Home ರಾಜ್ಯಗೋಮಾಂಸ ಮಾರಾಟ ಚಟುವಟಿಕೆ ನಿಲ್ಲಿಸುವಂತೆ ಮನವಿ

ಗೋಮಾಂಸ ಮಾರಾಟ ಚಟುವಟಿಕೆ ನಿಲ್ಲಿಸುವಂತೆ ಮನವಿ

ವಿವಿಧ ಮಸೀದಿ ಮುಖಂಡರಿ0ದ ಪೊಲೀಸ್, ಪಿಡಿಒಗೆ ಮನವಿ ಪತ್ರ ಸಲ್ಲಿಕೆ

by Editor

 

ಸೂಲಿಬೆಲೆ : ಗ್ರಾಮದಲ್ಲಿ ಗೋಮಾಂಸ ಮಾರಾಟ ಮತ್ತು ವಧೆ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸೂಲಿಬೆಲೆಯಲ್ಲಿರುವ ವಿವಿಧ ಮಸೀದಿಗಳ ಮುಖಂಡರು ಪೊಲೀಸ್ ಹಾಗೂ ಗ್ರಾಪಂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಸೂಲಿಬೆಲೆ ಗ್ರಾಮದ ವ್ಯಾಪ್ತಿಯಲ್ಲಿ ಗೋಮಾಂಸ ಕತ್ತರಿಸುವುದು,ಮಾರಾಟ ಮಾಡುವುದು, ಇದಕ್ಕೆ ಸಂಬAಧಿಸಿ ವ್ಯಾಪಾರ ಚಟುವಟಿಕೆಗಳನ್ನು ಅಂಗಡಿ, ಶಡ್ ಅಥವಾ ಖಾಸಗಿ ಮನೆಗಳಲ್ಲಿ ನಡೆಸಬಾರದು. ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚಬೇಕು. ಗ್ರಾಮದಲ್ಲಿ ಶಾಂತಿ ಸೌಹಾರ್ಧತೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಗ್ರಾಮದಲ್ಲಿರುವ ಏಳು ಮಸೀದಿಗಳಲ್ಲಿರುವ ಮುಖಂಡರು ಸಭೆ ಸೇರಿ ತಿರ್ಮಾನ ಕೈಗೊಂಡಿದೆ. ಇದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಲಿಬೆಲೆ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ರಾಜಣ್ಣ ಹಾಗೂ ಸೂಲಿಬೆಲೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಂಜುನಾಥ್ ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದ್ದಾರೆ.

ಸಿಪಿಐ ರಾಜಣ್ಣ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಕಾನೂನು ಬಾಹಿರ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಅಸ್ಪದ ಕೊಡುವುದಿಲ್ಲ.ಇಂಥ ಚಟುವಟಿಕೆಗಳ ಮೇಲೆ ನಿಗಾಯಿಟ್ಟು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು

ಪಿಡಿಒ ಮಂಜುನಾಥ್ ಮಾತನಾಡಿ, ಏಳು ಮಸೀದಿಗಳ ಮುಖಂಡರು ನೀಡಿರುವ ಮನವಿ ಪತ್ರದಲ್ಲಿನ ಅಂಶಗಳನ್ನು ಪರಿಶೀಲನೆ ಮಾಡಿ ಗ್ರಾಪಂ ಸಭೆಯಲ್ಲಿಟ್ಟು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ