Home ರಾಜ್ಯಶೇ. ೯೯.೪೨ರಷ್ಟು ಮತದಾರರ ಪರಿಶೀಲನೆ ಪೂರ್ಣ

ಶೇ. ೯೯.೪೨ರಷ್ಟು ಮತದಾರರ ಪರಿಶೀಲನೆ ಪೂರ್ಣ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ-೨೦೨೬ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ

by Editor

ಬೆಂಗಳೂರು ಗ್ರಾಮಾಂತರ |
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ-೨೦೨೬ ಕಾರ್ಯವು ವೇಗವಾಗಿ ಸಾಗುತ್ತಿದ್ದು, ಜುಲೈ ೧೩ರ ವೇಳೆಗೆ ಜಿಲ್ಲೆಯಲ್ಲಿ ಒಟ್ಟು ೯,೦೭,೫೯೮ ಮತದಾರರನ್ನು (ಶೇ.೯೯.೪೨) ಯಶಸ್ವಿಯಾಗಿ ಪರಿಶೀಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಿಸಿದೆ.

ಮೇ ೧೪ರಿಂದ ಆರಂಭಗೊ0ಡಿರುವ ಈ ವಿಶೇಷ ಪರಿಷ್ಕರಣೆ ಕಾರ್ಯವು ಜೂನ್ ೩೦ರಿಂದ ಜುಲೈ ೨೯ರವರೆಗೆ ಮುಂದುವರಿದಿದ್ದು, ಮತದಾರರ ಮನೆಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.

ಜೂನ್ ೧೬ರ ವೇಳೆಗೆ ಜಿಲ್ಲೆಯಲ್ಲಿ ೯,೧೨,೯೧೩ ಮತದಾರರನ್ನು (ಶೇ.೯೧.೯೩) ಪರಿಶೀಲಿಸಲಾಗಿತ್ತು. ನಂತರದ ಹಂತದಲ್ಲಿ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲಾಗಿದ್ದು, ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೩,೯೧,೩೯೮ ಮತದಾರರ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ (ಶೇ.೪೨.೮೭).

ಈ ಪ್ರಕ್ರಿಯೆಯಲ್ಲಿ ೪,೦೨೧ ಮತದಾರರನ್ನು  ಮತದಾರರ ಪಟ್ಟಿಗೆ ಗುರುತಿಸಲಾಗಿದೆ. ಅಲ್ಲದೆ, ೭೪ ಮಂದಿ ಪತ್ತೆಯಾಗದ/ಅನುಪಸ್ಥಿತ ಮತದಾರರು, ೧,೦೫೫ ಮಂದಿ ಶಾಶ್ವತವಾಗಿ ಸ್ಥಳಾಂತರಗೊ0ಡವರು, ೨,೨೭೮ ಮೃತ ಮತದಾರರು, ೫೭೭ ನಕಲಿ ಅಥವಾ ಈಗಾಗಲೇ ನೋಂದಾಯಿತ ಮತದಾರರು ಹಾಗೂ ೩೭ ಇತರೆ ಪ್ರಕರಣಗಳು ಗುರುತಿಸಲ್ಪಟ್ಟಿವೆ.

ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ನೀಡಿರುವ ಮಾಹಿತಿಯಂತೆ, ಉಳಿದಿರುವ ಮತದಾರರ ಪರಿಶೀಲನೆ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ