Home ರಾಜ್ಯಛಾಯಗ್ರಾಹಕರಿಗೆ ನೆರವಾಗಲಿದೆ ಆಸರೆ

ಛಾಯಗ್ರಾಹಕರಿಗೆ ನೆರವಾಗಲಿದೆ ಆಸರೆ

ಸಂಘದ ಸದಸ್ಯತ್ವ ಪಡೆದುಕೊಳ್ಳಲು ಅಧ್ಯಕ್ಷ ಸ್ವರೂಪ್ ಮನವಿ

by Editor

ಹೊಸಕೋಟೆ : ಹೊಸಕೋಟೆ ಛಾಯಾ ಗ್ರಾಹಕ ಸಂಘ ಮತ್ತು ಕರ್ನಾಟಕ ರಾಜ್ಯ ಛಾಯಾಗ್ರಾಹಕರ ಸಂಘವು ಸದಸ್ಯತ್ವ ಹೊಂದಿರುವ ಸದಸ್ಯರಿಗೆ ಆಸರೆ ಯೋಜನೆಯನ್ನು ಜಾರಿಗೊಳಿಸಿದೆ.
ಸಂಘದ ಸದಸ್ಯರು ನಿಧನರಾದಲ್ಲಿ ಅವರು ಕುಟುಂಬಕ್ಕೆ ೧ ಲಕ್ಷ ರೂ ಆರ್ಥಿಕ ನೆರವನ್ನು ಆಸರೆ ಯೋಜನೆ ಮೂಲಕ ಘೋಷಿಸಿದೆ ಎಂದು ಛಾಯಗ್ರಾಹಕರ ಸಂಘದ ತಾಲೂಕು ಅಧ್ಯಕ್ಷ ಸ್ವರೂಪ್ ತಿಳಿಸಿದ್ದಾರೆ.

ಹೊಸಕೋಟೆಯಲ್ಲಿ ನಡೆದ ಛಾಯಾಗ್ರಾಹಕರ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ದುಡಿಯುತ್ತಿರುವ ಛಾಯಗ್ರಾಹಕರ ಕುಟುಂಬಕ್ಕೆ ನೆರೆವಾಗಲೆಂದು ಆಸರೆ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಛಾಯಗ್ರಾಹಕರು ಅಪಘಾತದಲ್ಲಿ ಗಾಯಗೊಂಡರೆ ಅಥವಾ ಶಾಶ್ವತವಾದ ಅಂಗ ವೈಕಲ್ಯಕ್ಕೆ ತುತ್ತಾದ್ದಲ್ಲಿ ೨೦ ಸಾವಿರದಿಂದ ೧೦ ಲಕ್ಷದವರಿಗೂ ಆರ್ಥಿಕ ನೆರವು ನೀಡಲು ಯೋಜಿಸಲಾಗುತ್ತದೆ. ಸಂಘದ ಸದಸ್ಯತ್ವ ಹೊಂದಿದವರಿಗೆ ಮಾತ್ರ ಇದರ ಸದುಪಯೋಗ ಆಗಲಿದೆ. ಆಗಸ್ಟ್ ೧೯ರ ವಿಶ್ವ ಛಾಯಾಗ್ರಾಹಕರ ದಿನದಿಂದ ಈ ಯೋಜನೆಗೆ ಚಾಲನೆ ದೊರೆಯಲಿದೆ. ಕರ್ನಾಟಕದಾದ್ಯತ ಸುಮಾರು ೨ ಲಕ್ಷಕ್ಕೂ ಅಧಿಕ ಛಾಯಾಗ್ರಾಹಕ ಆಸರೆ ಯೋಜನೆಯ ಅಡಿಯಲ್ಲಿ ಸುಮಾರು ೧೦ ಲಕ್ಷದವರೆಗೂ ಸೌಲಭ್ಯ ಪಡೆಯಲು ಹೊಸ ಬೈಲಾ ಮತ್ತು ತನ್ನಾದೇ ಆದ ಮೊಬೈಲ್ ಆ್ಯಪ್ ನೀಡಲಾಗುತ್ತದೆ.ಇದರ ಮೂಲಕ ಪ್ರತಿಯೊಂದು ಮಾಹಿತಿಯನ್ನು ತಿಳಿಯಬಹುದಾಗಿದೆ ಎಂದರು

ಶೇ. ೯೦ ರಷ್ಟು ನೋಂದಣಿ :
ಶೇ.೯೦ ರಷ್ಟು ಛಾಯಗ್ರಾಹಕರು ನೋಂದಣಿಯಾಗಿದ್ದು, ಉಳಿದವರು ಜೂನ್ ೨೯ ರೊಳಗೆ ಸಂಘದ ಕಚೇರಿಯಲ್ಲಿ ಸದಸ್ಯತ್ವ ಪಡೆದು ನಂತರ ಸದಸ್ಯತ್ವದ ಐಡಿ ಕಾರ್ಡ್, ಆಧಾರ್ ಕಾರ್ಡ್ ಮತ್ತು ನಾಮಿನಿಯ ಆಧಾರ್ ಹಾಗೂ ಭಾವಚಿತ್ರದೊಂದಿಗೆ ಆಸರೆ ಯೋಜನೆಯ ಫಲಾನುಭವಿಯಾಗಬಹುದು ಎಂದು ತಿಳಿದರು

ಈ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಅಮರನಾಥ್, ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಉಪಾಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಮೂರ್ತಿ, ಖಜಾಂಚಿ ಈಶ್ವರ್, ಸಂಘಟನಾ ಕಾರ್ಯದರ್ಶಿ ಅರುಣ್, ಸಂಚಾಲಕರು ವಿಜಯ್ ಕುಮಾರ್, ಕ್ರೀಡಾ ಸಂಚಾಲಕ ಮಂಜುನಾಥ್ ಬಿ.ಕೆ, ನಿರ್ದೇಶಕರಾದ ಕೃಷ್ಣಪ್ಪ ವಿ, ಕೃಷ್ಣ ವಿ, ಬಾಲಕೃಷ್ಣ, ಕೆಂಪೇಗೌಡ, ಚನ್ನಕೃಷ್ಣಪ್ಪ, ಹರೀಶ್ ಎಂ, ಶಿವಶಂಕರಾಚಾರಿ, ಮಂಜುನಾಥ್ ಎನ್, ರಂಗಚಾರಿ ಮಾತ್ತು ಹಿರಿಯ ಸಲಹೆಗಾರ ಶಿವಕುಮಾರ್, ಮುನಿರಾಜ, ಆನಂದ್ ಹಾಗೂ ಎಲ್ಲ ಹೋಬಳಿ ಛಾಯಗ್ರಾಹಕರು ಹಾಜರಿದ್ದರು.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ