ಹೊಸಕೋಟೆ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಯ ಯಶಸ್ವಿಗೆ ಹೊಸಕೋಟೆ ತಾಲೂಕಿನ ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದೆ ಎಂದು ಹೊಸಕೋಟೆ ತಹಸೀಲ್ದಾರ್ ಶೀತಲ್ ಟಿ.ಎಸ್ ತಿಳಿಸಿದ್ದಾರೆ.
ಹೊಸಕೋಟೆ ತಾಲೂಕಿನಲ್ಲಿ ಕೈಗೊಂಡಿರುವ ಎಸ್‌ಐಆರ್ ಕಾರ್ಯಕ್ರಮದಡಿ ಎನ್ಯುಮರೇಶನ್ ಫಾರ್ಮ್ ವಿತರಿಸಿ ಅವರು ಮಾತನಾಡಿದರು
ಹೊಸಕೋಟೆ ತಾಲೂಕಿನಲ್ಲಿ ಎಸ್‌ಐಆರ್ ಕರ‍್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅಗತ್ಯವಾಗಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು,ಪ್ರತಿಯೊ0ದು ಮನೆಗೆ ಬರುವ ಬಿಎಲ್‌ಒಗಳು ನೀಡುವ ಅರ್ಜಿಯನ್ನು ತುಂಬಿ ಅವರು ಕೇಳುವ ಕುಟುಂಬದ ಅಗತ್ಯ ಮಾಹಿತಿ ಮತ್ತು ದಾಖಲೆಯನ್ನು ಒದಗಿಸಲು ಸಾರ್ವಜನಿಕರು ಸಹಕಾರ ನೀಡಬೇಕು. ತಾಲೂಕಿನ ಗಣ್ಯರಿಗೆ ಅನ್ಯುಮರೇಷನ್ ಫಾರ್ಮ್ಗಳನ್ನು ನೀಡುವ ಮೂಲಕ ಅವರ ಮೂಲಕವೇ ಇದಕ್ಕೆ ಚಾಲನೆ ನೀಡಲಾಗಿದೆ ಎಂದರು

ತಾಲೂಕಿನಲ್ಲಿ ಒಟ್ಟು ೨,೪೬,೧೪೩ ಮತದಾರರಿದ್ದು, ೨೯೩ ಮತಗಟ್ಟೆಗಳಿವೆ. ೨೪೪ ಗ್ರಾಮೀಣ ಹಾಗೂ ೪೯ ನಗರ ಮತಗಟ್ಟೆಗಳಿವೆ. ಮತದಾರರ ಹೆಸರು ಸೇರ್ಪಡೆ,ತಿದ್ದುಪಡಿ,ಮೃತರ ಹೆಸರು ಡಿಲೀಟ್ ಇತ್ಯಾದಿಯಾಗಿ ಸಮಗ್ರವಾಗಿ ಮತದಾರರ ಪಟ್ಟಯನ್ನು ಪರಿಷ್ಕರಣೆ ಮಾಡಲಾಗುತ್ತದೆ. ಯಾವುದೇ ಮತದಾರರ ಹೆಸರನ್ನು ಸಮರ್ಪಕ ಪರಿಶೀಲನೆ ಹಾಗೂ ಅವಕಾಶ ನೀಡದೆ ಪಟ್ಟಿಯಿಂದ ತೆಗೆದುಹಾಕುವುದಿಲ್ಲ. ಆಕ್ಷೇಪಣೆಗಳಿದ್ದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು, ಸಾರ್ವಜನಿಕರು ಯಾವುದೇ ಆತಂಕ, ಗೊಂದಲಗಳಿಗೆ ಒಳಗಾಗದೆ ಬಿಎಲ್ ಒಗಳಿಗೆ ಅಗತ್ಯ ಮಾಹಿತಿಯನ್ನು ನೀಡಿ ಇದರ ಯಶಸ್ವಿಗೆ ಸಹಕಾರ ನೀಡಬೇಕು ಎಂದರು
ಹೊಸಕೋಟೆ ನಗರ ಸಭೆ ಪೌರಾಯುಕ್ತ ನೀಲ ಲೋಚನ ಪ್ರಭು ಮಾತನಾಡಿ, ಹೊಸಕೋಟೆ ನಗರದಲ್ಲಿ ಎಸ್‌ಐಆರ್ ಸಮಗ್ರ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ ಮನೆ ಮನೆ ಭೇಟಿ ಕರ‍್ಯ ನಡೆಯುತ್ತಿದೆ. ಜನರು ಬಿಎಲ್‌ಒಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು

