Home ರಾಜ್ಯವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ೨ ಲಕ್ಷ ದೇಣಿಗೆ

ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ೨ ಲಕ್ಷ ದೇಣಿಗೆ

ಅಯೋದ್ಯ ಬಾಲ ರಾಮನ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್‌ರಿಂದ ವೆಂಕಟೇಶ್ವರಸ್ವಾಮಿ ವಿಗ್ರಹ ಕೆತ್ತನೆ

by Editor

ಹೊಸಕೋಟೆ:  ನಗರದ ಮೇಲಿನ ಪೇಟೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ವಹ್ನೀಕುಲ ತಿಗಳರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ಸಿ ಜಯರಾಜ್ ೨ ಲಕ್ಷ ರೂ ದೇಣಿಗೆ ನೀಡಿದ್ದಾರೆ.
ದೇವಾಲಯದ ಆಡಳಿತ ಮಂಡಳಿಯ ಸೋಲಪ್ಪನವರ ಮಗ ಹಾಗೂ ವೈಷ್ಣವಿ ಪ್ಲವರ್ ಮಾಲೀಕರಾದ ಸುರೇಶ್‌ಕುಮಾರ್ ನೇತೃತ್ವದಲ್ಲಿ ದೇವಾಲಯ ನಿರ್ಮಾಣಗೊಳ್ಳುತಿದ್ದು , ಅಯೋದ್ಯಯ ಶ್ರೀಬಾಲ ರಾಮನ ವಿಗ್ರಹವನ್ನು ಕೆತ್ತನೆ ಮಾಡಿದ ಮೈಸೂರು ಮೂಲದ ಅರುಣ್ ಯೋಗಿರಾಜ್‌ರವರ ಹಸ್ತದಿಂದ ದೇವರ ವಿಗ್ರಹ ರೂಪಗೊಳ್ಳುತ್ತಿದೆ. ಸುಮಾರು ೨೫ ಲಕ್ಷ ವೆಚ್ಚದಲ್ಲಿ ವಿಗ್ರಹ ಹಾಗೂ ಗರುಡಗಂಭ ನಿರ್ಮಾಣಗೊಳ್ಳುತ್ತಿದೆ.
ದೇಣಿಗೆ ನೀಡಿ ಮಾತನಾಡಿದ ಡಾ.ಸಿ.ಜಯರಾಜ್, ಹೊಸಕೋಟೆ ಪಕ್ಕದ ತಾಲೂಕು ಮಾಲೂರು ಭಾಗದಲ್ಲಿರುವ ಚಿಕ್ಕ ತಿರುಪತಿ ಮಾದರಿಯಲ್ಲಿ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ. ಈ ಭಾಗದ ಜನರಿಗೆ ದೇವರ ದರ್ಶನ ಬಾಗ್ಯ ಶೀಘ್ರದಲ್ಲಿ ದೊರೆಯಲಿದೆ. ದೇವರ ಮೇಲಿನ ನಂಬಿಕೆಯಿAದ ಸೇವಾ ರೂಪದಲ್ಲಿ ದೇವಾಲಯ ನಿರ್ಮಾಣಕ್ಕೆ ಸಹಾಯ ಮಾಡುತ್ತಿರುವುದು ದೇವರ ಪ್ರೇರಣೆಯಾಗಿದೆ. ಶೀಘ್ರ ದೇವಾಲಯ ನಿರ್ಮಾಣಗೊಂಡು ದೇವರ ದರ್ಶನ ಭಾಗ್ಯ ಜನರಿಗೆ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದರು

Spread the love

You may also like

Leave a Comment

ನಿಲಯದ ವಿದ್ಯಾರ್ಥಿಗಳಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದ ತಹಸೀಲ್ದಾರ್   ಬಮೂಲ್ ಅಭಿವೃದ್ದಿಯಲ್ಲಿ ಗುತ್ತಿಗೆ ನೌಕರರ ಪಾತ್ರ ಸ್ಮರಣೀಯ   ಹೊಸಕೋಟೆ ಬಿಸಿಎಂ ಹಾಸ್ಟಲ್ ಗೆ ತಹಸೀಲ್ದಾರ್ ದಿಡೀರ್ ಭೇಟಿ,ಪರಿಶೀಲನೆ   ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಸಮಯ ಪಾಲನೆ ಮಾಡಿ   ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನಿರಂತರ ಪ್ರೋತ್ಸಾಹ