Home ರಾಜ್ಯಮಾದಕ ವಸ್ತುಗಳ ವಿರುದ್ದ ಸಮರ ಸಾರುವುದು ಸವಾಲಿನ ಸಂಗತಿ

ಮಾದಕ ವಸ್ತುಗಳ ವಿರುದ್ದ ಸಮರ ಸಾರುವುದು ಸವಾಲಿನ ಸಂಗತಿ

ಹೊಸಕೋಟೆ ಉಪ ವಿಭಾಗ ವತಿಯಿಂದ ಮಾದಕ ವಸ್ತುಗಳ ವಿರೋದಿ ಸಪ್ತಾಹ

by Editor

ಹೊಸಕೋಟೆ : ಇಂದು ಯುದ್ದ ಬೇಕಾದರೂ ಮಾಡಬಹುದು. ಆದರೆ, ಮಾದಕ ವಸ್ತುಗಳ ವಿರುದ್ದ ಸಮರ ಸಾರುವುದು ಸವಾಲಿನ ಸಂಗತಿಯಾಗಿದೆ. ಮಾದಕ ವಸ್ತುಗಳ ವ್ಯಸನವನ್ನು ಜಾಗೃತಿ ಮೂಡಿಸುವ ಮೂಲಕ ಬುಡ ಸಮೇತ ಕಿತ್ತುಹಾಕಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಚಂದ್ರಕಾAತ್ ಹೇಳಿದರು.

ನಗರದ ಶ್ರೀ ಚೆನ್ನ ಭೈರೇಗೌಡ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಹೊಸಕೋಟೆ ಉಪ ವಿಭಾಗ ವತಿಯಿಂದ ಮಾದಕ ವಸ್ತುಗಳ ವಿರೋದಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು, ಮಧ್ಯಮ ವರ್ಗ, ಕೂಲಿಕಾರರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳ ದಂದೆಯನ್ನು ಮಾಡಲಾಗುತ್ತಿದೆ. ಇವರಿಗೆ ಪ್ರಜ್ಞಾವಂತರಿ0ದ ತಿಳಿವಳಿಕೆ ಜ್ಞಾನ ಸಿಕ್ಕರೆ ಖಂಡಿತಾ ಸಮಾಜವನ್ನು ಮಾದಕ ವಸ್ತುಗಳ ವ್ಯಸನಮುಕ್ತಗೊಳಿಸಬಹುದು. ಸಮಾಜದಲ್ಲಿನ ಪ್ರಜ್ಞಾವಂತರು ಮಾದಕ ವಸ್ತುಗಳನ್ನು ತೆಗೆದುಕೊಂಡಾಗ ಅವರ ಮೆದುಳು ಹೇಗೆ ಕೆಲಸ ಮಾಡುತ್ತದೆ. ಅದರಿಂದ ಸಮಾಜದಲ್ಲಿ ತನ್ನ ಏನೆಲ್ಲಾ ಅಹಿತಕರ ಘಟನೆಗಳಿಗೆ ಕಾರಣವಾಗಬಲ್ಲದು ಎಂಬುದರ ಅರಿವು ಮೂಡಿಸುವ ಜವಾಬ್ದಾರಿ ಇದೆ ಎಂದರು.

ಇದೇ ಸಂದರ್ಭದಲ್ಲಿ ಚೆನ್ನ ಬೈರೇಗೌಡ ಕ್ರೀಡಾಂಗಣದಿAದ ಕೆಇಬಿ ಸರ್ಕಲ್, ಹೂಮಂಡಿ ಸರ್ಕಲ್, ಬಸವೇಶ್ವರ ಸರ್ಕಲ್, ರಾಘವೇಂದ್ರ ಟಾಕೀಸ್ ಸರ್ಕಲ್, ಇತ್ಯಾದಿ ಕಡೆಯಲ್ಲಿ ಮ್ಯಾರಥಾನ ನಡೆಸಿ ಜಾಗೃತಿ ಮೂಡಿಸಲಾಯಿತು. ಮ್ಯಾರಥಾನ್ ಓಟ ವಿಜೇತರಿಗೆ ಬಹುಮಾನ, ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಚಲನ ಚಿತ್ರ ನಟ ಕೋಮಲ್, ಹೊಸಕೋಟೆ ವಿಭಾಗದ ಡಿವೈಎಸ್ಪಿ ಮಲ್ಲೇಶ್, ನಗರದ ಠಾಣೆಯ ಸಬ್ ಇನ್ಸ್ಪೆಕ್ಟರ್ ಗೋವಿಂದ್, ತಿರುಮಶೆಟ್ಟಿಹಳ್ಳಿ ಠಾಣಿ ಸಿಪಿಐ ಸುಂದರ್, ಸೂಲಿಬೆಲೆ ಪೊಲೀಸ್ ಠಾಣೆ ಸಿಪಿಐ ರಾಜಣ್ಣ, ಸಂಚಾರ ಪೊಲೀಸ್ ಠಾಣೆ ಸಿಪಿಐ ವಸಂತ್, ಬಿಎಂರ‍್ಡಿ ಸದಸ್ಯ ಡಾ.ಹೆಚ್.ಎಂ ಸುಬ್ಬರಾಜು, ಜಯರಾಜ್ ಮೊದಲಾದರು ಹಾಜರಿದ್ದರು

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ