Home ಜಿಲ್ಲೆಹೊಸಕೋಟೆ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ಹೊಸಕೋಟೆ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ರಥೋತ್ಸವಕ್ಕೆ ಶಾಸಕ ಶರತ್ ಬಚ್ಚೇಗೌಡ ಚಾಲನೆ

by Editor

ಹೊಸಕೋಟೆ : ನಗರದಲ್ಲಿ ನಡೆದಇತಿಹಾಸ ಪ್ರಸಿದ್ದ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವಸಹಸ್ರಾರು ಭಕ್ತರ ನಡುವೆವಿಜೃಂಭಣೆಯಿAದ ಪೂಜೆ ಸಲ್ಲಿಸುವ ಮೂಲಕ ಸಂಪನ್ನವಾಯಿತು.

ಬೆಳಿಗ್ಗೆ ೧೨ ಗಂಟೆಗೆ ಶ್ರೀ ಅವಿಮುಕ್ತೇಶ್ವರದೇವಾಲಯದಲ್ಲಿಉತ್ಸವ ಮುರ್ತಿಗಳಿಗೆ ಶ್ರದ್ಧಾಭಕ್ತಿಯಿಂದ ಶಾಸಕ ಶರತ್ ಬಚ್ಚೇಗೌಡ, ಕನ್ವಿನರ್‌ಕೇಶವಮೂರ್ತಿ, ತಹಸೀಲ್ದಾರ್ ಸೋಮಶೇಖರ್ ಸೇರಿದಂತೆ ಹಲವರುಗಣ್ಯರು ಪೂಜೆ ಸಲ್ಲಿಸುವ ಮೂಲಕ ತಾಲೂಕುಕಚೇÀರಿ ಮುಂಭಾಗದರಥದ ಬಳಿಗೆ ಮೆರವಣಿಗೆಯಲ್ಲಿ ಕಲಾತಂಡಗಳೊAದಿಗೆ ತಂದು, ಮಧ್ಯಾಹ್ನ ೧:೦೫ಕ್ಕೆ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದರು.

ರಥೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ ಅವಿಮುಕ್ತೆಶ್ವರ ಭ್ರಹ್ಮರಥೋತ್ಸವ ಹಾಗೂ ದ್ರೌಪದಮಕರಗೋತ್ಸವ ಈ ಎಲ್ಲಾ ಉತ್ಸವಗಳನ್ನು ಒಟ್ಟಿಗೆ ಸೇರಿಆಚರಿಸುವ ಹಬ್ಬವಾಗಿದ್ದು ೧೯೦೪ರಿಂದ ಹೊಸಕೋಟೆಯಲ್ಲಿ ನಿರಂತರವಾಗಿಆಚರಣೆ ಮಾಡಿಕೊಂಡು ಬರಲಾಗಿದೆ. ರಥೋತ್ಸವತನ್ನದೇಆದಐತಿಹ್ಯವನ್ನು ಹೊಂದಿದೆ. ಕಳೆದ ಭಾರಿಕೊಟ್ಟ ಮಾತಿನಂತೆ ನಮ್ಮಕುಟುಂಬದಿAದಲೆ ಸುಮಾರು ೨.೫ಕೋಟಿ ವೆಚ್ಚದಲ್ಲಿ ಹೊಸ ರಥವನ್ನುಕೊಡುಗೆಕೊಟ್ಟು ಈ ಭಾರಿ ಹೊಸಕೋಟೆಗೆ ಹೊಸ ರಥದಲ್ಲಿ ಬ್ರಹ್ಮರಥೋತ್ಸವಆಚರಣೆ ಮಾಡುತ್ತಿರುವುದು ಹೊಸ ಮೆರುಗನ್ನುತಂದಿದೆ.ಎAದರು.

ಸಾವಿರಾರು ಮಹಿಳೆಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಯುವಕರು, ಹಿರಿಯರು, ಮಹಿಳೆಯರು ಬಾಳೆ ಹಣ್ಣನ್ನುತೇರಿನತ್ತಎಸೆಯುವ ಮೂಲಕ ಹರಕೆತೀರಿಸುವ ಕೆಲಸ ಮಾಡಿದರು.ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದಲ್ಲಿ ವೀರಗಾಸೆ, ಡೊಲ್ಲುಕುಣಿತ, ಬೊಂಬೆ ಕುಣಿತ ಸೇರಿದಂತ ಹಲವು ರೀತಿಯ ಕಲಾ ತಂಡಗಳು ವಿವಿಧತಮಟೆ ವಾದ್ಯಗಳು ಭಾಗವಹಿಸಿದ್ದವು.

ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ರಥೋತ್ಸವಆಚರಣೆ ಸಮಿತಿಕನ್ವಿನರ್‌ಕೇಶವಮೂರ್ತಿ, ತಹಸೀಲ್ದಾರ್ ಸೋಮಶೇಖರ್, ಪೌರಾಯುಕ್ತ ನೀಲಲೋಚನ ಪ್ರಭು, ತಾಪಂಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ, ಪ್ರಧಾನಅರ್ಚಕರವಿಕುಮಾರ್ ಸೇರಿದಂತೆ ಹಲವಾರುಗಣ್ಯರು ಹಾಜರಿದ್ದರು.

Spread the love

You may also like

Leave a Comment

ಸೂಲಿಬೆಲೆಯಲ್ಲಿ ರೌಡಿಶೀಟರ್ ಹ*ತ್ಯೆ   ಹಸಿರೇ ನಮ್ಮ ಉಸಿರಾಗಿರಲಿ   ಹಿರಿಯ ಶಾಸಕ ಹೆಚ್‌ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡದೆ ಕಡೆಗಣನೆ ಮಾಡಿರುವುದು ಸರಿಯಲ್ಲ   ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ಅವಶ್ಯ   ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹಿನ್ನಲೆ, ದೊಡ್ಡಕೋಲಿಗದಲ್ಲಿ ಸಂಭ್ರಮಾಚರಣೆ