Home ಅಪರಾಧಬೈಕ್ ಬಸ್ ನಡುವೆ ಅಪಘಾತ, ಮೂವರು ಸಾವು

ಬೈಕ್ ಬಸ್ ನಡುವೆ ಅಪಘಾತ, ಮೂವರು ಸಾವು

ಬೈಕ್ ಮತ್ತು ಬಿಎಂಟಿಸಿ ಬಸ್ ನಡುವೆ ಭೀಕರ ಅಪಘಾತ

by Editor

 

ಸೂಲಿಬೆಲೆ : ಸೂಲಿಬೆಲೆ ದೇವನಹಳ್ಳಿ ರಸ್ತೆಯಲ್ಲಿ ಶುಕ್ರವಾರ ಸಂಜೆ ಬೈಕ್ ಮತ್ತು ಬಿಎಂಟಿಸಿ ಬಸ್ ನಡುವೆ ಭೀಕರ ಅಪಘಾತ ನಡೆದಿದ್ದು, ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮತ್ತೊಂದು ಮಗು ಗಾಯಗೊಂಡಿದೆ ಎಂದು ಡಿವೈಎಸ್ಪಿ ಮಲ್ಲೇಶ್ ತಿಳಿಸಿದ್ದಾರೆ.

ದೇವನಹಳ್ಳಿ ತಾಲೂಕಿನ ತೆಲ್ಲಹಳ್ಳಿ ಗ್ರಾಮದ ಅರುಣ್ (೩೨), ಈತನ ಪತ್ನಿ ಅನುಷಾ (೨೮), ರ‍್ನಿ (೩), ಸಾವನ್ನಪ್ಪಿರುವ ರ್ದುದೈವಿಗಳು.

ಸೂಲಿಬೆಲೆಯಿಂದ ದೇವನಹಳ್ಳಿಗೆ ಸಂಪರ್ಕ ಹೊಂದಿರುವ ಕದಿನಪುರ ಗ್ರಾಮಕ್ಕೆ ಸನಿಹದಲ್ಲಿ ರಸ್ತೆಗೆ ಹೊಂದಿಕೊ0ಡ0ತೆ ಇತ್ತೀಚ್ಚಿಗೆ ಮೇಪಲ್ ಟ್ರೀ ಲಾಜಿಸ್ಟಿಕ್ ವೇರ್ ಹೌಸ್ ಕಂಪನಿ ಪ್ರಾರಂಭಗೊ0ಡಿದೆ. ಈ ಕಂಪನಿಯ ಮುಂಭಾಗದಲ್ಲಿ ಸೂಲಿಬೆಲೆ ಕಡೆಯಿಂದ ಹೊರಟ್ಟಿದ್ದ ಬೈಕ್ ಹಾಗೂ ದೇವನಹಳ್ಳಿ ಕಡೆಯಿಂದ ಬರುತ್ತಿದ್ದ ಬಿಎಂಟಿಸಿ ಬಸ್ ನಡುವೆ ಅಪಘಾತ ನಡೆದಿದೆ. ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಗಂಡ, ಹೆಂಡತಿ, ಇಬ್ಬರು ಮಕ್ಕಳ ಪೈಕಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮತ್ತೊಂದು ಮಗು ಗಾಯಗೊಂಡಿದ್ದು ಅವರನ್ನು ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇಲ್ನೋಟಕ್ಕೆ ಬಸ್ ಚಾಲಕನ ಅಜಾಗುರುಕತೆ ಈಘಟನೆಗೆ ಕಾರಣ ಎಂದು ಡಿವೈಸ್ಪಿ ಮಲ್ಲೇಶ್ ತಿಳಿಸಿದ್ದಾರೆ.

ದೇವನಹಳ್ಳಿ,ಸೂಲಿಬೆಲೆ ರಸ್ತೆ ಎರಡು ಬದಿಯಲ್ಲಿ ಕಂಪನಿಯ ಲಾರಿಗಳು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದೆ ಅಪಘಾತಕ್ಕೆ ಮುಖ್ಯ ಕಾರಣ ಎಂದು ಸ್ಥಳೀಯರು ಕಂಪನಿ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು. ಜನರಿಗೆ ಪಾದಚಾರಿ ಮಾರ್ಗವಿಲ್ಲದಂತೆ ಲಾರಿಗಳನ್ನು ನಿಲ್ಲಿಸಲಾಗುತ್ತಿದೆ.ಜನರ,ದ್ವಿಚಕ್ರವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ.ಲಾರಿಗಳನ್ನು ರಸ್ತೆ ಬದಿಯಿಂದ ತೆರೆವು ಮಾಡಿಸಿ ಜನರಿಗೆ ಅನುಕೂಲ ಮಾಡುವ ಸಂಬ0ಧ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ ಎಂದು ಜನ ಆರೋಪಿಸಿದ್ದಾರೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸೂಲಿಬೆಲೆ ಸಿಪಿಐ ರಾಜಣ್ಣ ಬಿ. ಹಾಗೂ ಸಿಬ್ಬಂದಿಗಳು ಬೇಟಿ ನೀಡಿ ಗಾಯಾಗಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರೆವಾದರು.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ