Home ರಾಜ್ಯಉತ್ತಮ ಆರೋಗ್ಯ ಹೊಂದಲು ಜೀವನ ಶೈಲಿಯಲ್ಲಿ ಬದಲಾವಣೆ ಅಗತ್ಯ

ಉತ್ತಮ ಆರೋಗ್ಯ ಹೊಂದಲು ಜೀವನ ಶೈಲಿಯಲ್ಲಿ ಬದಲಾವಣೆ ಅಗತ್ಯ

ಮಾನವ ಹಕ್ಕುಗಳ ಜಾಗೃತಿ ಸಮಿತಿಯಿಂದ ನೇತ್ರ ತಪಾಸಣೆ ಶಿಬಿರ

by Editor

ಹೊಸಕೋಟೆ : ಒತ್ತಡದ ಜೀವನ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದ್ದು,ಜೀವನ ಶೈಲಿ ಬದಲಾವಣೆಯಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗಲಿದೆ ಎಂದು ಹೊಸಕೋಟೆ ಜೆಎಂಎಫ್‌ಸಿ ನ್ಯಾಯಾಲಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರುಣ್ ಕುಮಾರ್ ಜಿ.ಅವರು ಹೇಳಿದ್ದಾರೆ.

ಹೊಸಕೋಟೆ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜಾಗೃತಿ ಸಮಿತಿ, ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಕಾಲಘಟ್ಟದಲ್ಲಿ ಹದಿಹರೆಯದ ಯುವಕ ಯುವತಿಯರಲ್ಲಿ ಕಣ್ಣಿನ ಸಮಸ್ಯೆಗಳು ಉಲ್ಬಣವಾಗುತ್ತಿದೆ. ಮುಖ್ಯವಾಗಿ ಮೊಬೈಲ್ ಬಳಕೆ, ಟಿವಿ ವೀಕ್ಷಣೆ ಒಂದೆಡೆಯಾದರೆ, ನಾವು ಸೇವಿಸುವ ಆಹಾರ ಪದ್ಧತಿಯಿಂದಲೂ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮನುಷ್ಯನ ದೇಹದಲ್ಲಿಕಣ್ಣು ಅತ್ಯಮೂಲ್ಯ ಅಂಗವಾಗಿದ್ದು , ಇದರ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಬಿ.ಟಿ ವಿಶ್ವನಾಥ ಮಾತನಾಡಿ, ನಮ್ಮ ಸಂಘಟನೆ ಹಲವಾರು ರೀತಿಯ ಸಾಮಾಜಿಕ ಕಾರ್ಯಗಳ ಜತೆ ಜತೆಗೆ ನೇತ್ರ ತಪಾಸಣೆ,ರಕ್ತದಾನ ಶಿಬಿರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಇಂದಿನ ಶಿಬಿರದಲ್ಲಿ ೧೧೫೦ಕ್ಕೂ ಹೆಚ್ಚಿನ ಜನರು ನೇತ್ರತಪಾಸಣೆಗೆ ಒಳಗಾಗಿದ್ದು, ಇದರಲ್ಲಿ ೪೪೨ ಮಂದಿಗೆ ಕನ್ನಡಕ ಆಳವಡಿಸಲು ವೈದ್ಯರು ಸೂಚಿಸಿದ್ದಾರೆ. ಈ ಕನ್ನಡಕಗಳನ್ನು ಉಚಿತವಾಗಿ ನೀಡಲಾಗುವುದು. ೧೬೨ ಜನರು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಸುಮಾರು ಎರಡು ದಶಕಗಳಿಂದ ಸಾವಿರಾರು ನೇತ್ರ ತಪಾಸಣೆ ಶಿಬಿರಗಳನ್ನ ಆಯೋಚಿಸಿದ್ದು, ಒಂದು ಲಕ್ಷಕ್ಕೂ ಅಧಿಕ ಜನರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಲಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ, ಕರ್ನಾಟಕರಾಜ್ಯ ಮಾನವ ಹಕ್ಕುಗಳ ಜಾಗೃತಿ ಸಮಿತಿ ಮಹಿಳಾ ಘಟಕದರಾಜ್ಯಾಧ್ಯಕ್ಷೇ ಮಂಜುಳಾ, ಕಲಾವಿದ ಶಿವಕುಮಾರ ಆರಾಧ್ಯ, ಮೇದಶ್ರೀ ಶಾಲೆಯ ಪ್ರಾಂಶುಪಾಲ ಅಶ್ವತ್ ನಾರಾಯಣ್, ತಾಲೂಕುಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಅಂಬು ಸೇಲ್ವಂ, ವೈದ್ಯಾಧಿಕಾರಿಗಳಾದ ಡಾ.ರಾಘವೇಂದ್ರ, ಡಾ.ಮಂಜುನಾಥ್, ಸಮಾಜಸೇವಕರಾದ ರಾಧಾಗೋವಿಂದ್, ರವಿ, ರತ್ನಮ್ಮ, ವರಲಕ್ಷ್ಮಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

ಕೋಟ್
ಗ್ರಾಮೀಣ ಭಾಗದಲ್ಲಿ ವೃದ್ದ ಮಹಿಳೆಯರು,ಪುರುಷರು ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದು,ಅಂಥವರಿಗೆ ಇಂಥ ಶಿಬಿರಗಳು ಉಪಯೋಗವಾಗವಾಗಲಿ.ಇಳಿ ವಯಸ್ಸಿನ ಜನರಲ್ಲಿ ಬೆಳಕು ತರಿಸುವುದೇ ನಮ್ಮ ಸಂಘಟನೆಯ ಮೂಲ ಉದ್ದೇಶವಾಗಿದೆ- ಬಿ.ವಿ ವಿಶ್ವನಾಥ್ | ರಾಜ್ಯಾಧ್ಯಕ್ಷರು ಕರ್ನಾಟಕ ಮಾನವ ಹಕ್ಕುಗಳ ಜಾಗೃತಿ ಸಮಿತಿ

Spread the love

You may also like

Leave a Comment

ಬಸವಣ್ಣನವರು ಸಾಮಾಜಿಕ ನ್ಯಾಯದ ಹರಿಕಾರ   ಯಳಚಹಳ್ಳಿಯಲ್ಲಿ ದಲಿತರ ಭೂಮಿ ಕಬಳಿಸಲು ಯತ್ನ   ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು   ೫೦ ಕೋಟಿ ರೂ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ   ಡಾ.ವಸಂತಿ ಅಮರ್ ನೂತನ ಸಿಇಒ