ಸೂಲಿಬೆಲೆ : ಹೈನುಗಾರಿಕೆ ಕಸಬು ಆಳವಡಿಸಿಕೊಂಡು ಸಹಕಾರ ಸಂಘಗಳ ಮೂಲಕ ಹಾಲು ಪೂರೈಕೆ ಮಾಡುತ್ತಿರುವ ಉತ್ಪಾದಕರ ಆರೋಗ್ಯ ರಕ್ಷಣೆಗೆ ಬಮೂಲ್ ಟ್ರಸ್ಟ್ ಹೆಚ್ಚು ಒತ್ತು ನೀಡುತ್ತಿದೆ ಎಂದು ಹೊಸಕೋಟೆ ಮತ ಕ್ಷೇತ್ರದ ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡ ಹೇಳಿದರು
ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹೊಸಕೋಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಲು ಸರಭರಾಜು ಮಾಡುವ ಸಕ್ರಿಯ ಸದಸ್ಯರು ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಪರಿಹಾರ ಚೆಕ್ ವಿತರಿಸಿ ಅವರು ಮಾತನಾಡಿದರು.
ಗ್ರಾಮಾಂತರ ಭಾಗಗಳಲ್ಲಿ ಹೈನುಗಾರಿಕೆಯನ್ನು ನಂಬಿಕೊ0ಡು ಆನೇಕ ಕುಟುಂಬಗಳ ಜೀವನ ನಡೆಸುತ್ತಿದ್ದು, ಹೈನುಗಾರಿಕೆ ಆವಲಂಬಿಸಿರುವ ಕುಟುಂಬಗಳಿಗೆ ಬಮೂಲ್ ನಾನಾ ರೀತಿಯಲ್ಲಿ ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತಿದೆ. ೨೦೨೫-೨೬ನೇ ಸಾಲಿನಲ್ಲಿ ಹೈನುಗಾರಿಕೆ ಮಾಡುತ್ತಿರುವ ಕುಟುಂಬದ ಸದಸ್ಯರು ಆನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆದುಕೊಂಡಿದ್ದರೆ ಅಂಥಹ ಸದಸ್ಯರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ವೈದ್ಯಕೀಯ ಪರಿಹಾರ ಚೆಕ್‌ಗಳನ್ನು ನೀಡಲಾಗುತ್ತಿದೆ. ನಕ್ಕನಹಳ್ಳಿ, ನಡುವತ್ತಿ, ಬೆಟ್ಟಹಳ್ಳಿ, ಬಿಸನಹಳ್ಳಿ, ಕಮ್ಮಸಂದ್ರ, ಬಿಸನಹಳ್ಳಿ, ಎಂ.ಸತ್ಯವಾರ ಗ್ರಾಮಗಳಲ್ಲಿ ಆನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆದ ೮ ಮಂದಿಗೆ ಚಿಕಿತ್ಸೆಗೆ ಅನುಗುಣವಾಗಿ ೧೫, ೨೦, ೨೫ ಸಾವಿರದಂತೆ ಒಟ್ಟು ೮ ಮಂದಿಗೆ ೨ ಲಕ್ಷದಷ್ಟು ಹಾಗೂ ಮರಣ ಹೊಂದಿದ ಸದಸ್ಯರ ನಾಮಿನಿಗೆ ಪರಿಹಾರ ಚೆಕ್ ನೀಡಿದೆ. ಹೈನುಗಾರರ ಹಿತ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಿ ಅವರ ಕಷ್ಟು ಸುಖಗಳಿಗೆ ನೆರೆವಾಗುವ ಪ್ರಾಮಾಣಿಕ ಪ್ರಯತ್ನ ಬಮೂಲ್ ವತಿಯಿಂದ ಮಾಡುತ್ತಿದ್ದೇನೆ ಎಂದರು.
ಹೊಸಕೋಟೆ ಶಿಬಿರ ಉಪ ವ್ಯವಸ್ಥಾಪಕ ಶ್ರೀರಾಮ್ ಮಾತನಾಡಿ, ಬಮೂಲ್ ಟ್ರಸ್ಟ್ವತಿಯಿಂದ ಹಾಲು ಉತ್ಪಾದಕರಿಗೆ ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡರ ಅನುಧಾನದಲ್ಲಿ ವರ್ಷಕ್ಕೆ ಸುಮಾರು ೧೫ ಲಕ್ಷದಷ್ಟು ವೈದ್ಯಕೀಯ ವೆಚ್ಚದ ಪರಿಹಾರವನ್ನು ಹೊಸಕೋಟೆ ತಾಲೂಕಿನ ಹಾಲು ಉತ್ಪಾದಕರಿಗೆ ನೀಡುತ್ತಿದ್ದೇವೆ. ಒಳರೋಗಿಯಾಗಿ ಹಾಲು ಉತ್ಪಾದಕರು ಚಿಕಿತ್ಸೆಯನ್ನು ಪಡೆದುಕೊಂಡಿದ್ದರೆ ಅಂಥವರಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದೆ. ಉತ್ಪಾದಕರು ಗುಣಮಟ್ಟ ಹಾಲನ್ನು ಪೂರೈಕೆ ಮಾಡಬೇಕು. ಇದರಿಂದ ಅರ್ಥಿಕವಾಗಿ ಉತ್ಪಾದಕರಿಗೂ ಹಾಗೂ ಒಕ್ಕೂಟಕ್ಕೂ ಅನುಕೂಲವಾಗಲಿದೆ. ಹಾಲು ಉತ್ಪಾದಕರ ಕಷ್ಟ ಸುಖಗಳನ್ನು ಆರಿತು ಅವರ ನೆರವಿಗೆ ಬಿ.ವಿ ಸತೀಶ್‌ಗೌಡರು ನಿಂತಿರುವುದಲ್ಲದೇ, ಇಡೀ ಹೊಸಕೋಟೆ ತಾಲೂಕಿನಲ್ಲಿ ಅತಿ ಹೆಚ್ಚು ಹಾಲು ಪೂರೈಕೆ ಮಾಡಿ ಬಮೂಲ್ ನಿರ್ದೇಶಕರಲ್ಲಿ ಮಾದರಿಯಾಗಿದ್ದಾರೆ ಎಂದರು.
ಬೆ0ಗಳೂರು ಹಾಲು ಒಕ್ಕೂಟದ ವೈದ್ಯ ಡಾ.ಸಂತೋಷ್ ಕುಮಾರ್ ಡಿ.ಎಂ ಮಾತನಾಡಿ, ಫೆಬ್ರವರಿಯಿಂದ ಮಾರ್ಚಿ ತಿಂಗಳಲ್ಲಿ ಹಾಲು ಉತ್ಪಾದನೆಯ ಗುಣಮಟ್ಟದಲ್ಲಿ ಕಡಿಮೆಯಾಗುತ್ತಿದೆ. ಈ ತಿಂಗಳಲ್ಲಿ ಗುಣಮಟ್ಟವನ್ನು ಹೈನುಗಾರರು ಕಾಪಾಡವತ್ತ ಗಮನಹರಿಸಬೇಕು. ಗುಣಮಟ್ಟ ಕಾಪಾಡಲು ಅಗತ್ಯವಾಗಿರುವ ತಾಂತ್ರಿಕ ಸಲಹೆ, ಸೂಚನೆಗಳನ್ನು ಬಮೂಲ್ ವತಿಯಿಂದ ಕಾಲ ಕಾಲಕ್ಕೆ ನೀಡುತ್ತಿದ್ದು, ಹೈನುಗಾರರು ಇದನ್ನು ಸದ್ಬಳಿಕೆ ಮಾಡಿಕೊಂಡು ಗುಣಮಟ್ಟ ಮತ್ತು ಹಾಲಿನ ಪ್ಯಾಟ್ ಹೆಚ್ಚಳಕ್ಕೆ ಒತ್ತು ನೀಡಬೇಕು ಎಂದರು
ಬಮೂಲ್ ಟ್ರಸ್ಟ್ ನವೀನ್ ಕುಮಾರ್, ಸಹಕಾರ ಬ್ಯಾಂಕ್ ಸಿಇಒ ಎಸ್.ಕೆ ವಸಂತ್‌ಕುಮಾರ್, ಕಂಬಳೀಪುರ ಗ್ರಾಪಂ ಅಧ್ಯಕ್ಷ ಮಲ್ಲಿಕಾ ಅವಿನ್, ಸಹಕಾರ ಬ್ಯಾಂಕ್ ನಿರ್ದೇಶಕ ವಿನಯ್, ಹಾಗೂ ಹಾಲು ಉತ್ಪಾದಕರು, ಸಹಕಾರ ಸಂಘದ ಕಾರ್ಯದರ್ಶಿಗಳು ಹಾಜರಿದ್ದರು.
ಕೋಟ್
ಬೇಸಿಗೆ ದಿನಗಳು ಶುರುವಾಗುತ್ತಿದ್ದು, ಹಾಲು ಉತ್ಪಾದಕರು ರಾಸುಗಳ ರಕ್ಷಣೆಗೆ ಒತ್ತು ನೀಡಬೇಕು. ಗುಣಮಟ್ಟ ಪೌಷ್ಟಿಕ ಆಹಾರ ನೀಡಿ ಗುಣಮಟ್ಟದ ಹಾಲು ಪೂರೈಕೆಗೆ ಆಧ್ಯತೆ ನೀಡಬೇಕು. ಬಮೂಲ್ ವತಿಯಿಂದ ಸಿಗುವ ಸೌಲಬ್ಯಗಳನ್ನು ಉತ್ಪಾದಕರಿಗೆ ನೀಡುವುದು ನನ್ನ ಕರ್ತವ್ಯ. ಉತ್ಪಾದಕರು ನನ್ನ ಮೇಲಿ ಇಟ್ಟಿರುವ ನಂಬಿಕೆ,ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. – ಬಿ.ವಿ ಸತೀಶ್‌ಗೌಡ | ನಿರ್ದೇಶಕರು ಬಮೂಲ್


