Home ರಾಜ್ಯಬೇಸಿಗೆಯಲ್ಲೂ ಹಾಲು ಉತ್ಪಾದನೆಯಲ್ಲಿ ಹೆಚ್ಚಳ

ಬೇಸಿಗೆಯಲ್ಲೂ ಹಾಲು ಉತ್ಪಾದನೆಯಲ್ಲಿ ಹೆಚ್ಚಳ

ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡ ಹೇಳಿಕೆ

by Editor

ಹೊಸಕೋಟೆ : ರಾಜ್ಯದಲ್ಲಿ ಬೇಸಿಗೆ ದಿನಗಳಲ್ಲೂ ಕೆಎಂಎಫ್ ಹಾಲು ಸಂಗ್ರಹಣೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ.ರೈತರ ಪರಿಶ್ರಮ ಈ ಸಾಧನೆಗೆ ಕಾರಣವಾಗಿದೆ ಎಂದು ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡರು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆ ದಿನಗಳಲ್ಲೂ ಹೈನಗಾರಿಕೆಯನ್ನು ನಂಬಿಕೊAಡಿರುವ ರೈತರು ಶ್ರಮಪಟ್ಟ ರಾಸುಗಳಿಗೆ ಅಗತ್ಯ ಪೋಷ್ಟಿಕಾಂಶಗಳನ್ನು ಹೊಂದಿರುವ ಮೇವು,ಉತ್ತಮ ಆರೈಕೆ ಮಾಡಿದ ಪರಿಣಾಮ ಹಾಲು ಇಳುವರಿಯಲ್ಲಿ ಪ್ರಗತಿ ಸಾಧಿಸಿದೆ.೨೦೨೬ ಏಪ್ರಿಲ್ ನಲ್ಲಿ ದಿನಕ್ಕೆ ೧.೦೨ ರಿಂದ ೧.೦೩ ಕೋಟಿ ಲೀಟರ್ ಹಾಲು ಸಂಗ್ರಹವಾಗಿದ್ದರೆ,ಮೇ ತಿಂಗಳಲ್ಲಿ ೧.೦೪ ಕೋಟಿ ಲೀಟರ್‌ಗೆ ಏರಿಕೆಯಾಗಿದೆ.ಅಲ್ಲದೆ ಏಪ್ರಿಲ್ ೨೧ ರಿಂದ ಮೇ ೨೦ರಂದು ತಲಾ ೧.೦೮ ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗಿದೆ ಎಂದರು

ಬಮೂಲ್ ೧೭ ಲಕ್ಷ ಲೀಟರ್ ಸಂಗ್ರಹಣೆ : ಇನ್ನೂ ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ವ್ಯಾಪ್ತಿಯಲ್ಲೂ ಬೇಸಿಗೆ ದಿನಗಳಲ್ಲಿ ಉತ್ತಮ ಹಾಲು ಸಂಗ್ರಹಣೆಯನ್ನು ಮಾಡಲಾಗಿದೆ.ಬೇಸಿಗೆಯಲ್ಲಿ ಬಮೂಲ್ ನಿಂದ ೧೭.ಲಕ್ಷ ಲೀಟರ್ ಸಂಗ್ರಹಿಸಲಾಗಿದ್ದರೇ,ಹಾಸನ ಒಕ್ಕೂಟದಿಂದ ೧೫ ಲಕ್ಷ,ಮಂಡ್ಯ ಒಕ್ಕೂಟದಿಂದ ೧೨ ಲಕ್ಷ, ತುಮಕೂರು ೧೦.೫ ಲಕ್ಷ ಹಾಗೂ ಮೈಸೂರು ಭಾಗದಲ್ಲಿ ೧೦ ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗಿದ್ದು, ಬಮೂಲ್ ಇತರೆ ಒಕ್ಕೂಟಗಳಿಂತಲೂ ಹೆಚ್ಚು ಹಾಲು ಸಂಗ್ರಹಣೆ ಮಾಡಿದೆ.ಡಿ.ಕೆ ಸುರೇಶ್ ಆಡಳಿತದಲ್ಲಿ ಅತ್ಯುತ್ತಮ ಸಾಧನೆ ಒಕ್ಕೂಟ ಮಾಡುತ್ತಿದೆ.ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಒಕ್ಕೂಟ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದು,ಹಾಲು ಉತ್ಪಾದಕರ ಶ್ರೇಯೋಭಿವೃದ್ದಿಗೆ ಒತ್ತು ನೀಡಿ ಕೆಲಸ ಮಾಡಲಾಗುತ್ತಿದೆ.ಮುಂದಿನ ದಿನಗಳಲ್ಲೂ ಹೈನಗಾರರು ಇದೇ ರೀತಿಯ ಪ್ರೋತ್ಸಾಹ,ಸಹಕಾರ ಒಕ್ಕೂಟಕ್ಕೆ ನೀಡಬೇಕು ಎಂದು ತಿಳಿಸಿದರು.

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ