ಹೊಸಕೋಟೆ : ಹೊಸಕೋಟೆಯಲ್ಲಿ ಶ್ರೀ ದ್ರೌಪದಮ್ಮನ ಮಲ್ಲಿಗೆ ಹೂವಿನ ಕರಗ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಈ ಮಲ್ಲಿಗೆ ಹೂವಿನ ಕರಗವನ್ನು ಲಕ್ಷಾಂತರ ಜನರು ರಸ್ತೆ ಇಕ್ಕಲಗಳಲ್ಲಿ ಸಾಲಾಗಿ ನಿಂತು ವೀಕ್ಷಿಸಿದರು.
ರಾತ್ರಿ ಸುಮಾರು ೧ ಗಂಟೆಗೆ ತಿಗಳರ ಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಪೂಜಾ ವಿಧಿ ಪೂರ್ಣಗೊಳಿಸಿ ಹೊರಟ ಕರಗ ನಗರದ ಬಹುತೇಕ ಎಲ್ಲಾ ಬಡಾವಣೆಗಳಲ್ಲಿ ಸಂಚರಿಸಿ ಭಕ್ತಾಧಿಗಳಿಂದ ಆರತಿ ಸ್ವೀಕರಿಸಿತು. ಪೂಜಾರಿ ಆರ್.ಕಿರಣ್ ಐದನೇ ಬಾರಿಗೆ ದೇವಿಯ ಕರಗ ಹೊರುವ ಮೂಲಕ ಯಶಸ್ವಿಯಾಗಿ ಕರಗ ಮಹೋತ್ಸವ ನೆಡೆಸಿಕೊಟ್ಟಿರು.
ಶ್ರೀ ದ್ರೌಪದಮ್ಮದೇವಿ ಕರಗ ದೇವರಿಗೆ ಶಾಸಕ ಶರತ್ ಬಚ್ಚೇಗೌಡರು ಪತ್ನಿ ಪ್ರತಿಭಾ ಶರತ್ ಅವರೊಂದಿಗೆ ಪೂಜೆ ಸಲ್ಲಿಸಿದರು. ಕರಗ ಮಹೋತ್ಸವದಲ್ಲಿ ನೂರಾರು ವೀರ ಕುಮಾರರು ಖಡ್ಗಹಿಡಿದು ನಗರದ ಎಲ್ಲಾ ಭಾಗಗಳಲ್ಲಿ ಸಂಚರಿಸುತಿದ್ದ ದೃಶ್ಯ ಎಲ್ಲರ ಗಮನ ಸೆಳೆದಿತ್ತು. ಮಲ್ಲಿಗೆ ಹೂವಿನ ಕರಗವನ್ನು ವೀಕ್ಷಿಸಲು ರಾಜ್ಯ, ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ಬಂದಿದ್ದರು. ಎಲ್ಲರೂ ಎಲ್ಲಾ ರಸ್ತೆಗಳ ಇಕ್ಕೆಲೆಗಳಲ್ಲಿ ನಿಂತು ಕರಗವನ್ನು ವೀಕ್ಷಿಸಿದರು. ಇಡೀ ರಾತ್ರಿ ನಗರದ ಎಲ್ಲಾ ರಸ್ತೆಗಳು ಜನರಿಂದ ತುಂಬಿತ್ತು. ನಗರದ ಚಿಕ್ಕಕೆರೆ ಅಂಗಳದಲ್ಲಿ ನಡೆಯುವ ಕರಗದ ಪೂಜಾ ವಿಧಿವಿದಾನಗಳನ್ನು ವೀಕ್ಷಿಸಲು ಸಾವಿರಾರು ಜನರು ಸೇರಿದ್ದರು. ನಗರದ ವಿವಿಧಡೆಯಿರುವ ೩೨ಕ್ಕೂ ಹೆಚ್ಚಿನ ದೇವಾಲಯಗಳಿಂದ ಅಲಂಕೃತಗೊ0ಡ ವಿವಿಧ ರೀತಿಯ ಪಲ್ಲಕ್ಕಿಗಳಲ್ಲಿ ದೇವರ ಮೂರ್ತಿಗಳನ್ನು ಕೂರಿಸಿಕೊಂಡು ಬರಲಾಗಿತ್ತು. ಈ ದೇವರ ಮೂರ್ತಿಗಳ ಮುಂದೆ ಕರಗ ನೃತ್ಯ ಮಾಡಿದ್ದು ಗಮನಸೆಳೆಯಿತು.
ಹೊಸಕೋಟೆಯಲ್ಲಿ ಅದ್ಧೂರಿ ಶ್ರೀ ದ್ರೌಪದಮ್ಮ ದೇವಿ ಕರಗ ಮಹೋತ್ಸವ
ರಸ್ತೆ ಇಕ್ಕಲೆಗಳಲ್ಲಿ ನಿಂತು ಕರಗ ಕಣ್ತುಂಬಿಸಿಕೊ0ಡು ನೂರಾರು ಜನರು
190
previous post

