Home ಜಿಲ್ಲೆರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ

ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ

ಜಿಲ್ಲಾಧಿಕಾರಿ ಡಾ. ಕೆ.ಎನ್.ಅನುರಾಧ ಹೇಳಿಕೆ

by Editor

ಬೆಂಗಳೂರು ಗ್ರಾಮಾಂತರ : ೨೦೨೬ ನೇ ಸಾಲಿನ ಮುಂಗಾರು ಹಂಗಾಮಿಗೆ ರಸಗೊಬ್ಬರಗಳ ಪೂರೈಕೆ ಮತ್ತು ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಲು ರಸಗೊಬ್ಬರ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳಿಗೆ ಹಾಗೂ ಮಾರಾಟಗಾರರಿಗೆ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ೨೦೨೬-೨೭ನೇ ಸಾಲಿನ ಕೃಷಿ ಪರಿಕರ ತಯಾರಕರ ಮತ್ತು ಮಾರಾಟಗಾರರ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರಿಗೆ ರಸಗೊಬ್ಬರ ಲಭ್ಯತೆಯ ಬಗ್ಗೆ ಅರಿವು ಮೂಡಿಸಲು ಮತ್ತು ರಸಗೊಬ್ಬರಗಳಿಗೆ ಪರ್ಯಾವಾಗಿ ಸಾವಯವ ಗೊಬ್ಬರಗಳನ್ನು ಹೆಚ್ಚು ಬಳಕೆ ಮಾಡುವಂತೆ, ರಸಗೊಬ್ಬರ ಮಾರಾಟ ಮಳಿಗೆಯ ಮುಂದೆ ದಾಸ್ತಾನು ಮತ್ತು ಗರಿಷ್ಠ ಮಾರಾಟ ದರ ವಿವರಗಳನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಮತ್ತು ಯೂರಿಯಾ ರಸಗೊಬ್ಬರವನ್ನು  ಕಡ್ಡಾಯವಾಗಿ ಮಾರಾಟ ಮಾಡಲು ಕ್ರಮ ವಹಿಸಬೇಕು. ಜಿಲ್ಲೆಗೆ ಸರಬರಾಜಾಗಿರುವ ರಸಗೊಬ್ಬರಗಳನ್ನು ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಗಳಿಗೆ ಮಾರಾಟ ಮಾಡದಂತೆ, ಅಧಿಕೃತ ರಸಗೊಬ್ಬರ ಮಾರಾಟ ಪರವಾನಗೆ ಇಲ್ಲದೆ ರಸಗೊಬ್ಬರ ದಾಸ್ತಾನು ಮತ್ತು ಮಾರಾಟ ಮಾಡದಂತೆ ಕಟ್ಟು ನಿಟ್ಟಿನ ಎಚ್ಚರಿಕೆ ವಹಿಸಬೇಕು . ಯೂರಿಯಾವನ್ನು ಕೆ-ಕಿಸಾನ್ ತಂತ್ರಾAಶದ ಮೂಲಕ ಮಾರಾಟಮಾಡಲು ಪ್ರತಿ ತಾಲ್ಲೂಕಿನಲ್ಲಿ ಚಿಲ್ಲರೆ ಮಾರಾಟಗಾರರಿಗೆ ತರಬೇತಿಗಳನ್ನು ಆಯೋಜಿಸಲು ಸಹಾಯಕ ಕೃಷಿ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು
ಜಂಟಿ ಕೃಷಿ ನಿರ್ದೇಶಕರು ಮಾತನಾಡಿ, ಪ್ರಸಕ್ತ ಮುಂಗಾರು ಹಂಗಾಮಿಗೆ ೬೯೨೯೧ ಹೆಕ್ಟೇರ್ ಆಹಾರಧಾನ್ಯ ಮತ್ತು ೨೫೭ ಹೆಕ್ಟೇರ್ ಎಣ್ಣೆಕಾಳು ಸೇರಿ ಒಟ್ಟು ೬೯೫೪೮ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು. ಬಿತ್ತನೆಗೆ ಅನುಗುಣವಾಗಿ ಮಾಹೆವಾರು ಈ ಮುಂಗಾರು ಹಂಗಾಮಿಗೆ ಯೂರಿಯಾ-೧೧೪೧೮ ಮೆ.ಟನ್, ಡಿಎಪಿ-೭೫೬೭ ಮೆ.ಟನ್, ಎಂಒಪಿ-೧೩೫೪ ಮೆ.ಟನ್, ಎಸ್ಎಸ್ ಪಿ -೧೦೮೬ ಮೆ.ಟನ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳು ೧೪೭೪೪ ಮೆ.ಟನ್ ಸೇರಿದಂತೆ ಒಟ್ಟು-೩೬೧೬೯ಮೆ.ಟನ್ ಬೇಡಿಕೆಯಿದೆ. ಪ್ರಸ್ತುತ ಮಾಹೆಯಲ್ಲಿ ೧೭೩೨ಮೆ.ಟನ್ ಡಿಎಪಿ, ೧೩೨೭ಮೆ.ಟನ್ ಯೂರಿಯಾ ಮತ್ತು ೨೩೦೩ಮೆ.ಟನ್ ಕಾಂಪ್ಲೆಕ್ಸ್ ರಸಗೊಬ್ಬರಗಳ ಬೇಡಿಕೆಯಿದೆ. ಈ ಬೇಡಿಕೆ ಪೂರೈಸಲು ಪ್ರಸ್ತುತ ೧೭೪೮೨ ಮೆ.ಟನ್ ವಿವಿಧ ರಸಗೊಬ್ಬರಗಳ ದಾಸ್ತಾನು ಇರುತ್ತದೆ ಎಂದರು
ಸಭೆಯಲ್ಲಿ ತೋಟಗಾರಿಕೆ, ರೇಷ್ಮೆ ಮತ್ತು ಪಶುಸಂಗೋಪನೆ ಇಲಾಖೆಯ ವಿವಿಧ ಅಧಿಕಾರಿಗಳು, ಎಲ್ಲಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು, ರಸಗೊಬ್ಬರ ತಯಾರಿಕಾ ಕಂಪನಿಗಳ ಪ್ರತಿನಿಧಿಗಳು ಹಾಗೂ ಜಿಲ್ಲೆಯ ಚಿಲ್ಲರೆ ಮತ್ತು ಸಗಟು ರಸಗೊಬ್ಬರ ಮಾರಾಟಗಾರರು ಭಾಗವಹಿಸಿದ್ದರು.

Spread the love

You may also like

Leave a Comment

ಸೂಲಿಬೆಲೆಯಲ್ಲಿ ರೌಡಿಶೀಟರ್ ಹ*ತ್ಯೆ   ಹಸಿರೇ ನಮ್ಮ ಉಸಿರಾಗಿರಲಿ   ಹಿರಿಯ ಶಾಸಕ ಹೆಚ್‌ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡದೆ ಕಡೆಗಣನೆ ಮಾಡಿರುವುದು ಸರಿಯಲ್ಲ   ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ   ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹಿನ್ನಲೆ, ದೊಡ್ಡಕೋಲಿಗದಲ್ಲಿ ಸಂಭ್ರಮಾಚರಣೆ