ಸೂಲಿಬೆಲೆ : ಜನರ ವಿಶ್ವಾಸ,ನಂಬಿಕೆಯನ್ನು ಗಳಿಸಿರುವ ನಂದಿನಿ ಉತ್ಪನ್ನಗಳ ಮೇಲೆ ಕೆಲವರು ತಪ್ಪು ಸಂದೇಶಗಳನ್ನು ನೀಡಿ ದಾರಿ ತಪ್ಪಿಸುತ್ತಿರುವುದು ಖಂಡನೀಯ.ಈ ಉತ್ಪನ್ನಗಳ ಸೇವನೆಯಿಂದ ಯಾವುದೇ ತೊಂದರೆಯಿಲ್ಲ ಎಂದು ಬಮೂಲ್ ನಿರ್ದೇಶಕ ಬಿ.ವಿ ಸತೀಶ್ ಗೌಡ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ರೈತರು ಕಟ್ಟಿ ಬೆಳೆಸಿರುವ ನಂದಿನಿ ಉತ್ಪನ್ನಗಳು ಗುಣಮಟ್ಟದಿಂದ ಕೂಡಿವೆ.ಪ್ರತಿ ನಿತ್ಯ ಗ್ರಾಮೀಣ ಭಾಗದಿಂದ ರೈತರು ಪೂರೈಕೆ ಮಾಡುತ್ತಿರುವ ಗುಣಮಟ್ಟದ ಹಾಲಿನಿಂದ ತಯಾರಾಗುವ ಉತ್ಪನ್ನಗಳ ಬಗೆ ಅಪ್ರಚಾರ ಮಾಡುತ್ತಿರುವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವ ಸಂಶಯವಿದೆ. ಗುಣಮಟ್ಟದಲ್ಲಿ ನಂದಿನಿ ರಾಜಿ ಮಾಡಿಕೊಳ್ಳುವುದಿಲ್ಲ. ಜನರಿಗೆ ವಿಶ್ವಾಸ, ನಂಬಿಕೆ ಉಳಿಸಿಕೊಂಡು ಹೋಗುತ್ತಿರುವ ನಂದಿನಿ ಉತ್ಪನ್ನಗಳ ಬಗೆ ನಡೆಯುತ್ತಿರುವ ಅಪಪ್ರಚಾರವನ್ನು ಪ್ರತಿಯೊಬ್ಬರು ಖಂಡಿಸಬೇಕು. ನಂದಿನಿ ಉತ್ಪನ್ನಗಳ ಮೇಲೆ ಅಪ್ರಚಾರ ಮಾಡಿ ಅದರ ಮಾರುಕಟ್ಟೆ ವ್ಯವಸ್ಥೆಯನ್ನು ಹಾಳು ಮಾಡಬೇಕು ಎನ್ನುವ ಕುತಂತ್ರ ದಿಂದ ಕೆಲವು ಕಾಣದ ಕೈಗಳು ಕೆಲಸ ಮಾಡುತ್ತಿವ ಅನುಮಾನವಿದೆ. ಈ ಬಗ್ಗೆ ಬಮೂಲ್ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು
ಹೊಸಕೋಟೆ ಶಿಬಿರ ಉಪ ವ್ಯವಸ್ಥಾಪಕ ಶ್ರೀರಾಮ್ ಮಾತನಾಡಿ,ಕೆಲವು ಖಾಸಗಿ ವ್ಯಕ್ತಿಗಳು ನಂದಿನಿ ಹಾಲಿನ ಮಾರುಕಟ್ಟೆಯನ್ನು ಹಾಳು ಮಾಡಬೇಕು ಎಂಬ ದುರುದ್ದೇಶವನ್ನಿಟ್ಟುಕೊಂಡು ಈ ರೀತಿಯ ಅಪಪ್ರಚಾರನ್ನು ಮಾಡುತ್ತಿದ್ದು, ನಂದಿನಿ ರೈತರಿಂದ ಕಟ್ಟಿರುವ ಸಂಸ್ಥೆಯಾಗಿದೆ.ರೈತರ ನೀಡಿರುವ ನೀಡಿರುವ ಹಾಲನ್ನು ಸಂಸ್ಕರಿಸಿ ಎಲ್ಲ ರೀತಿಯ ತಪಾಸಣೆ ಮಾಡಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.ಹಾಲಿನ ಎಲ್ಲ ರೀತಿಯ ಗುಣಮಟ್ಟವನ್ನು ಪರೀಕ್ಷೆ ಮಾಡಿದ ನಂತರವೇ ಮಾರುಕಟ್ಟೆಗೆ ರವಾನೆಯಾಗುತ್ತಿದೆ.ಉದ್ದೇಶಪೂರ್ವಕವಾಗಿ ಕೆಲವರು ನಂದಿನಿ ಬಗೆ ತಪ್ಪು ಸಂದೇಶವನ್ನು ಹರಡುತ್ತಿದ್ದು,ಇದರ ಬಗೆ ಜನರು ತಲೆಕೆಡಿಸಿಕೊಳ್ಳಬಾರದು ಎಂದರು
ಈ ಸಂದರ್ಭದಲ್ಲಿ ಡಾ.ಸಂತೋಷ್ ಕುಮಾರ್ ಎಂ.ಡಿ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳು ಹಾಜರಿದ್ದರು

