Home ಅಪರಾಧಕೋಟ್ಯಂತರ ರೂ.ವಂಚಿಸಿರುವ ವ್ಯಕ್ತಿಯ ವಿರುದ್ದ ಕ್ರಮಕ್ಕೆ ಒತ್ತಾಯ

ಕೋಟ್ಯಂತರ ರೂ.ವಂಚಿಸಿರುವ ವ್ಯಕ್ತಿಯ ವಿರುದ್ದ ಕ್ರಮಕ್ಕೆ ಒತ್ತಾಯ

ನ್ಯಾಯಕ್ಕಾಗಿ ಪೊಲೀಸ್ ಠಾಣೆ ಕದ ತಟ್ಟಿದ ಜನರು

by Editor

ಹೊಸಕೋಟೆ : ತಾಲೂಕಿನ ಯಳಚಹಳ್ಳಿ ಗ್ರಾಮದ ಶಶಿಕುಮಾರ್ ಎಂಬಾತ ವಿವಿಧ ಆಮಿಷೆಗಳನ್ನು ತೋರಿಸಿ ಕೋಟ್ಯಂತರ ರೂ.ವಂಚನೆ ಮಾಡಿದ್ದಾನೆ ಎಂದು ವಂಚನೆಗೆ ಒಳಗಾದವರು ಆರೋಪಿಸಿ ನ್ಯಾಯಕ್ಕಾಗಿ ಹೊಸಕೋಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ಹೊಸಕೋಟೆ ಪೊಲೀಸ್ ಠಾಣೆ ಮುಂಭಾಗದಲ್ಲಿ ವಂಚನೆಗೆ ಒಳಗಾದವರು ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಯಳಚಳ್ಳಿ ಗ್ರಾಮದ ವೈ.ಕೆ ಶಶಿಕುಮಾರ್ ಎಂಬ ವ್ಯಕ್ತಿ ಬುಡಕಟು ಅಭಿವೃದ್ದಿ ಪ್ರಾಜಕ್ಟ್ ಹೆಸರಿನಲ್ಲಿ ಜನರಿಗೆ ಉಚಿತ ನಿವೇಶನ ಹಾಗೂ ಹೂಡಿಕೆ ಹಣವನ್ನು ಕೆಲವೇ ತಿಂಗಳಲ್ಲಿ ಡಬಲ್ ಮಾಡುವುದಾಗಿ ನಂಬಿಸಿ ಸುಮಾರು ನಾಲ್ಕು ರಾಜ್ಯಗಳ ನೂರಾರು ಜನರಿಂದ ಹಣ ಪಡೆದು ಮೋಸ ಮಾಡಿದ್ದಾನೆ.ಶಶಿಕುಮಾರ್ ಬುಡಕಟ್ಟು ಅಭಿವೃದ್ದಿ ಇಲಾಖೆಯಿಂದ ಪ್ರಾಜಕ್ಟ್ ದೊರೆತಿದ್ದು, ಖಾಲಿ ನಿವೇಶನ ಹಾಗೂ ಮನೆಗಳನ್ನು ಬಡವರಿಗೆ ವಿತರಣೆ ಮಾಡುವುದಾಗಿ ನಂಬಿಸಿ ಬೇರೆ ಬೇರೆ ರಾಜ್ಯಗಳಿಗೆ ಕರೆದುಕೊಂಡು ಹೋಗಿ ಅಲ್ಲಿಯ ಸ್ಥಳೀಯರನ್ನು ಗುಂಪು ಸೇರಿಸಿ ಅವರೊಂದಿಗೆ ಸಭೆ ನೆಡೆಸುವ ಮೂಲಕ ನಂಬಿಕೆ ಬರುವಂತೆ ನಾಟಕವಾಡಿ ನಮಗೆ ಮೋಸ ಮಾಡಿದ್ದಾನೆ. ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿ ದಿ. ಜಯಲಲಿತಾರ ಆಪ್ತೆ ಶಶಿಕಲಾ ರವರು ನನಗೆ ಒಂದು ವ್ಯವಹಾರ ನೀಡಿದ್ದಾರೆ. ಅವರ ಸುಮಾರು ೨೮ ಸಾವಿರ ಕೋಟಿ ಹಣ ನನ್ನ ವಶದಲ್ಲಿದೆ. ಆ ಹಣವನ್ನು ತಮಿಳುನಾಡು ಆಂದ್ರ ಪ್ರದೇಶ ಹಾಗೂ ಕರ್ನಾಟಕದ ಕೆಲವು ಗೋದಾಮಿನಲ್ಲಿ ಇರಿಸಿದ್ದೇನೆ. ಆ ಹಣದಲ್ಲಿ ನನಗೆ ಅರ್ಧ ಭಾಗವಿದ್ದು, ಅದರಲ್ಲಿ ನಮ್ಮ ಸದಸ್ಯರಿಗೆ ೫೦ ಕೋಟಿಯಿಂದ ೧೦೦ ಕೋಟಿ ವರೆಗೆ ಹಣ ನೀಡುತ್ತೇನೆ. ಇನ್ನು ಒಂದು ತಿಂಗಳು ನನ್ನ ಜೊತೆಗಿದ್ದು, ನನ್ನನ್ನು ಬೆಂಬಲಿಸಿ ಎಂದು ಸುಳ್ಳುಹೇಳಿ ನಮ್ಮಿಂದ ಹಣವನ್ನೂ ವಸೂಲು ಮಾಡಿದ. ಈ ವಿಚಾರ ಯಾರಿಗೂ ಹೇಳದಂತೆ ತಾಕೀತು ಮಾಡಿ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಶಶಿಕುಮಾರ್ ವಂಚನೆ ಮಾಡುತ್ತಿದ್ದಾನೆ ಎಂದು ಮನದಟ್ಟಾದ ಕೂಡಲೆ ನಾವುಗಳು ನೀಡಿದ ಹಣ ವಾಪಸ್ ಕೇಳಿದರೆ, ನೀವು ಹಣ ನೀಡಿದ ಯಾವುದೇ ದಾಖಲೆ ಇಲ್ಲ ಎಂದು ಜಾತಿ ನಿಂದನೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದಾನೆ. ಕೆಲವರಿಗೆ ನಿಮ್ಮ ಹೆಸರಿನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಆಗ ನೀವು ಜೈಲಿಗೆ ಹೋಗಬೇಕು ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.
ವಂಚನೆ ಮಾಡಿರುವ ವೈ.ಕೆ ಶಶಿಕುಮಾರ್ ವಿರುದ್ದ ಸಂಪೂರ್ಣ ತನಿಖೆ ನೆಡೆಸಿ ನಮಗೆ ನ್ಯಾಯ ಒದಗಿಸಬೇಕೆಂದು ವಂಚನೆಗೆ ಒಳಗಾದವರು ಆಗ್ರಹಿಸಿದ್ದಾರೆ. ಈ ಬಗ್ಗೆ ಸಿಪಿಐ ಗೋವಿಂದ್ ಅವರು ಪ್ರಕ್ರಿಯಿಸಿ ಈ ಬಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಂಕರ್, ಪರಮೇಶ್, ರಮೇಶ್, ರಘುನಂದನ್, ಪ್ರಮಿಳಾ ಸೇರಿ ಹಲವು ಸಂತ್ರಸ್ತರು ಹಾಜರಿದ್ದರು.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ