ಹೊಸಕೋಟೆ : ಮಾದಾರ ಸಮುದಾಯ (ಮಾದಿಗ) ಹಿತರಕ್ಷಣೆ ಹಾಗೂ ಸಮುದಾಯ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಜಿಲ್ಲೆಯಾದ್ಯಂತ ಸಂಚರಿಸಿ ಶೇ.೧೦೦ ರಷ್ಟು ಸದಸ್ಯತ್ವ ನೋಂದಾಯಿಸಿ ಸಮುದಾಯ ಸಂಘಟನೆಗೆ ಶ್ರಮಿಸುವುದಾಗಿ ಮಾದಾರ ಮಹಾಸಭಾ ಗ್ರಾಮಾಂತರ ಜಿಲ್ಲಾಧ್ಯಕ್ಷ ಹೊಸಕೋಟೆ ಡಾ.ಹೆಚ್.ಎಂ ಸುಬ್ಬರಾಜ್ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾದಾರ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮಾದಾರ ಮಹಾಸಭಾ ಸಂಸ್ಥಾಪಕ ಅಧ್ಯಕ್ಷರಾದ ಕೆ.ಹೆಚ್ ಮುನಿಯಪ್ಪ,ಮಾಜಿ ಸಂಸದ ಎ.ನಾರಾಯಣಸ್ವಾಮಿ,ಕಾರಜೋಳ ಸೇರಿದಂತೆ ರಾಜ್ಯದ ಹಿರಿಯ ಮುಖಂಡರು ನನ್ನ ಮೇಲೆ ನಂಬಿಕೆಯಿಟ್ಟು ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ನಮ್ಮ ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ಸ್ಥಾಪನೆಯಾಗಿರುವ ಈ ಸಂಘಟನೆಯಲ್ಲಿ ನನ್ನಗೆ ಕೊಟ್ಟಿರುವ ಜವಾಬ್ದಾರಿಯನ್ನು ಶೇ.೧೦೦ ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ರಚನೆಯಾಗಿರುವ ಕರ‍್ಯಕಾರಿ ಸಮಿತಿಯ ೧೫ ಜನರ ತಂಡ ಸದಸ್ಯತ್ವ ನೋಂದಣಿಗಾಗಿ ನೀಡಿರುವ ಒಂದು ತಿಂಗಳ ಗಡುವಿನಲ್ಲಿ ಸಿಪಾಯಿಗಳಂತೆ ಸಮುದಾಯದ ಏಳಿಗೆಗಾಗಿ ಕೆಲಸ ಮಾಡುತ್ತೇವೆ. ಜಿಲ್ಲೆಯಾದ್ಯಂತ ಪ್ರವಾಸ ನಡೆಸಿ ಸಮುದಾಯದ ಮುಖಂಡರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುಲು ಶಕ್ತಿ ಮೀರಿ ಸಮುದಾಯದವನ್ನು ಸಂಘಟಿಸುವ0ತೆ ಕೆಲಸ ಮಾಡುತ್ತೇವೆ ಎಂದರು.
ಮಾದಾರ ಮಹಾಸಭಾ ಜಿಲ್ಲೆ ಉಪಾಧ್ಯಕ್ಷರಾಗಿ ವಿ.ನಾರಾಯಣಸ್ವಾಮಿ, ಕರ‍್ಯದರ್ಶಿಯಾಗಿ ನಾಗರಾಜ್, ಖಂಜಾಚಿಯಾಗಿ ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಯಿತು. ಜಿಲ್ಲೆಯ ನಾಲ್ಕು ತಾಲೂಕು ಮಟ್ಟದ ಸಮಿತಿಗಳನ್ನು ಮುಂದಿನ ದಿನಗಳಲ್ಲಿ ರಚನೆ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷ ಡಾ.ಹೆಚ್.ಎಂ ಸುಬ್ಬರಾಜ್ ತಿಳಿಸಿದ್ದಾರೆ.


ಕೋಟ್
ರಾಜ್ಯದಲ್ಲಿ ಮಾದಾರ ಮಹಾಸಭಾ ಸಂಘಟನೆಯನ್ನು ಸ್ಥಾಪನೆ ಮಾಡಿದ್ದು,ಜಿಲ್ಲಾಧ್ಯಕ್ಷರಾಗಿ ಡಾ.ಹೆಚ್.ಎಂ ಸುಬ್ಬರಾಜ್ ಆಯ್ಕೆಯಾಗಿದ್ದಾರೆ. ಒಟ್ಟು ೧೫ ಜನರ ತಂಡದಲ್ಲಿ ೯ ಜನ ಕರ‍್ಯಕಾರಿ ಸಮಿತಿ ಸದಸ್ಯರು,೬ ಜನ ವಿಶೇಷ ಆಹ್ವಾನಿತರು ಇರಲಿದ್ದಾರೆ. ಪ್ರತಿ ತಾಲೂಕಿನಲ್ಲಿ ೧೫ ಜನರ ತಾಲೂಕು ಸಮಿತಿ ರಚಿಸಿ ಒಂದು ತಿಂಗಳೊಳಗೆ ಸಮುದಾಯದ ಸದಸ್ಯತ್ವ ನೋಂದಣಿ ಮಾಡಿಸಬೇಕು- ಕೆ.ಹೆಚ್.ಮುನಿಯಪ್ಪ | ಸಚಿವರು,ಸಂಸ್ಥಾಪಕರು ಮಾದಾರ ಮಹಾಸಭಾ

