Home ಜಿಲ್ಲೆಭಾರತ್ ಗ್ಯಾಸ್ ಸಿಲಿಂಡರ್ ವಿತರಕರ ವಿರುದ್ದ ಗ್ರಾಹಕರ ಪ್ರತಿಭಟನೆ

ಭಾರತ್ ಗ್ಯಾಸ್ ಸಿಲಿಂಡರ್ ವಿತರಕರ ವಿರುದ್ದ ಗ್ರಾಹಕರ ಪ್ರತಿಭಟನೆ

ಮನೆಗಳಿಗೆ ಡಿಲಿವರಿ ನೀಡದಿದ್ದರೂ ಹೆಚ್ಚುವರಿ ಹಣ ವಸೂಲಿ,ಆರೋಪ

by Editor

ಬೆಂಗಳೂರು ಗ್ರಾಮಾಂತರ : ನಿಯಮಾನುಸಾರ ಬುಕಿಂಗ್ ಮಾಡಿದ್ದರೂ ಸಕಾಲಕ್ಕೆ ಗ್ಯಾಸ್ ಸಿಲಿಂಡರ್ ನೀಡದ ಭಾರತ್ ಗ್ಯಾಸ್ ವಿತರಕರ ವಿರುದ್ದ ಸೂಲಿಬೆಲೆಯಲ್ಲಿ ಗ್ರಾಹಕರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಪ್ರತಿ ನಿತ್ಯ ಖಾಲಿ ಸಿಲಿಂಡರ್ ಗಳನ್ನು ಹೊತ್ತು ತಂದು ವಿತರಣೆ ಕೇಂದ್ರದ ಮುಂದೆ ಕಾದು ವಾಪಸ್ ಹೋಗುವಂತಾಗಿದೆ. ವಿತರಕರ ವಿರುದ್ದ ಸಂಬAಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸೂಲಿಬೆಲೆಯ ದೇವನಹಳ್ಳಿ ರಸ್ತೆಯಲ್ಲಿ ಭಾರತ್ ಗ್ಯಾಸ್ ವಿತರಣೆ ಕೇಂದ್ರವನ್ನು ತೆರೆದಿದ್ದು, ಸೂಲಿಬೆಲೆ ಸುತ್ತಮುತ್ತಲ್ಲಿನ ಭಾರತ್ ಗ್ಯಾಸ್ ಗ್ರಾಹಕರಿಗೆ ಈ ಕೇಂದ್ರದಿAದ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ.ಕಳೆದ ಎರಡ್ಮೂರು ತಿಂಗಳಿAದ ನಿಯಾಮಾನುಸಾರವಾಗಿ ಬುಕಿಂಗ್ ಮಾಡಿದ ಗ್ರಾಹಕರಿಗೆ ಸಿಲಿಂಡರ್‌ಗಳನ್ನು ಸಕಾಲಕ್ಕೆ ಪೂರೈಕೆ ಮಾಡುತ್ತಿಲ್ಲ. ದೇವನಹಳ್ಳಿಯಿಂದ ಸಿಲಿಂಡರ್ ಗಳನ್ನು ಸೂಲಿಬೆಲೆ ವಿತರಣೆ ಕೇಂದ್ರಕ್ಕೆ ತಂದು ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತಿದೆ. ಗ್ರಾಹಕರು ಪ್ರತಿ ನಿತ್ಯ ವಿತರಣೆ ಕೇಂದ್ರಕ್ಕೆ ಖಾಲಿ ಸಿಲಿಂಡರ್ ಗಳನ್ನು ಹೊತ್ತು ತಂದು ಅವರು ಬಾರದ ಕಾರಣ ವಾಪಸ್ ತೆಗೆದುಕೊಂಡು ಹೋಗುವಂತಾಗಿದೆ.ಕರೆ ಮಾಡಿದರೇ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಸೋಮವಾರ ಕೊಡ್ತೀವಿ ಅಂತೇಳಿದ್ರು : ಬುಕಿಂಗ್ ಮಾಡಿದ್ದ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ಸೋಮವಾರ ನೀಡುತ್ತೆವೆ ಎಂದೇಳಿದ ಮಾತು ನಂಬಿ ದೂರದೂರುಗಳಿಂದ ಸೂಲಬೆಲೆ ವಿತರಣೆ ಕೇಂದ್ರಕ್ಕೆ ಗ್ರಾಹಕರು ಖಾಲಿ ಸಿಲಿಂಡರ್‌ಗಳನ್ನು ಹೊತ್ತು ತಂದಿದ್ದರು.ಆದರೇ,ವಿತರಕರು ಬಾರದೆ ಇದ್ದ ಕಾರಣ ರೊಚ್ಚಗೆದ್ದ ಗ್ರಾಹಕರು ವಿತರಣೆ ಕೇಂದ್ರದ ಮುಂದೆ ಗ್ಯಾಸ್ ಸಿಲಿಂಡರ್ ಪೂರೈಕೆದಾರರ ವಿರುದ್ದ ಅಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

೫೦ ರೂ ಹೆಚ್ಚುವರಿ : ದೇವನಹಳ್ಳಿಯಿಂದ ಸೂಲಿಬೆಲೆಯಲ್ಲಿರುವ ವಿತರಣೆ ಕೇಂದ್ರಕ್ಕೆ ಸಿಲಿಂಡರ್ ಗಳನ್ನು ತಂದು ಅಲ್ಲೇ ನೀಡುತ್ತಾರೆ.ನಿಯಾಮಾನುಸಾರ ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್ ಪೂರೈಕೆ ಮಾಡಬೇಕು.ಆದರೇ ಭಾರತ್ ಗ್ಯಾಸ್ ನವರು ಮನೆ ಹತ್ತಿರ ಬರುವುದಿಲ್ಲ.ಗ್ರಾಹಕರನ್ನೇ ವಿತರಣೆ ಕೇಂದ್ರಕ್ಕೆ ಖಾಲಿ ಸಿಲಿಂಡರ್ ತನ್ನಿ ಎಂದು ಕರೆದು ಅಲ್ಲೇ ವಿತರಣೆ ಮಾಡುತ್ತಾರೆ.ಈಗಿದ್ದರೂ ಡಿಲವರಿ ಜಾರ್ಚು ಅಂತ ಹೆಚ್ಚುವರಿಯಾಗಿ ೫೦ ರೂ,ಪಡೆಯುತ್ತಾರೆ.ಇದು ಹಗಲು ದರೋಡೆಯಾಗಿದೆ.ಸಿಲಿಂಡರ್ ಸಿಗುವುದಿಲ್ಲ ಎಂದು ಭಯಕ್ಕೆ ಬಿದ್ದು ಗ್ರಾಹಕರು ವಿತರಕರು ಕೇಳಿದ ೫೦ ರೂ ನೀಡಿ ಸಿಲಿಂಡರ್ ಪಡೆಯುವಂತಾಗಿದೆ ಎಂದು ಆರೋಪಿಸಿದ್ದಾರೆ.

ದೇವನಹಳ್ಳಿಗೆ ಬನ್ನಿ ಅಂತಾರೆ : ಬುಕಿಂಗ್ ಮಾಡಿದ ಸಿಲಿಂಡರ್ ವಿತರಣೆಗೆ ಸೂಲಿಬೆಲೆಗೆ ಬಾರದ ವಿತರಕರಿಗೆ ಕರೆ ಮಾಡಿ ಕೇಳಿದರೇ,ಇಂದು ಅಲ್ಲಿಗೆ ಬರುವುದಿಲ್ಲ.ಬೇಕಿದ್ದರೇ ನೀವೇ ದೇವನಹಳ್ಳಿಗೆ ಬನ್ನಿ ಅಂತ ಬೇಜಾವಾಬ್ದಾರಿ ಉತ್ತರ ನೀಡುತ್ತಾರೆ.ಸಿಲಿಂಡರ್ ಗಾಗಿ ನೂರಾರು ರೂ.ಖರ್ಚು ಮಾಡಿಕೊಂಡು ೧೧ ಕಿ.ಮೀ ದೂರದ ದೇವನಹಳ್ಳಿಗೆ ಹೋಗಬೇಕಾ? ಗಂಡಸರು ಹೋಗುತ್ತಾರೆ.ಹೆಂಗೆಸರು ಹೇಗೆ ಸಿಲಿಂಡರ್ ಹೊತ್ತುಕೊಂಡು ದೇವನಹಳ್ಳಿಗೆ ಹೋಗಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಲಿ ಸಿಲಿಂಡರ್ ಹೊತ್ತುಕೊಂಡು ಬರಲು ದುಡ್ಡು : ಸೂಲಿಬೆಲೆ ವಿತರಣೆ ಕೇಂದ್ರದಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಲು ಸೂಲಿಬೆಲೆ ಸುತ್ತಮುತ್ತ ಇರುವ ಗ್ರಾಹಕರು ಆಟೋಗಳಿಗೆ ಹಣ ನೀಡಿ ಖಾಲಿ ಸಿಲಿಂಡರ್‌ಗಳನ್ನು ವಿತರಣೆ ಕೇಂದ್ರಕ್ಕೆ ತರಬೇಕು.ಅಷ್ಟು ಕಷ್ಟಪಟ್ಟು ತಂದರೇ,ವಿತರಕರು ಇವತ್ತು ಇಲ್ಲ.ನಾಳೆ ಕೊಡ್ತೀವಿ ಅಂತ ಪೋನ್ ನಲ್ಲಿ ಹೇಳಿ ಕಟ್ ಮಾಡುತ್ತಾರೆ.ನಾವು ಖಾಲಿ ಸಿಲಿಂಡರ್ ಗಳನ್ನು ಹೊತ್ತು ಮತ್ತೇ ವಾಪಸ್ ಮನೆಗೆ ದುಡ್ಡು ಕೊಟ್ಟು ತೆಗೆದುಕೊಂಡು ಹೋಗಬೇಕು.ಭಾರತ್ ಗ್ಯಾಸ್ ವಿತರಕರ ವಿರುದ್ದ ಸಂಬAಧಪಟ್ಟ ಅದಿಕಾರಿಗಳ ಕ್ರಮ ಕೈಗೊಳ್ಳಬೇಕು. ನಿಯಾಮಾನುಸಾರ ಮನೆಗಳ ಬಳಿ ಸಿಲಿಂಡರ್ ವಿತರಣೆ ಮಾಡಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.

Spread the love

You may also like

Leave a Comment

ಸೂಲಿಬೆಲೆಯಲ್ಲಿ ರೌಡಿಶೀಟರ್ ಹ*ತ್ಯೆ   ಹಸಿರೇ ನಮ್ಮ ಉಸಿರಾಗಿರಲಿ   ಹಿರಿಯ ಶಾಸಕ ಹೆಚ್‌ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡದೆ ಕಡೆಗಣನೆ ಮಾಡಿರುವುದು ಸರಿಯಲ್ಲ   ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ   ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹಿನ್ನಲೆ, ದೊಡ್ಡಕೋಲಿಗದಲ್ಲಿ ಸಂಭ್ರಮಾಚರಣೆ