಗಲೆಂದು ಆನೇಕ ರೀತಿಯ ಸೌಲಭ್ಯಗಳು ಹಾಗೂ ವಿವಿಧಯೋಜನೆಗಳನ್ನು ಜಾರಿ ಮಾಡಿದ್ದು,ಇವುಗಳನ್ನು ಪಡೆದುಕೊಳ್ಳಲು ರೈತರು ಕಡ್ಡಾಯವಾಗಿ ಪ್ರೋಟ್ ಐಡಿಯನ್ನು ಪಡೆದುಕೊಳ್ಳಬೇಕು. ರಸಗೊಬ್ಬರ ಬಳಕೆ,ಮಣ್ಣಿನ ಆರೋಗ್ಯ,ಇಲಾಖೆ ಯೋಜನೆಗಳ ಬಗೆ ರೈತರಿಗೆ ಅರಿವು ಮೂಡಿಸಲು ಖೇತ್ ಬಜಾವೋ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು

ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಗೋಪಿಕಾ ಸಿ ಮಾತನಾಡಿ, ಬೆಳೆಗಳಿಗೆ ಔಷಧಗಳನ್ನು ಸಿಂಪಡಣೆ ಮಾಡುವಾಗ ಸುರಕ್ಷಿತ ಕ್ರಮಗಳನ್ನು ರೈತರು ಅನುಸರಿಸಬೇಕು. ಮಣ್ಣು ಪರೀಕ್ಷೆಯ ನಂತರ ಕೊರತೆಯಾಗಿರುವ ಪೋಷಕಾಂಶಗಳ ಬಗೆ ಅರಿತುಕೊಂಡು ಅದನ್ನು ಭೂಮಿಗೆ ಒಗಿಸುವ ಕೆಲಸ ಮಾಡಿ. ಸಾವಯಗೊಬ್ಬರಗಳ ಬಳಕೆಯತ್ತ ಆಸಕ್ತಿ ಬೆಳೆಸಿಕೊಳ್ಳಿ. ಅಧುನಿಕ ಕೃಷಿ ಪದ್ದತಿಗಳನ್ನು ಆಳವಡಿಸಿಕೊಂಡು ರೈತರು ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು.ಕೃಷಿ ವಿಜ್ಞಾನ ಕೇಂದ್ರ ರೈತರಿಗೆ ಎಲ್ಲ ರೀತಿಯ ಸಲಹೆ, ಮಾರ್ಗದರ್ಶನಗಳನ್ನು ನೀಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಪ್ರಗತಿ ಕಾಣಬೇಕು ಎಂದರು
ಕೃಷಿ ಅಧಿಕಾರಿ ಶ್ವೇತಾ ಮಾತನಾಡಿ, ಪ್ರತಿ ರೈತರು ವ್ಯವಸಾಯ ಭೂಮಿ ಮಣ್ಣುನ್ನು ಪರೀಕ್ಷೆ ಮಾಡಿ ಅದರ ಅರೋಗ್ಯವನ್ನು ಅರಿತುಕೊಳ್ಳುವುದು ಮುಖ್ಯ. ಮಣ್ಣಿಗೆ ಅಗತ್ಯವಾಗಿರುವ ಪೋಷಕಾಂಶಗಳನ್ನು ನೀಡಿದ್ದಲ್ಲಿ ಉತ್ತಮ ಇಳುವರಿ ಸಾಧ್ಯ. ರಾಸಾಯನಿಕ ರಸಗೊಬ್ಬರಗಳನ್ನು ಕಡಿಮೆ ಮಾಡಿ ನೈಸರ್ಗಿಕವಾಗಿ ಸಿಗುವ ಗೊಬ್ಬರಗಳನ್ನು ಬಳಸಿ ಬೆಳೆ ಬೆಳೆಯುವುದರ ಬಗೆ ಅರಿವು ಮಾಡಿಸುವುದು, ಸಮಗ್ರ ಕೃಷಿ ಬೆಳೆಗಳನ್ನು ಪ್ರೋತ್ಸಾಹಿಸುವುದು ಖೇತ್ ಬಜಾವೋ ಅಂದೋಲನ ಮುಖ್ಯ ಉದ್ದೇಶವಾಗಿದೆ ಎಂದರು

ಇದೇ ಸಂದರ್ಭದಲ್ಲಿ ಬೀಜೋಪಚಾರ, ಆತ್ಮ ಯೋಜನೆ, ನ್ಯಾನೋ ಯೂರಿಯಾ ಬಳಕೆ, ಇ-ಕೆವೈಸಿ, ಸೆಂಟ್ರಲ್ ಐಡಿ ಬಗೆ ಅರಿವು ಮೂಡಿಸಲಾಯಿತು. ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕ ವಿಧ್ಯಾಧರ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ನಂದಿನಿ, ರೇಷ್ಮೆ ಇಲಾಖೆಯ ಜಯಶ್ರೀ, ಡಾ.ನಾಗೇಂದ್ರ ಸೇರಿದಂತೆ ಹೋಬಳಿಯ ಹಲವು ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯ ರೈತರು ಭಾಗವಹಿಸಿದ್ದರು.


