Home ರಾಜ್ಯಬೆಸ್ಕಾಂ ಖಾಸಗೀಕರಣ ವಿರೋಧಿಸಿ ಸಭೆ

ಬೆಸ್ಕಾಂ ಖಾಸಗೀಕರಣ ವಿರೋಧಿಸಿ ಸಭೆ

ಬೆಸ್ಕಾಂ ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣ ಮಾಡಲು ಹೊರಟಿರುವ ನಡೆ ಸರಿಯಲ್ಲ

by Editor

ಹೊಸಕೋಟೆ : ಬೆಸ್ಕಾಂ ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣ ಮಾಡಲು ಹೊರಟಿರುವ ನಡೆ ಸರಿಯಲ್ಲ. ಕೂಡಲೇ ಇಂಥ ನಿರ್ಧಾರವನ್ನು ಕೈ ಬಿಡುಬೇಕು ಎಂದು ಬೆಸ್ಕಾಂ ಇಇ ವೆಂಕಟೇಶಪ್ಪ ಒತ್ತಾಯಿಸಿದ್ದಾರೆ.

ನಗರದ ಬೆಸ್ಕಾಂ ಕಚೇರಿ ಎದುರು ನಡೆದ ವಿದ್ಯುತ್ ಖಾಸಗಿಕರಣ ವಿರೋಧಿಸಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು

ಗ್ರಾಹಕರಿಗೆ ೨೪ ಗಂಟೆ ಕಾಲ ನಿರಂತರ ವಿದ್ಯುತ್ ಪೂರೈಕೆ ಮೂಲಕ ಉತ್ತಮ ಸೇವೆಯನ್ನು ಒದಗಿಸುತ್ತಿರುವ ಬೆಸ್ಕಾಂ ವಿದ್ಯುತ್ ಕ್ಷೇತ್ರ ಜನಸೇಹಿಯಾಗಿದೆ.
ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಿರುವ ಈ ಸೇವೆಯನ್ನು ಯಾವುದೇ ಕಾರಣಕ್ಕೂ ದುರ್ಬಲಗೊಳಿಸಬಾರದು.ಜನರಿಗೆ ನಿರಂತರವಾಗಿ ಸೇವೆ ಸಿಗುವಂತೆ ವ್ಯವಸ್ಥೆ ಮುಂದುವರಿಯಬೇಕು. ಟಾಟಾ ಪವರ್ ಕಂಪನಿ ಸಲ್ಲಿಸಿರುವ ಪ್ಯಾರಲೆಲ್ ಲೈಸೆನ್ಸಿಂಗ್ ಅರ್ಜಿಯನ್ನು ರದ್ದುಗೊಳಿಸುವಂತೆ ಸರಕಾರ ಮತ್ತು ಕೆಇಆರ್‌ಸಿಗೆ ಮನವಿ ಸಲ್ಲಿಸುವ ಕುರಿತು ಅರಿವು ಮೂಡಿಸಲು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಲು ಈ ಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಬೆಸ್ಕಾಂ ಎಇಇ ಪುಟ್ಟಸ್ವಾಮಿ, ಸಮಿತಿ ಪದಾಧಿಕಾರಿಗಳು, ಸದಸ್ಯರು, ನೌಕರರು ಹಾಜರಿದ್ದರು.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ